Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Nature’s Mystery ಸಂಜೆ ಅನ್ನೋ ಕಾನ್ಸೆಪ್ಟೇ ಇಲ್ಲದ ವಿಚಿತ್ರ ಹಳ್ಳಿ; ಇಲ್ಲಿ 4 ಗಂಟೆಗೆಲ್ಲಾ ಸಂಪೂರ್ಣ ಕತ್ತಲು
ಪ್ರಮುಖದೇಶ

Nature’s Mystery ಸಂಜೆ ಅನ್ನೋ ಕಾನ್ಸೆಪ್ಟೇ ಇಲ್ಲದ ವಿಚಿತ್ರ ಹಳ್ಳಿ; ಇಲ್ಲಿ 4 ಗಂಟೆಗೆಲ್ಲಾ ಸಂಪೂರ್ಣ ಕತ್ತಲು

Share
2 Min Read
SHARE

newsics.com | ನ್ಯೂಸಿಕ್ಸ್

Contents
ಎಲ್ಲಿದೆ ಈ ವಿಚಿತ್ರ ಗ್ರಾಮ?ಪ್ರಕೃತಿಯ ಈ ಆಟಕ್ಕೆ ಕಾರಣವೇನು?ಬೆಳಗ್ಗೆಯೂ ನಿಧಾನ, ರಾತ್ರಿಯೂ ಬೇಗ4 ಗಂಟೆಗೆಲ್ಲಾ ಊಟ ಮುಗಿಸಿ ನಿದ್ದೆಗೆ ಜಾರುವ ಜನ

ತೆಲಂಗಾಣ: ಸಾಮಾನ್ಯವಾಗಿ ದಿನವಿಡೀ ದುಡಿದು ಸುಸ್ತಾದ ಜನರಿಗೆ ಸಂಜೆಯ ಸಮಯವೇ ಒಂದು ದೊಡ್ಡ ರಿಲ್ಯಾಕ್ಸೇಷನ್. ಸ್ನೇಹಿತರ ಜೊತೆ ಹರಟೆ, ಸಂಗಾತಿಯೊಂದಿಗೆ ಲಾಂಗ್ ಡ್ರೈವ್, ಪಾರ್ಕ್‌ನಲ್ಲಿ ಮಕ್ಕಳಾಟ.. ಹೀಗೆ ಸಂಜೆಯ ಅಂದವನ್ನು ಆಸ್ವಾದಿಸಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ, ಭಾರತದಲ್ಲೇ ಇರುವ ಒಂದು ಅಪರೂಪದ ಹಳ್ಳಿಯ ಜನರಿಗೆ ಈ ಸುಂದರ ಸಂಜೆಯನ್ನು ಕಣ್ತುಂಬಿಕೊಳ್ಳುವ ಭಾಗ್ಯವೇ ಇಲ್ಲ! ಹೌದು, ಅಲ್ಲಿ ಸಂಜೆ 4 ಗಂಟೆಯಾಗುತ್ತಿದ್ದಂತೆ ಇಡೀ ಗ್ರಾಮ ಕತ್ತಲ ಗೂಡಾಗಿಬಿಡುತ್ತದೆ. ಜನರು 4 ಗಂಟೆಗೆಲ್ಲಾ ರಾತ್ರಿಯ ಊಟ ಮುಗಿಸಿ ಮಲಗಿಬಿಡುತ್ತಾರೆ.

 

 

 

ಎಲ್ಲಿದೆ ಈ ವಿಚಿತ್ರ ಗ್ರಾಮ?

ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್‌ ಮಂಡಲದಲ್ಲಿರುವ ‘ಕೊಡುರುಪಾಕ’ ಎನ್ನುವುದೇ ಆ ಸುಂದರ ಹಾಗೂ ವಿಸ್ಮಯಕಾರಿ ಹಳ್ಳಿ. ನಮ್ಮ ನಾಡಿನಲ್ಲಿ ಸೂರ್ಯ ಮುಳುಗಿ ಕತ್ತಲಾಗಲು ಕನಿಷ್ಠ 6 ರಿಂದ 6.30 ಆಗಬೇಕು. ಆದರೆ ಈ ಕೊಡುರುಪಾಕ ಗ್ರಾಮದಲ್ಲಿ ಮಧ್ಯಾಹ್ನ 3.30 ದಾಟುತ್ತಿದ್ದಂತೆ ಸಂಜೆಯ ವಾತಾವರಣ ನಿರ್ಮಾಣವಾಗಿ, 4 ಗಂಟೆಗೆಲ್ಲಾ ಸಂಪೂರ್ಣ ಕತ್ತಲು ಆವರಿಸಿಬಿಡುತ್ತದೆ.

