Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Modi strategy ವಿವಾದಕ್ಕೊಳಗಾಗಿರುವ ಶಿಕ್ಷಣ ಇಲಾಖೆ ಹೊಣೆಯನ್ನು ಪ್ರಲ್ಹಾದ ಜೋಶಿಗೇ ನೀಡಿದ್ದೇಕೆ ಮೋದಿ? ತಂತ್ರಗಾರಿಕೆ ಏನು?
ಕರ್ನಾಟಕದೇಶಪ್ರಮುಖ

Modi strategy ವಿವಾದಕ್ಕೊಳಗಾಗಿರುವ ಶಿಕ್ಷಣ ಇಲಾಖೆ ಹೊಣೆಯನ್ನು ಪ್ರಲ್ಹಾದ ಜೋಶಿಗೇ ನೀಡಿದ್ದೇಕೆ ಮೋದಿ? ತಂತ್ರಗಾರಿಕೆ ಏನು?

Share
2 Min Read
SHARE

newsics.com | ನ್ಯೂಸಿಕ್ಸ್

ನವದೆಹಲಿ: ಶಿಕ್ಷಣ ಸಚಿವ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಶಿಕ್ಷಣ ಇಲಾಖೆ ಜವಾಬ್ದಾರಿಯನ್ನು ಪ್ರಲ್ಹಾದ್ ಜೋಶಿ ಅವರಿಗೆ ನೀಡಲಾಗಿದೆ.

ಕೇಂದ್ರ ಅಹಾರ ಮತ್ತು ನಾಗರೀಕ, ನವೀಕರಿಸಬಹುದಾದ ಇಂಧನ ಸಚಿವರಾಗಿರುವ ಪ್ರಲ್ಹಾದ್ ಜೋಶಿಗೆ ಹೆಚ್ಚುವರಿಯಾಗಿ ಶಿಕ್ಷಣ ಇಲಾಖೆ ಜವಾಬ್ದಾರಿ ನೀಡಲಾಗಿದೆ.

ಇಡೀ ದೇಶವೇ ಶಿಕ್ಷಣ ಇಲಾಖೆ ಮೇಲೆ ಕಣ್ಣಿಟ್ಟಿರುವಾಗ ಈ ಜವಾಬ್ದಾರಿಯನ್ನು ಮೋದಿ ನೇರವಾಗಿ ಪ್ರಲ್ಹಾದ್ ಜೋಶಿಗೆ ನೀಡಿದ ಹಿಂದಿನ ಅಸಲಿ ಕಾರಣವೇನು?

ಪರೀಕ್ಷಾ ಅಕ್ರಮಗಳಿಗೆ ತಡೆ

ನೀಟ್ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಇಡೀ ದೇಶಾದ್ಯಂತ ಭಾರಿ ಸದ್ದು ಮಾಡಿದೆ. ಈ ಘಟನೆಯಿಂದ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ, ಪಾರದರ್ಶಕತೆ, ಭ್ರಷ್ಟಾಚಾರ, ಅಕ್ರಮ ಮುಕ್ತ ಮಾಡಬೇಕು ಅನ್ನೋ ಕೂಗು ಜೋರಾಗಿ ಕೇಳಿಸುತ್ತಿದೆ.

ದೇಶದಲ್ಲೇ ಕೋಲಾಹಲ ಎದ್ದಿರುವ ಸಮಯದಲ್ಲಿ ಶಿಕ್ಷಣ ಕ್ಷೇತ್ರವನ್ನು ಮರಳಿ ಹಳಿಗೆ ತರುವುದು ಹಾಗೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ವ್ಯವಸ್ಥೆಯನ್ನು ಸಂಪೂರ್ಣವಾಗಿ ಶುದ್ಧೀಕರಿಸುವುದು ನೂತನ ಸಚಿವರ ಮೊದಲ ಆದ್ಯತೆಯಾಗಿದೆ.

