Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Puri Jaganath ಪುರಿ ಜಗನ್ನಾಥನ ಪ್ರಸಾದ ಆನ್‌ಲೈನ್‌ನಲ್ಲಿ ಸಿಗುತ್ತೆ ಅನ್ನೋ ಭ್ರಮೆಯಲ್ಲಿದ್ದೀರಾ? ಸೈಬರ್ ವಂಚಕರ ಬಗ್ಗೆ ಇರಲಿ ಎಚ್ಚರ
ಪ್ರಮುಖದೇಶ

Puri Jaganath ಪುರಿ ಜಗನ್ನಾಥನ ಪ್ರಸಾದ ಆನ್‌ಲೈನ್‌ನಲ್ಲಿ ಸಿಗುತ್ತೆ ಅನ್ನೋ ಭ್ರಮೆಯಲ್ಲಿದ್ದೀರಾ? ಸೈಬರ್ ವಂಚಕರ ಬಗ್ಗೆ ಇರಲಿ ಎಚ್ಚರ

Share
2 Min Read
SHARE

newsics.com | ನ್ಯೂಸಿಕ್ಸ್

Contents
ಕೊರಿಯರ್ ಮಾಡಲು ಸಾಧ್ಯವಿಲ್ಲದ್ದಕ್ಕೆ ಅಸಲಿ ಕಾರಣವೇನು?ಪ್ರಸಾದ ಸಿಗುವುದು ಎಲ್ಲಿ?ಭಕ್ತರೇ ವಂಚಕರಿಂದ ದೂರವಿರಿ

ನವದೆಹಲಿ: ಒಡಿಶಾದ ಪುರಿಯಲ್ಲಿ ಜಗನ್ನಾಥನ ಭವ್ಯ ರಥಯಾತ್ರೆಯು (Puri Rath Yatra) ಅತ್ಯಂತ ಸಡಗರದಿಂದ ಆರಂಭವಾಗಿದ್ದು, ಲಕ್ಷಾಂತರ ಭಕ್ತರು ಜಗನ್ನಾಥನ ದರ್ಶನ ಪಡೆಯಲು ಜನಸಾಗರ ಹರಿದುಬರುತ್ತಿದೆ. ಇದರ ನಡುವೆ, ಗೂಗಲ್ ಸೇರಿದಂತೆ ಪ್ರಮುಖ ಸರ್ಚ್ ಇಂಜಿನ್‌ಗಳಲ್ಲಿ “ಪುರಿ ಜಗನ್ನಾಥ ದೇವಾಲಯದ ಮಹಾಪ್ರಸಾದವನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ?” ಎಂಬ ಪ್ರಶ್ನೆ ಭಾರಿ ಟ್ರೆಂಡ್ ಆಗುತ್ತಿದೆ. ಆದರೆ, ಈ ರೀತಿ ಆನ್‌ಲೈನ್‌ನಲ್ಲಿ ಪ್ರಸಾದ ಹುಡುಕುವ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿ ಶಾಕಿಂಗ್‌ ಸುದ್ದಿಯೊಂದನ್ನು ನೀಡಿದೆ.

 

ಪುರಿ ಜಗನ್ನಾಥ ದೇವಾಲಯದ (Puri Jagannath Temple) ಪವಿತ್ರ ಮಹಾಪ್ರಸಾದಕ್ಕೆ ಯಾವುದೇ ರೀತಿಯ ಆನ್‌ಲೈನ್ ಬುಕಿಂಗ್ ಅಥವಾ ಹೋಮ್ ಡೆಲಿವರಿ ಸೌಲಭ್ಯ ಲಭ್ಯವಿಲ್ಲ ಎಂದು ಶ್ರೀ ಜಗನ್ನಾಥ ಟೆಂಪಲ್ ಅಡ್ಮಿನಿಸ್ಟ್ರೇಷನ್ (SJTA) ಸ್ಪಷ್ಟಪಡಿಸಿದೆ. ದೇಶ-ವಿದೇಶಗಳಲ್ಲಿ ಭಕ್ತರಿಂದ ಭಾರಿ ಬೇಡಿಕೆಯಿದ್ದರೂ ಸಹ, ಪ್ರಸಾದದ ಪಾವಿತ್ರ್ಯತೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಇಂತಹ ಎಲ್ಲ ಪ್ರಸ್ತಾಪಗಳನ್ನು ಒಡಿಶಾ ಸರ್ಕಾರ ಹಾಗೂ ದೇವಸ್ಥಾನ ಮಂಡಳಿ ತಿರಸ್ಕರಿಸಿದೆ. ಹೀಗಾಗಿ ಆನ್‌ಲೈನ್‌ನಲ್ಲಿ ಪ್ರಸಾದ ವಿತರಿಸುತ್ತೇವೆ ಎಂದು ಕ್ಲೈಮ್ ಮಾಡುವ ಯಾವುದೇ ವೆಬ್‌ಸೈಟ್ ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಸಂಪೂರ್ಣ ಅನಧಿಕೃತ ಹಾಗೂ ನಕಲಿ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಕೊರಿಯರ್ ಮಾಡಲು ಸಾಧ್ಯವಿಲ್ಲದ್ದಕ್ಕೆ ಅಸಲಿ ಕಾರಣವೇನು?