ಪ್ರಕೃತಿಯ ಈ ಆಟಕ್ಕೆ ಕಾರಣವೇನು?

ಇದು ಯಾವುದೇ ಶಾಪ ಅಥವಾ ಮಾಟ-ಮಂತ್ರವಲ್ಲ, ಸಂಪೂರ್ಣವಾಗಿ ಭೌಗೋಳಿಕ ಹಿನ್ನೆಲೆಯ ಪ್ರಕೃತಿಯ ಆಟ. ಈ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ‘ರಂಗನಾಯಕುಲ ಗುಟ್ಟ’ ಮತ್ತು ‘ಗೋರ್ಲಾ ಗುಟ್ಟ’ ಎಂಬ ಬೃಹತ್ ಗಾತ್ರದ ಎತ್ತರದ ಬೆಟ್ಟಗಳಿವೆ. ಮಧ್ಯಾಹ್ನ 3.30ರ ನಂತರ ಸೂರ್ಯ ಪಶ್ಚಿಮಕ್ಕೆ ವಾಲುತ್ತಿದ್ದಂತೆ, ಈ ಬೃಹತ್ ಬೆಟ್ಟಗಳು ಗೋಡೆಯಂತೆ ಅಡ್ಡ ನಿಂತು ಸೂರ್ಯನ ಬೆಳಕನ್ನು ತಡೆಯುತ್ತವೆ. ಹೀಗಾಗಿ ಬೆಟ್ಟಗಳ ದೈತ್ಯ ನೆರಳು ಇಡೀ ಗ್ರಾಮವನ್ನು ಆವರಿಸುತ್ತದೆ. ಸಾಮಾನ್ಯವಾಗಿ ನಮಗೆ ದಿನಕ್ಕೆ 12 ಗಂಟೆಗಳ ಕಾಲ ಸೂರ್ಯನ ಬೆಳಕು ಸಿಕ್ಕರೆ, ಈ ಹಳ್ಳಿಯ ಜನರಿಗೆ ಮಾತ್ರ ಕೇವಲ 9 ಗಂಟೆಗಳ ಕಾಲವಷ್ಟೇ ಸೂರ್ಯನ ದರ್ಶನವಾಗುತ್ತದೆ.

ಬೆಳಗ್ಗೆಯೂ ನಿಧಾನ, ರಾತ್ರಿಯೂ ಬೇಗ

ಈ ಹಳ್ಳಿಯಲ್ಲಿ ಕೇವಲ ಸಂಜೆ ಮಾತ್ರ ಬೇಗ ಬರುವುದಿಲ್ಲ, ಬದಲಿಗೆ ಬೆಳಗ್ಗೆಯೂ ಸೂರ್ಯ ತಡವಾಗಿಯೇ ಕಾಣಿಸಿಕೊಳ್ಳುತ್ತಾನೆ. ದೇಶದ ಇತರೆಡೆ ಬೆಳಕಾದ ಅರ್ಧ ಗಂಟೆಯ ನಂತರ ಬೆಟ್ಟಗಳನ್ನು ಸೀಳಿಕೊಂಡು ಸೂರ್ಯನ ಕಿರಣಗಳು ಈ ಊರೊಳಗೆ ಪ್ರವೇಶಿಸುತ್ತವೆ. ಹೀಗಾಗಿ ಈ ಭೌಗೋಳಿಕ ಬದಲಾವಣೆಗೆ ತಕ್ಕಂತೆ ಗ್ರಾಮಸ್ಥರು ತಮ್ಮ ಜೀವನ ಶೈಲಿಯನ್ನು ರೂಢಿಸಿಕೊಂಡಿದ್ದಾರೆ.