ಜೀರೊ ಪೇಪರ್ ಲೀಕ್, ಪ್ರಶ್ನೆಪತ್ರಿಕೆ ಸೋರಿಕೆ ತಡೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಹಾಗೂ ನೀಟ್ ಪರೀಕ್ಷೆಯನ್ನು ಒಎಂಆರ್ (OMR) ಮಾದರಿಯಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ (CBT) ಹಂತ-ಹಂತವಾಗಿ ಬದಲಾಯಿಸುವಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ದೃಢ ನಾಯಕತ್ವದ ಅಗತ್ಯವಿತ್ತು. ಇದಕ್ಕೆ ಅನುಭವಿ ಜೋಶಿ ಸೂಕ್ತ ಎನ್ನುವ ಕಾರಣದಿಂದ ಸದ್ದು ಗದ್ದಲವಿಲ್ಲದೆ ಆಯ್ಕೆ ನಡೆದಿದೆ.

ಮೋದಿಯ ವಿಶ್ವಾಸಾರ್ಹ ನಾಯಕ

ಪ್ರಲ್ಹಾದ್ ಜೋಶಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ 5 ಬಾರಿ ಗೆದ್ದು ಸಂಸದರಾಗಿದ್ದಾರೆ. ಮೋದಿ ಕ್ಯಾಬಿನೆಟ್‌ನಲ್ಲಿ ಹಲವು ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಹೈಕಮಾಂಡ್‌ನ ಅತ್ಯಂತ ವಿಶ್ವಾಸಾರ್ಹ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

ಇತ್ತ ಆರ್‌ಎಸ್‌ಎಸ್ ಕಟ್ಟಾಳುವಾಗಿರುವ ಕಾರಣ ಸಂಘ ಪರಿವಾರದ ಸಂಪೂರ್ಣ ಬೆಂಬಲವೂ ಪ್ರಲ್ಹಾದ್ ಜೋಶಿಗಿದೆ. ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಜೋಶಿ, ವಿರೋಧ ಪಕ್ಷಗಳ ಕಠಿಣ ಸವಾಲುಗಳನ್ನು ಮತ್ತು ಬಿಕ್ಕಟ್ಟುಗಳನ್ನು ಜಾಣ್ಮೆಯಿಂದ ಎದುರಿಸುವಲ್ಲಿ ಎತ್ತಿದ ಕೈ.

ಕೇಂದ್ರ ಸರ್ಕಾರ ಹಾಗೂ ವಿದ್ಯಾರ್ಥಿ ಸಂಘಟನೆಗಳ ನಡುವೆ ವಿಶ್ವಾಸವನ್ನು ಮರುಸ್ಥಾಪಿಸಲು ಜೋಶಿ ಅವರಂತಹ ಅನುಭವಿ ಸಚಿವರೇ ಸೂಕ್ತ ಎಂಬುದು ಮೋದಿ ಸೇರಿದಂತೆ ಬಿಜೆಪಿ ಹೈಕಮಾಂಡ್ ನಿರ್ಧಾರವಾಗಿತ್ತು.

ಹೊಸ ವ್ಯವಸ್ಥೆ, ಕಠಿಣ ಅಭ್ಯಾಸ ಮಾಡಿದವರು ಮಾತ್ರ ಪಾಸ್

ದೇಶದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗೆ ಆಗ್ರಹಿಸಿದ ಪ್ರತಿಯೊಬ್ಬರಿಗೂ ಪ್ರಧಾನಿ ಮೋದಿ ಗಿಫ್ಟ್ ನೀಡಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಎಲ್ಲಾ ಪರೀಕ್ಷೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತಷ್ಟು ಕಠಿಣವಾಗಲಿವೆ.

ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ‘ರಾಷ್ಟ್ರೀಯ ಶಿಕ್ಷಣ ನೀತಿ’ (NEP 2020) ದೇಶಾದ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಸಂಯೋಜಿಸುವುದು ನೂತನ ಸಚಿವರ ಮುಂದಿರುವ ಪ್ರಮುಖ ಸವಾಲು.

