Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Landslide ವರುಣನ ಆರ್ಭಟ; ಗದ್ದೆ-ತೋಟಗಳು ಜಲಾವೃತ, ಹೆದ್ದಾರಿಯಲ್ಲಿ ಭೂಕುಸಿತ
ಪ್ರಮುಖಕರ್ನಾಟಕ

Landslide ವರುಣನ ಆರ್ಭಟ; ಗದ್ದೆ-ತೋಟಗಳು ಜಲಾವೃತ, ಹೆದ್ದಾರಿಯಲ್ಲಿ ಭೂಕುಸಿತ

Share
1 Min Read
SHARE

newsics.com | ನ್ಯೂಸಿಕ್ಸ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮುಂಗಾರು ಮಳೆ ತೀವ್ರಗೊಂಡಿದ್ದು, ಮಲೆನಾಡು ಭಾಗದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಶಿರಸಿ ತಾಲೂಕಿನ ಕುಳವೆ ಪಂಚಾಯತ್ ವ್ಯಾಪ್ತಿಯ ಕಾಗೇರಿ ಗ್ರಾಮದಲ್ಲಿ ಬರೂರು ಹೊಳೆ ಉಕ್ಕಿ ಹರಿಯುತ್ತಿದ್ದು, ನೂರಾರು ಎಕರೆ ಭತ್ತದ ಗದ್ದೆ ಹಾಗೂ ತೋಟಗಳು ಸಂಪೂರ್ಣವಾಗಿ ನೀರುಪಾಲಾಗಿವೆ. ರಸ್ತೆಗಳ ಮೇಲೂ ನೀರು ಹರಿಯುತ್ತಿರುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

 

ಇತ್ತ ಅಘನಾಶಿನಿ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ಹೊಸಗದ್ದೆ ಬಳಿ ನದಿ ನೀರಿನಲ್ಲಿ 12 ಅಡಿ ಉದ್ದದ ಬೃಹತ್ ಹೆಬ್ಬಾವೊಂದು ತೇಲಿ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇನ್ನು ಕಾರವಾರದ ಮುದುಗಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ರಸ್ತೆಗೆ ಕಲ್ಲುಬಂಡೆಗಳು ಉರುಳಿಬಿದ್ದಿವೆ. ಆದರೆ ಈ ಮಾರ್ಗದಲ್ಲಿ ಈಗಾಗಲೇ ಸಂಚಾರ ನಿರ್ಬಂಧಿಸಿದ್ದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ.

ಇನ್ನೊಂದೆಡೆ ಜೋಯಿಡಾದ ಕಾತೇಲಿ ಗ್ರಾಮದಲ್ಲಿ ಮನೆಯೊಂದರ ಮೇಲೆ ಅಡಿಕೆ ಮರ ಬಿದ್ದು ಆಸ್ತಿಪಾಸ್ತಿ ಹಾನಿಯಾಗಿದ್ದು, ನಿವಾಸಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ನಡುವೆ, ಹುಬ್ಬಳ್ಳಿ-ಧಾರವಾಡ ಹಾಗೂ ಯಲ್ಲಾಪುರ ಭಾಗದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಬೇಡ್ತಿ (ಗಂಗಾವಳಿ) ನದಿ ಮೈದುಂಬಿ ಹರಿಯುತ್ತಿದ್ದು, ಪ್ರಸಿದ್ಧ ಮಾಗೋಡು ಜಲಪಾತ ಭೋರ್ಗರೆಯುತ್ತಾ ಪ್ರಕೃತಿ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.

 

Rain Alert ಭಾರಿ ಮಳೆ ಎಚ್ಚರಿಕೆ; 4 ದಿನ 17 ಜಿಲ್ಲೆಗಳಲ್ಲಿ ಸುರಿಯಲಿದೆ ಧಾರಾಕಾರ ಮಳೆ

TAGGED:#Rain #Uttara kannada #landslide #news #newsics
Share This Article
Facebook Twitter Copy Link Print
Previous Article Rain Alert ಭಾರಿ ಮಳೆ ಎಚ್ಚರಿಕೆ; 4 ದಿನ 17 ಜಿಲ್ಲೆಗಳಲ್ಲಿ ಸುರಿಯಲಿದೆ ಧಾರಾಕಾರ ಮಳೆ
Next Article Shocking ಹೃದಯಾಘಾತ ಎಂದಿದ್ದ ಪತ್ನಿಯೇ ಹಂತಕಿ? ಮೊಬೈಲ್ ಚಾಟಿಂಗ್‌ನಿಂದ ಬಯಲಾಯ್ತು ಕೊ*ಲೆ ರಹಸ್ಯ

Popular Posts

Russia Ukraine war ಸೇನಾ ಕೈಗಾರಿಕೆ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ: 6 ಸಾ*ವು, 26 ಮಂದಿಗೆ ಗಾಯ

1 Min Read

Clash for misbehave ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಚುಡಾವಣೆ: ಎರಡು ಗ್ರಾಮಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆ!

1 Min Read

PM Narendra Modi ಪರೀಕ್ಷಾ ಅಕ್ರಮ ತಡೆಗೆ ಕೇಂದ್ರ ಮಾಸ್ಟರ್ ಪ್ಲಾನ್ ; 10 ವರ್ಷ ಜೈಲು, ₹10 ಕೋಟಿ ದಂಡಕ್ಕೆ ಕೇಂದ್ರ ಸಂಪುಟ ಸಮ್ಮತಿ

1 Min Read

Humen bomber attack ಭೀಕರ ಆತ್ಮಾ*ಹುತಿ ದಾಳಿ: 12 ಸೈನಿಕರು ಸೇರಿ 15 ಮಂದಿ ದಾರುಣ ಸಾವು

1 Min Read

You Might Also Like

ಪ್ರಮುಖCrimeಕರ್ನಾಟಕ

Shocking ಹೃದಯಾಘಾತ ಎಂದಿದ್ದ ಪತ್ನಿಯೇ ಹಂತಕಿ? ಮೊಬೈಲ್ ಚಾಟಿಂಗ್‌ನಿಂದ ಬಯಲಾಯ್ತು ಕೊ*ಲೆ ರಹಸ್ಯ

1 Min Read
ಪ್ರಮುಖಕರ್ನಾಟಕ

Rain Alert ಭಾರಿ ಮಳೆ ಎಚ್ಚರಿಕೆ; 4 ದಿನ 17 ಜಿಲ್ಲೆಗಳಲ್ಲಿ ಸುರಿಯಲಿದೆ ಧಾರಾಕಾರ ಮಳೆ

1 Min Read
ಪ್ರಮುಖCrimeಕರ್ನಾಟಕ

Crime Case ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಶ*ವ ಪತ್ತೆ; ಕೊಲೆ ಶಂಕೆ ವ್ಯಕ್ತಪಡಿಸಿದ ಪೋಷಕರು

0 Min Read
ದೇಶಪ್ರಮುಖ

Strange marriage ಒಬ್ಬನನ್ನೇ ಮದುವೆಯಾದ ಮೂವರು ಸಹೋದರಿಯರು! ಯಾಕೆ ಹೀಗೆ? ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?