4 ಗಂಟೆಗೆಲ್ಲಾ ಊಟ ಮುಗಿಸಿ ನಿದ್ದೆಗೆ ಜಾರುವ ಜನ

ಮಧ್ಯಾಹ್ನ ಮೂರೂವರೆಗೇ ಕತ್ತಲಾಗುವ ಕಾರಣ ಇಲ್ಲಿನ ರೈತರು, ಕಾರ್ಮಿಕರು ಹಾಗೂ ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು ಬೆಳಗ್ಗೆ ಬೇಗ ಎದ್ದು ತಮ್ಮ ಕೆಲಸಗಳನ್ನು ಆರಂಭಿಸುತ್ತಾರೆ. ಮಧ್ಯಾಹ್ನದ ಒಳಗಾಗಿ ಎಲ್ಲವನ್ನೂ ಮುಗಿಸಿ ಮನೆಗೆ ವಾಪಸಾಗುತ್ತಾರೆ. ಸಂಜೆ 4 ಗಂಟೆಯಾಗುತ್ತಿದ್ದಂತೆ ದೀಪ ಹಚ್ಚಿ, ರಾತ್ರಿಯ ಊಟವನ್ನು ಮುಗಿಸಿ ನಿದ್ದೆಗೆ ಜಾರುತ್ತಾರೆ. ಪ್ರಕೃತಿಯ ಈ ಅಪರೂಪದ ವಿದ್ಯಮಾನ ಹಾಗೂ ಜನರ ವಿಭಿನ್ನ ಜೀವನ ಶೈಲಿಯನ್ನು ಕಣ್ತುಂಬಿಕೊಳ್ಳಲು ದಿನನಿತ್ಯ ನೂರಾರು ಪ್ರವಾಸಿಗರು ಈ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ.

 

Chardham Yatra Updates | ಚಾರ್ ಧಾಮ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಉತ್ತರಾಖಂಡ ಸರ್ಕಾರ

TAGGED:#Telangana #Mystery village #Sunset #news #newsics
Share This Article
Facebook Twitter Copy Link Print
Previous Article FIFA World Cup 2026 ಅರ್ಜೆಂಟೀನಾವನ್ನು ಮಣಿಸಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಸ್ಪೇನ್; ಇಲ್ಲಿದೆ ಪ್ರಶಸ್ತಿ, ಬಹುಮಾನ ಹಣದ ಸಂಪೂರ್ಣ ವಿವರ
Next Article DGP found dead ಕಚೇರಿಯಲ್ಲೇ ಡಿಜಿಪಿ ನಿಗೂಢ ಸಾವು: ಇಲಾಖೆಯಲ್ಲಿ ತಲ್ಲಣ!

Popular Posts

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

2 Min Read

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

1 Min Read

Uttarakannada Trauma Center | ಕುಮಟಾದಲ್ಲಿ ಜಿಲ್ಲೆಯ ಮೊದಲ ಅತ್ಯಾಧುನಿಕ ಟ್ರಾಮಾ ಕೇರ್ ಸೆಂಟರ್ ಆರಂಭ

3 Min Read

You Might Also Like

ದೇಶಪ್ರಮುಖ

Indian Navy Upgrade | INS ಮಾಲ್ವನ್ ನಾಳೆ ಭಾರತೀಯ ನೌಕಾಪಡೆಗೆ ಸೇರ್ಪಡೆ: ಸಮುದ್ರ ಭದ್ರತೆಗೆ ಮತ್ತೊಂದು ಸ್ವದೇಶಿ ಶಕ್ತಿ

2 Min Read
ಕರ್ನಾಟಕಪ್ರಮುಖ

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read
ಕರ್ನಾಟಕಪ್ರಮುಖ

Karnataka Cabinet Expension| ಕಾಂಗ್ರೆಸ್ ಕಲಿಗಳು ಮತ್ತೆ ದೆಹಲಿಗೆ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಚರ್ಚೆ ತೀವ್ರ

2 Min Read
ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?