ಶೈಕ್ಷಣಿಕ ಸುಧಾರಣೆಗಳು ಹಾಗೂ ಇಲಾಖೆಯ ಆಡಳಿತಾತ್ಮಕ ಕೆಲಸಗಳಿಗೆ ಹೊಸ ವೇಗ ನೀಡಲು ಜೋಶಿ ಅವರ ಶಿಸ್ತುಬದ್ಧ ಕಾರ್ಯವೈಖರಿ ನೆರವಾಗಲಿದೆ ಎಂಬುದು ಹೈಕಮಾಂಡ್ ಲೆಕ್ಕಾಚಾರವಾಗಿದೆ.

Trending News ಕೇಂದ್ರದ ಹೊಸ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಓದಿದ್ದೇನು? ಅವರ ಹಿನ್ನೆಲೆ ಏನು?

Lunar Eclipse- Raksha Bandhan ಈ ಬಾರಿ ರಕ್ಷಾಬಂಧನದಂದೇ ಚಂದ್ರಗ್ರಹಣ: ಹಬ್ಬದ ಆಚರಣೆಗೆ ಅಡ್ಡಿಯಾಗುತ್ತಾ?

BUCK MOON ಅಪರೂಪದ ಖಗೋಳ ವಿಸ್ಮಯ: ಜುಲೈ 29ಕ್ಕೆ ಆಕರ್ಷಕ ‘ಬಕ್ ಮೂನ್’ ಪ್ರತ್ಯಕ್ಷ!

Dipke Viral post ಇದಿನ್ನೂ ಆರಂಭವಷ್ಟೇ, ಸಾಗಬೇಕಾದ ಹಾದಿ ಬಹುದೂರವಿದೆ: ಅಭಿಜಿತ್ ದೀಪ್ಕೆ ವಿಡಿಯೊ ಪೋಸ್ಟ್ ವೈರಲ್

PM Modi to visit Mysore ಆಗಸ್ಟ್ 1ರಂದು ಮೈಸೂರಿಗೆ ಬರಲಿದ್ದಾರೆ‌ ಪ್ರಧಾನಿ ಮೋದಿ

Slap the bank manager ಮಾಜಿ ಸಿಎಂ ಕರುಣಾನಿಧಿ‌ ಮೊಮ್ಮಗಳು ಬ್ಯಾಂಕ್‌ ಮ್ಯಾನೇಜರ್‌ ಕೆನ್ನೆಗೆ ಹೊಡೆದಿದ್ದೇಕೆ? ಮುಂದೇನಾಯ್ತು? ವಿಡಿಯೋ ನೋಡಿ

TAGGED:#educationministry #uniongovernment #modi #pralhadjoshi #strategy #news #newsics #kannadanews
Share This Article
Facebook Twitter Copy Link Print
Previous Article Objection to Rain Holiday ಮಳೆ ರಜೆ ಹೆಚ್ಚಿದ್ದಕ್ಕೆ ಆಕ್ಷೇಪ: ದಕ್ಷಿಣ ಕನ್ನಡದಲ್ಲಿನ್ನು ತಾಲೂಕುವಾರು ರಜೆ ಘೋಷಣೆಗೆ ನಿರ್ಧಾರ, ಇದೇ ನೀತಿ ರಾಜ್ಯಾದ್ಯಂತ ಜಾರಿಯಾಗುತ್ತಾ?
Next Article Mother loses life ಪತಿಯ ಅಕ್ರಮ ಸಂಬಂಧ ತಂದ ನೋವು: 7 ತಿಂಗಳ ಹಸುಗೂಸಿನೆದುರೇ ಜೀವ ಕಳೆದುಕೊಂಡ ತಾಯಿ! ಸಾಯುವಾಗ ಗಂಡನಿಗೆ ವಿಡಿಯೋ ಕಾಲ್‌ನಲ್ಲಿ ಹೇಳಿದ್ದೇನು?

