newsics.com | ನ್ಯೂಸಿಕ್ಸ್
ವಿಜಯಪುರ: ಪತಿಗೆ ನಿದ್ರೆ ಮಾತ್ರೆ ನೀಡಿ ಉಸಿರುಗಟ್ಟಿಸಿ ಕೊಂದ ಪತ್ನಿಯೊಬ್ಬಳು, ಹೃದಯಾಘಾತದಿಂದ ಸಂಭವಿಸಿದೆ ಎಂದು ನಂಬಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಪ್ರಿಯಕರನ ಜೊತೆ ನಡೆಸಿದ್ದ ಮೊಬೈಲ್ ಚಾಟಿಂಗ್ ಹಾಗೂ ವಿಡಿಯೋ ಕಾಲ್ ಸಾಕ್ಷ್ಯಗಳಿಂದಾಗಿ ಪತ್ನಿ ಭಾಗ್ಯಶ್ರೀಯ ಅಸಲಿ ಬಣ್ಣ ಬಯಲಾಗಿದೆ.
ಮೃತ ಅರುಣಕುಮಾರ್ ಬಡಿಗೇರ (28) ಸಾವು ಸಹಜ ಎಂದು ಭಾವಿಸಿದ್ದ ಕುಟುಂಬಸ್ಥರಿಗೆ, ಪತ್ನಿಯ ನಡವಳಿಕೆಯಿಂದ ಅನುಮಾನ ಮೂಡಿ ಮೊಬೈಲ್ ತಪಾಸಣೆ ನಡೆಸಿದಾಗ ಅಕ್ರಮ ಸಂಬಂಧ ಹಾಗೂ ಕೊಲೆಯ ಸಂಚು ಅರಿವಿಗೆ ಬಂದಿದೆ. ಸದ್ಯ ಮೃತನ ಸಹೋದರಿ ನೀಡಿದ ದೂರಿನನ್ವಯ ಇಂಡಿ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ನಿಯ ವಿಚಾರಣೆ ನಡೆಸುತ್ತಿದ್ದಾರೆ.
Crime Case ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಶ*ವ ಪತ್ತೆ; ಕೊಲೆ ಶಂಕೆ ವ್ಯಕ್ತಪಡಿಸಿದ ಪೋಷಕರು