Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Uber Intercity Report ದೇಶದ ಟಾಪ್ ‘ಇಂಟರ್‌ಸಿಟಿ’ ಮಾರ್ಗಗಳಲ್ಲಿ ಬೆಂಗಳೂರು-ಮೈಸೂರಿಗೆ 3ನೇ ಸ್ಥಾನ
ಪ್ರಮುಖಕರ್ನಾಟಕ

Uber Intercity Report ದೇಶದ ಟಾಪ್ ‘ಇಂಟರ್‌ಸಿಟಿ’ ಮಾರ್ಗಗಳಲ್ಲಿ ಬೆಂಗಳೂರು-ಮೈಸೂರಿಗೆ 3ನೇ ಸ್ಥಾನ

Share
1 Min Read
SHARE

newsics.com | ನ್ಯೂಸಿಕ್ಸ್

ಬೆಂಗಳೂರು; ರಾಜಧಾನಿಯ ಹೆದ್ದಾರಿಗಳಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ರಸ್ತೆಗಳ ಸುಧಾರಣೆಯ ನಡುವೆ, ನಮ್ಮ ಕರ್ನಾಟಕದ ‘ಬೆಂಗಳೂರು-ಮೈಸೂರು’ ಕಾರಿಡಾರ್‌ಗೆ ಜಾಗತಿಕ ಮಟ್ಟದ ಮಾನ್ಯತೆ ಲಭಿಸಿದೆ. ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ಜನರು ಕಾರು ಹಾಗೂ ಟ್ಯಾಕ್ಸಿಗಳ ಮೂಲಕ ಸಂಚರಿಸುವ ಹೆದ್ದಾರಿಗಳ ಪಟ್ಟಿಯಲ್ಲಿ ಬೆಂಗಳೂರು-ಮೈಸೂರು ರಸ್ತೆ ಬರೋಬ್ಬರಿ 3ನೇ ಶ್ರೇಯಾಂಕವನ್ನು ಪಡೆದುಕೊಂಡಿದೆ. ಜಾಗತಿಕ ಟ್ಯಾಕ್ಸಿ ಸೇವಾ ಸಂಸ್ಥೆ ‘ಉಬರ್’ ಬಿಡುಗಡೆ ಮಾಡಿರುವ ‘ಇಂಟರ್‌ಸಿಟಿ ಟ್ರಾವೆಲ್ ಇಂಡೆಕ್ಸ್’ ವರದಿಯು ಈ ಮಹತ್ವದ ವಿಷಯವನ್ನು ಬಹಿರಂಗಪಡಿಸಿದೆ.

 

 

ಉಬರ್ ಸಂಸ್ಥೆಯು 2026ರ ಏಪ್ರಿಲ್‌ನಿಂದ ಜೂನ್‌ವರೆಗಿನ ಪ್ರಯಾಣದ ದತ್ತಾಂಶಗಳನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಿದೆ. ದೇಶದಲ್ಲೇ ಗರಿಷ್ಠ ಸವಾರಿ ಕಂಡ ಬ್ಯುಸಿ ಮಾರ್ಗಗಳ ಪಟ್ಟಿಯಲ್ಲಿ ಮುಂಬೈ-ಪುಣೆ ಪ್ರಥಮ ಸ್ಥಾನ ಹಾಗೂ ದೆಹಲಿ-ಆಗ್ರಾ ದ್ವಿತೀಯ ಸ್ಥಾನದಲ್ಲಿದ್ದರೆ, ನಮ್ಮ ಬೆಂಗಳೂರು-ಮೈಸೂರು ಮಾರ್ಗ ತೃತೀಯ ಸ್ಥಾನ ಗಿಟ್ಟಿಸಿಕೊಂಡಿದೆ. ನಂತರದ ಸ್ಥಾನಗಳಲ್ಲಿ ಲಕ್ನೋ-ಕಾನ್ಪುರ ಹಾಗೂ ಅಹಮದಾಬಾದ್-ವಡೋದರಾ ಮಾರ್ಗಗಳಿವೆ.