Popular Posts

High court order ಮುಸ್ಲಿಂ ವ್ಯಕ್ತಿಯ ಮೊದಲ ಮದುವೆ ರದ್ದಾಗದಿದ್ರೆ 2ನೇ ವಿವಾಹ ಮಾನ್ಯವಲ್ಲ: ಕರ್ನಾಟಕ ಹೈಕೋರ್ಟ್

2 Min Read

CWG 2026 ಜಿಮ್ನಾಸ್ಟಿಕ್​ ವೇಳೆ ನೆಲಕ್ಕೆ ಬಿದ್ದ ಅಥ್ಲೀಟ್! ಬೆಚ್ಚಿಬೀಳಿಸುವ ವಿಡಿಯೋ​ ನೋಡಿ

1 Min Read

Mother loses life ಪತಿಯ ಅಕ್ರಮ ಸಂಬಂಧ ತಂದ ನೋವು: 7 ತಿಂಗಳ ಹಸುಗೂಸಿನೆದುರೇ ಜೀವ ಕಳೆದುಕೊಂಡ ತಾಯಿ! ಸಾಯುವಾಗ ಗಂಡನಿಗೆ ವಿಡಿಯೋ ಕಾಲ್‌ನಲ್ಲಿ ಹೇಳಿದ್ದೇನು?

1 Min Read

Modi strategy ವಿವಾದಕ್ಕೊಳಗಾಗಿರುವ ಶಿಕ್ಷಣ ಇಲಾಖೆ ಹೊಣೆಯನ್ನು ಪ್ರಲ್ಹಾದ ಜೋಶಿಗೇ ನೀಡಿದ್ದೇಕೆ ಮೋದಿ? ತಂತ್ರಗಾರಿಕೆ ಏನು?

2 Min Read

You Might Also Like

ಕರ್ನಾಟಕಪ್ರಮುಖ

Objection to Rain Holiday ಮಳೆ ರಜೆ ಹೆಚ್ಚಿದ್ದಕ್ಕೆ ಆಕ್ಷೇಪ: ದಕ್ಷಿಣ ಕನ್ನಡದಲ್ಲಿನ್ನು ತಾಲೂಕುವಾರು ರಜೆ ಘೋಷಣೆಗೆ ನಿರ್ಧಾರ, ಇದೇ ನೀತಿ ರಾಜ್ಯಾದ್ಯಂತ ಜಾರಿಯಾಗುತ್ತಾ?

2 Min Read
ದೇಶಪ್ರಮುಖವೈರಲ್

Slap the bank manager ಮಾಜಿ ಸಿಎಂ ಕರುಣಾನಿಧಿ‌ ಮೊಮ್ಮಗಳು ಬ್ಯಾಂಕ್‌ ಮ್ಯಾನೇಜರ್‌ ಕೆನ್ನೆಗೆ ಹೊಡೆದಿದ್ದೇಕೆ? ಮುಂದೇನಾಯ್ತು? ವಿಡಿಯೋ ನೋಡಿ

2 Min Read
ಕರ್ನಾಟಕದೇಶಪ್ರಮುಖ

PM Modi to visit Mysore ಆಗಸ್ಟ್ 1ರಂದು ಮೈಸೂರಿಗೆ ಬರಲಿದ್ದಾರೆ‌ ಪ್ರಧಾನಿ ಮೋದಿ

1 Min Read
ದೇಶಪ್ರಮುಖವೈರಲ್

Dipke Viral post ಇದಿನ್ನೂ ಆರಂಭವಷ್ಟೇ, ಸಾಗಬೇಕಾದ ಹಾದಿ ಬಹುದೂರವಿದೆ: ಅಭಿಜಿತ್ ದೀಪ್ಕೆ ವಿಡಿಯೊ ಪೋಸ್ಟ್ ವೈರಲ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?