ಇಲ್ಲಿ ಯಾವುದೇ ಗ್ಯಾಸ್ ಸಿಲಿಂಡರ್ ಅಥವಾ ಆಧುನಿಕ ಇಂಧನ ಬಳಸುವುದಿಲ್ಲ. ವಿಶ್ವದ ಅತಿ ದೊಡ್ಡ ಅಡುಗೆಮನೆಯಲ್ಲಿ ಕೇವಲ ಕಟ್ಟಿಗೆ ಒಲೆ ಹಾಗೂ ಮಣ್ಣಿನ ಮಡಕೆಗಳನ್ನು ಬಳಸಿ ಮಾತ್ರ ಇದನ್ನು ಸಿದ್ಧಪಡಿಸಲಾಗುತ್ತದೆ. ಈ ಪ್ರಸಾದಕ್ಕೆ ಯಾವುದೇ ಕೃತಕ ಸಂರಕ್ಷಕಗಳನ್ನು (Preservatives) ಬಳಸುವುದಿಲ್ಲ. ಹೀಗಾಗಿ ಇದು ಬಹಳ ಬೇಗನೆ ಹಾಳಾಗುವ ಸಾಧ್ಯತೆ ಇರುತ್ತದೆ. ದೂರದ ಊರುಗಳಿಗೆ ಸಾಗಣೆ ಮಾಡುವುದು ತಾಂತ್ರಿಕವಾಗಿ ಅಸಾಧ್ಯ. ಪ್ರಸಾದವು ದೇವಸ್ಥಾನದ ಆವರಣದಿಂದ ಹೊರಹೋದರೆ, ಅದನ್ನು ತಲುಪಿಸುವಾಗ ಧಾರ್ಮಿಕ ಶುದ್ಧತೆಯನ್ನು ಕಾಯ್ದುಕೊಳ್ಳಲಾಗುತ್ತದೆಯೇ ಎಂಬ ಗ್ಯಾರಂಟಿ ಇರುವುದಿಲ್ಲ. ಈ ಕಾರಣದಿಂದಲೇ ಖಾಸಗಿ ಫುಡ್ ಡೆಲಿವರಿ ಆಪ್‌ಗಳಿಗೆ ಮಂಡಳಿ ಅನುಮತಿ ನೀಡಿಲ್ಲ.

ಪ್ರಸಾದ ಸಿಗುವುದು ಎಲ್ಲಿ?

ಜಗನ್ನಾಥ, ಬಲಭದ್ರ ಮತ್ತು ದೇವತೆ ಸುಭದ್ರೆಗೆ ನೈವೇದ್ಯ ಅರ್ಪಿಸಿದ ಬಳಿಕ ಸಿದ್ಧವಾಗುವ ಈ ಮಹಾಪ್ರಸಾದವನ್ನು ಪಡೆಯಲು ಭಕ್ತರು ಖುದ್ದಾಗಿ ಪುರಿ ದೇವಾಲಯಕ್ಕೆ ಭೇಟಿ ನೀಡಬೇಕಾಗುತ್ತದೆ. ದೇವಸ್ಥಾನದ ಆವರಣದ ಒಳಗಿರುವ ‘ಆನಂದ ಬಜಾರ್’ ಎಂಬ ನಿಗದಿತ ಕೌಂಟರ್‌ನಲ್ಲಿ ಮಾತ್ರ ಪ್ರತಿದಿನ ತಾಜಾ ಮಹಾಪ್ರಸಾದ ವಿತರಣೆ ಮಾಡಲಾಗುತ್ತದೆ. ರಥಯಾತ್ರೆಯ ಅವಧಿಯಲ್ಲಿ ಇಲ್ಲಿ ಭಕ್ತರ ಸಂಖ್ಯೆ ದುಪ್ಪಟ್ಟಾಗಿರುತ್ತದೆ.