ಇಷ್ಟೇ ಅಲ್ಲದೆ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರ್ಗಗಳ ಪಟ್ಟಿಯಲ್ಲೂ ಬೆಂಗಳೂರು-ಮೈಸೂರು ಕಾರಿಡಾರ್ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಉಬರ್ ಗ್ರಾಹಕರು ನೆಚ್ಚಿಕೊಂಡಿರುವ ಧಾರ್ಮಿಕ ಹಾಗೂ ಪಾರಂಪರಿಕ ತಾಣಗಳಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ದೇಶದಲ್ಲೇ 2ನೇ ಅತ್ಯಂತ ಜನಪ್ರಿಯ ನಗರವಾಗಿ ಹೊರಹೊಮ್ಮಿದೆ. ಇನ್ನು ಬೆಂಗಳೂರಿನ ನಿವಾಸಿಗಳು ಒಂದೇ ದಿನದಲ್ಲಿ ಹೋಗಿ ಬರಲು ಉಬರ್ ಮೂಲಕ ಹೆಚ್ಚಾಗಿ ರೌಂಡ್-ಟ್ರಿಪ್ ಬುಕ್ ಮಾಡುವ ತಾಣಗಳಾಗಿ ನಂದಿ ಬೆಟ್ಟ, ಮಾಗಡಿ, ತಮಿಳುನಾಡಿನ ಧರ್ಮಪುರಿ ಹಾಗೂ ಮಂಡ್ಯ ನಗರಗಳು ಗುರುತಿಸಿಕೊಂಡಿವೆ.

BMRCL ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್; ಶೇ.12ರಷ್ಟು ಟಿಕೆಟ್ ದರ ಏರಿಕೆಗೆ BMRCL ಪ್ರಸ್ತಾಪ

TAGGED:#Mysuru #Bengaluru #Highway #news #newsics
Share This Article
Facebook Twitter Copy Link Print
Previous Article BMRCL ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್; ಶೇ.12ರಷ್ಟು ಟಿಕೆಟ್ ದರ ಏರಿಕೆಗೆ BMRCL ಪ್ರಸ್ತಾಪ
Next Article Tragedy ಭೀಕರ ದುರಂತ; ಟಾಟಾ ಸುಮೋ ವಾಹನದ ಮೇಲೆ ಬೃಹತ್ ಬಂಡೆ ಕುಸಿದು 13 ಪ್ರಯಾಣಿಕರು ದುರ್ಮರಣ

Popular Posts

Landslide ವರುಣನ ಆರ್ಭಟ; ಗದ್ದೆ-ತೋಟಗಳು ಜಲಾವೃತ, ಹೆದ್ದಾರಿಯಲ್ಲಿ ಭೂಕುಸಿತ

1 Min Read

Rain Alert ಭಾರಿ ಮಳೆ ಎಚ್ಚರಿಕೆ; 4 ದಿನ 17 ಜಿಲ್ಲೆಗಳಲ್ಲಿ ಸುರಿಯಲಿದೆ ಧಾರಾಕಾರ ಮಳೆ

1 Min Read

Crime Case ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಶ*ವ ಪತ್ತೆ; ಕೊಲೆ ಶಂಕೆ ವ್ಯಕ್ತಪಡಿಸಿದ ಪೋಷಕರು

0 Min Read

Strange marriage ಒಬ್ಬನನ್ನೇ ಮದುವೆಯಾದ ಮೂವರು ಸಹೋದರಿಯರು! ಯಾಕೆ ಹೀಗೆ? ವಿಡಿಯೋ ನೋಡಿ

1 Min Read

You Might Also Like

ಪ್ರಮುಖCrimeದೇಶ

Tragedy ಭೀಕರ ದುರಂತ; ಟಾಟಾ ಸುಮೋ ವಾಹನದ ಮೇಲೆ ಬೃಹತ್ ಬಂಡೆ ಕುಸಿದು 13 ಪ್ರಯಾಣಿಕರು ದುರ್ಮರಣ

1 Min Read
ಪ್ರಮುಖಕರ್ನಾಟಕ

BMRCL ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್; ಶೇ.12ರಷ್ಟು ಟಿಕೆಟ್ ದರ ಏರಿಕೆಗೆ BMRCL ಪ್ರಸ್ತಾಪ

1 Min Read
ಪ್ರಮುಖಕರ್ನಾಟಕ

Cabinet Expansion ಕರ್ನಾಟಕ ಕಾಂಗ್ರೆಸ್‌ ಸಂಪುಟ ಸರ್ಜರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್? ಯಾರಿಗೆ ಸಿಗಲಿದೆ ಮಂತ್ರಿಗಿರಿ? ಇಲ್ಲಿದೆ ಮಾಹಿತಿ

2 Min Read
ಪ್ರಮುಖದೇಶ

British Airways ಮೂವರೂ ಪೈಲಟ್‌ಗಳು ಅಸ್ವಸ್ಥ; 30,000 ಅಡಿ ಎತ್ತರದಲ್ಲಿ ಬ್ರಿಟಿಷ್ ಏರ್‌ವೇಸ್ ವಿಮಾನಕ್ಕೆ ಎದುರಾಯ್ತು ಭಾರೀ ದುರಂತ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?