newsics.com
ಪರಪ್ಪನ ಅಗ್ರಹಾರದಲ್ಲಿ ಧಮ್ ಹೊಡ್ದು, ನಟೋರಿಯಸ್ ರೌಡಿ ಜೊತೆ ಖಾಸ್‌ಬಾತ್ ನಡೆಸಿದ ಕಾರಣಕ್ಕೆ ಬೆಂಗಳೂರಿಂದ ಬಳ್ಳಾರಿಗೆ ದರ್ಶನರನ್ನ ಸ್ಥಳಾಂತರ ಮಾಡಲಾಗ್ತಿತ್ತು. ಆದ್ರೆ, ದರ್ಶನ್ ಬಳ್ಳಾರಿ ಜೈಲಿಗೂ ಎಂಟ್ರಿ ಕೊಟ್ಟ ರೀತಿಯೂ ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಯಾಕಂದ್ರೆ, ಜೈಲಿಗೂ ದುಬಾರಿ ಬ್ರ್ಯಾಂಡೆಡ್ ಬಟ್ಟೆ, ಟೀಶರ್ಟ್ ಮೇಲೆ ಗ್ಲಾಸ್ ಧರಿಸಿದ್ದ ಸ್ಟೈಲ್ ನೋಡಿ ದರ್ಶನ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಬಳ್ಳಾರಿಗೆ ದರ್ಶನ್ ಎಂಟ್ರಿ ಕೊಡುವಾಗ ಹಾಕಿಕೊಂಡ ಟೀ ಶರ್ಟ್ ಬೆಲೆ ಕೇಳಿದ್ರೆ ಖಂಡಿತ ನೀ ವು ಶಾಕ್ ಆಗ್ತೀರಿ.. ಹೌದು, ಇದು ವಿಶ್ವವಿಖ್ಯಾತ ಪ್ಯೂಮಾ ಕಂಪನಿಯ ಟೀಶರ್ಟ್. ಇದರ ಬೆಲೆ 30 ಸಾವಿರ ಎನ್ನಲಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬ ಈ 30 ಸಾವಿರವಿದ್ರೆ ಎರಡ್ಮೂರು ವರ್ಷಕ್ಕೆ ಆಗುವಷ್ಟು ಪ್ಯಾಂಟು, ಶರ್ಟು ಖರೀದಿಸಿಬಿಡ್ತಾನೆ. ಬಟ್, ಎಷ್ಟೇ ಆದ್ರೂ ಇವ್ರು ಡಿಬಾಸ್ ಅಲ್ವಾ? ಹೆಸರು, ಗತ್ತಿಗೆ ತಕ್ಕಂತೆ ಶರ್ಟ್ ಹಾಕದಿದ್ರೆ ಹೇಗೆ? ಬಳ್ಳಾರಿ ಜೈಲಿಗೆ ಕಾಲಿಡೋ ವೇಳೆ ದರ್ಶನ್ ತೊಟ್ಟಿದ್ದ ಟೀ ಶರ್ಟ್ ರೇಟು 30 ಸಾವಿರ ಎನ್ನಲಾಗ್ತಿದೆ. ಇನ್ನು, ದರ್ಶನ್ ಧರಿಸಿದ್ದ ಜೀನ್ಸ್ ಪ್ಯಾಂಟ್ ಬೆಲೆ 50 ಸಾವಿರದಿಂದ 1 ಲಕ್ಷ ರೂಪಾಯಿ ಎನ್ನಲಾಗ್ತಿದೆ.
ಜಸ್ಟ್ 150 ರೂಪಾಯಿ ಸಂಬಳಕ್ಕೆ ಲೈಟ್ ಬಾಯ್ ಆಗಿ ದುಡಿಯುತ್ತಿದ್ದ ದರ್ಶನ್ ತೊಡುವ ಜೀನ್ಸ್ ಪ್ಯಾಂಟ್‌ಗಳ ಬೆಲೆಯೇ 50 ಸಾವಿರದಿಂದ 1 ಲಕ್ಷ ರೂಪಾಯಿಯಂತೆ. ಖುದ್ದು, ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿಯವರೇ ಈ ಬಗ್ಗೆ ಹೇಳಿಕೊಂಡಿದ್ರು. ನಾನು ಟ್ರು ರಿಲಿಜಿಯನ್ಸ್ ಬ್ರ್ಯಾಂಡ್‌ನ ಜೀನ್ಸ್ ಪ್ಯಾಂಟ್ ಹಾಕ್ತೀನಿ. ‘ರಾಬರ್ಟ್’ ಸಿನಿಮಾಕ್ಕೆ ಇದೇ ರೀತಿಯ 15-20 ಜೀನ್ಸ್ ಬೇಕಾಗಿತ್ತು. ಇದಕ್ಕೆ ಒಟ್ಟಾರೆಯಾಗಿ 20 ಲಕ್ಷ ರೂಪಾಯಿ ಆಗುತ್ತೆ. ಹಾಗಾಗಿ, ಕೇವಲ 4 ರಿಂದ 5 ಜೀನ್ಸ್ ತಗೊಂಡು ಸಾಕು. ಸುಮ್ಮನೆ ನಿಮಗ್ಯಾಕೆ ಹೊರೆ ಎಂದಿದ್ರಂತೆ. . ಇನ್ನು, ದರ್ಶನ್ ಕೈಲಿದ್ದ ಜಾಕೆಟ್ ಬೆಲೆ 2 ರಿಂದ 3 ಲಕ್ಷ ರೂಪಾಯಿ ಇರಬಹುದು ಅನ್ನೋ ಮಾಹಿತಿಯಿದೆ.