ಭಕ್ತರೇ ವಂಚಕರಿಂದ ದೂರವಿರಿ

ರಥಯಾತ್ರೆಯ ಸಂದರ್ಭವನ್ನು ಬಂಡವಾಳ ಮಾಡಿಕೊಳ್ಳಲು ಸೈಬರ್ ವಂಚಕರು ಹೊಂಚು ಹಾಕುತ್ತಿದ್ದಾರೆ. ದೇವರ ಹೆಸರು ಬಳಸಿ ನಕಲಿ ಲಿಂಕ್‌ಗಳ ಮೂಲಕ ಹಣ ಲೂಟಿ ಮಾಡುವ ಜಾಲ ಸಕ್ರಿಯವಾಗಿದೆ. ಈ ಹಿಂದೆ ಇಂತಹ ನಕಲಿ ವೆಬ್‌ಸೈಟ್‌ಗಳ ವಿರುದ್ಧ ದೇವಸ್ಥಾನದ ಆಡಳಿತ ಮಂಡಳಿ ಕಾನೂನು ಕ್ರಮ ಜರುಗಿಸಿದ್ದು, ಭಕ್ತರು ಯಾವುದೇ ಆನ್‌ಲೈನ್ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ ಹಣ ಕಳೆದುಕೊಳ್ಳಬಾರದು ಎಂದು ವಿನಂತಿಸಲಾಗಿದೆ.

 

Bigg Boss ಕಿರುತೆರೆಯಲ್ಲಿ ಹೊಸ ಇತಿಹಾಸ; ಸೆಪ್ಟೆಂಬರ್‌ನಿಂದ ಕನ್ನಡ ಸೇರಿ 6 ಭಾಷೆಗಳ ‘ಬಿಗ್ ಬಾಸ್’ ಒಟ್ಟಿಗೆ ಆರಂಭ

TAGGED:#Puri jaganath #Prasadam #Online fraud #news #newsics
Share This Article
Facebook Twitter Copy Link Print
Previous Article Bigg Boss ಕಿರುತೆರೆಯಲ್ಲಿ ಹೊಸ ಇತಿಹಾಸ; ಸೆಪ್ಟೆಂಬರ್‌ನಿಂದ ಕನ್ನಡ ಸೇರಿ 6 ಭಾಷೆಗಳ ‘ಬಿಗ್ ಬಾಸ್’ ಒಟ್ಟಿಗೆ ಆರಂಭ
Next Article Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

Popular Posts

Footpath Eviction ಪುಂಡರ ದೌರ್ಜನ್ಯ; ಜಿಬಿಎ ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ, ಮಹಿಳಾ ಅಧಿಕಾರಿಗೆ ಪೆಪ್ಪರ್ ಸ್ಪ್ರೇ

2 Min Read

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

2 Min Read

You Might Also Like

ಪ್ರಮುಖಕರ್ನಾಟಕದೇಶ

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

1 Min Read
ದೇಶಪ್ರಮುಖ

Indian Navy Upgrade | INS ಮಾಲ್ವನ್ ನಾಳೆ ಭಾರತೀಯ ನೌಕಾಪಡೆಗೆ ಸೇರ್ಪಡೆ: ಸಮುದ್ರ ಭದ್ರತೆಗೆ ಮತ್ತೊಂದು ಸ್ವದೇಶಿ ಶಕ್ತಿ

2 Min Read
ಕರ್ನಾಟಕಪ್ರಮುಖ

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read
ಕರ್ನಾಟಕಪ್ರಮುಖ

Karnataka Cabinet Expension| ಕಾಂಗ್ರೆಸ್ ಕಲಿಗಳು ಮತ್ತೆ ದೆಹಲಿಗೆ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಚರ್ಚೆ ತೀವ್ರ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?