newsics.com
ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಕುರಿತಂತೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಶನಿವಾರ ರಾಜಭವನ ಚಲೋ ಹೋರಾಟ ನಡೆಸಿತು.
ಈ ಮಧ್ಯೆ, ಮುಡಾ ಪ್ರಕರಣದ ವಿವಾದ ಶುರುವಾದ ಬಳಿಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿರುವುದು ಸುಳ್ಳಲ್ಲ. ಸಿಎಂ ಹಿಂದೆ ಡಿಸಿಎಂ ಬಂಡೆಯಂತೆ ನಿಂತಿದ್ದಾರೆ.
ಇವತ್ತು ಕಾಂಗ್ರೆಸ್ ಪಕ್ಷದ ಮಂತ್ರಿಗಳು, ಶಾಸಕರು, ಸಂಸದರು ಮತ್ತು ಕಾರ್ಯಕರ್ತರು ರಾಜ್ಯಪಾಲರ ಕ್ರಮದ ವಿರುದ್ಧ ವಿಧಾನಸೌಧದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಧರಣಿ ಕೂತಾಗ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆತ್ಮೀಯವಾಗಿ ಮಾತನಾಡಿದರು.
ಧರಣಿಗೆ ಕೂತ ಸಚಿವರು, ನಾಯಕರ ಕೈಗಳಲ್ಲಿ ರಾಜ್ಯಪಾಲರ ವಿರುದ್ಧ ಬರೆದ ಪ್ಲೆಕಾರ್ಡ್ ಗಳಿದ್ದವು.