Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಟ್ರಂಪ್ ತಲೆಗೆ ಬೆಲೆ ಕಟ್ಟಿದ ಇರಾಕ್ ಸಶಸ್ತ್ರ ಗುಂಪು! ದೊಡ್ಡಣ್ಣನನ್ನು ಕೊಲ್ಲುವವರಿಗೆ ಸಿಗಲಿದ್ಯಂತೆ 83 ಕೋಟಿ ಬಹುಮಾನ!
ಪ್ರಮುಖವಿದೇಶವೈರಲ್

ಟ್ರಂಪ್ ತಲೆಗೆ ಬೆಲೆ ಕಟ್ಟಿದ ಇರಾಕ್ ಸಶಸ್ತ್ರ ಗುಂಪು! ದೊಡ್ಡಣ್ಣನನ್ನು ಕೊಲ್ಲುವವರಿಗೆ ಸಿಗಲಿದ್ಯಂತೆ 83 ಕೋಟಿ ಬಹುಮಾನ!

Share
2 Min Read
SHARE

newsics.com| ನ್ಯೂಸಿಕ್ಸ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲುವವರಿಗೆ 10 ಮಿಲಿಯನ್ ಡಾಲರ್ (ಸುಮಾರು ₹83 ಕೋಟಿ) ಬಹುಮಾನ ನೀಡುವುದಾಗಿ ಇರಾಕ್‌ನ ಸಶಸ್ತ್ರ ಗುಂಪೊಂದು ಘೋಷಿಸಿದೆ.

ತನ್ನನ್ನು ‘ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್’ ಎಂದು ಗುರುತಿಸಿಕೊಂಡಿರುವ ಈ ಗುಂಪು ಜುಲೈ 16ರಂದು ಈ ಪ್ರಕಟಣೆ ಹೊರಡಿಸಿದೆ.

ಈ ಬಗ್ಗೆ ಇರಾನ್‌ನ ‘ಇರ್ನಾ’ (IRNA) ಸುದ್ದಿ ಸಂಸ್ಥೆ ಮತ್ತು ರಷ್ಯಾದ ಸರ್ಕಾರಿ ಸ್ವಾಮ್ಯದ ‘ಆರ್‌ಟಿ’ (RT) ವರದಿ ಉಲ್ಲೇಖಿಸಿ ‘ಇಂಡಿಯಾ ಟಿವಿ ನ್ಯೂಸ್‌’ ವರದಿ ಮಾಡಿದೆ.

ಹತರಾದ ಇರಾನ್‌ ಕಮಾಂಡರ್‌ಗಳ ಬಗ್ಗೆ ಟ್ರಂಪ್ ಅವರು ನೀಡಿದ ದಾರ್ಷ್ಟ್ಯದ ಮತ್ತು ಆಕ್ಷೇಪಾರ್ಹ ಹೇಳಿಕೆಗಳಿಗೆ ಪ್ರತಿಕಾರವಾಗಿ ಈ ಘೋಷಣೆ ಮಾಡಲಾಗಿದೆ ಎಂದು ಅದು ಹೇಳಿದೆ.

ಇರಾನ್‌ನ ಹಿರಿಯ ಕಮಾಂಡರ್‌ಗಳ ಸಾವಿಗೆ ಟ್ರಂಪ್ ಅವರೇ ಹೊಣೆ ಎಂದು ಆರೋಪಿಸಿರುವ ಈ ಗುಂಪು, ಸೇಡಿನ ದಾಳಿ ಮುಂದುವರಿಯಲಿದೆ ಎಂದೂ ಶಪಥ ಮಾಡಿದೆ. ಅಮೆರಿಕ, ಇರಾನ್ ಮತ್ತು ಅದರ ಮಿತ್ರ ಸಶಸ್ತ್ರ ಗುಂಪುಗಳ ನಡುವೆ ಸಂಘರ್ಷ ತೀವ್ರಗೊಂಡಿರುವ ಮಧ್ಯೆಯೇ ಈ ಪ್ರಕಟಣೆ ಹೊರಬಿದ್ದಿದೆ.

ಆದರೆ, ಈ ಬಹುಮಾನವನ್ನು ಹೇಗೆ ನೀಡಲಾಗುತ್ತದೆ ಎಂಬ ವಿಧಾನದ ಬಗ್ಗೆ ‘ಇರ್ನಾ’ ಆಗಲಿ ಅಥವಾ ‘ಆರ್‌ಟಿ’ ಆಗಲಿ ಹೆಚ್ಚಿನ ವಿವರ ನೀಡಿಲ್ಲ.

ಕುರಾನ್ ವಚನ ಉಲ್ಲೇಖ

ಈ ಗುಂಪು ತನ್ನ ಪ್ರಕಟಣೆಯನ್ನು, ಇಸ್ಲಾಮಿಕ್ ಪ್ರಾರ್ಥನೆಯಾದ ‘ಪರಮ ದಯಾಮಯಿ, ಕರುಣಾಮಯನೂ ಆದ ಅಲ್ಲಾಹನ ಹೆಸರಿನಲ್ಲಿ’ ಎನ್ನುವ ಸಾಲುಗಳೊಂದಿಗೆ ಪ್ರಾರಂಭಿಸಿದೆ. ಅಲ್ಲದೇ ಕುರ್‌ಆನ್‌ನ ಒಂದು ವಚನವನ್ನು ಉಲ್ಲೇಖಿಸಲಾಗಿದ್ದು, ಅದರಲ್ಲಿ ‘ ನ್ಯಾಯಯುತ ಪ್ರತಿಕಾರದಿಂದ ಮುಗ್ಧ ಜೀವಗಳನ್ನು ಉಳಿಸಬಹುದು. ಇದರಿಂದ ನೀವು ಧರ್ಮನಿಷ್ಠರಾಗಬಹುದು’ ಎಂದು ಹೇಳಲಾಗಿದೆ.

2020ರ ಜನವರಿಯಲ್ಲಿ ಬಾಗ್ದಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದ ಅಮೆರಿಕದ ಡ್ರೋನ್ ದಾಳಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಕಮಾಂಡರ್ ಜನರಲ್ ಖಾಸಿಂ ಸುಲೈಮಾನಿ ಮತ್ತು ಇರಾಕ್‌ ಬಂಡುಕೋರ ನಾಯಕ ಅಬು ಮಹದಿ ಅಲ್ ಮುಹಂದಿಸ್ ಹತರಾಗಿದ್ದರು.

ಈ ಘಟನೆ ಅಮೆರಿಕ, ಇರಾನ್ ಮತ್ತು ಮಧ್ಯಪ್ರಾಚ್ಯದಾದ್ಯಂತ ಇರುವ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿತ್ತು.

ಅಂದಿನಿಂದ, ಇರಾಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಇರಾನ್ ಬೆಂಬಲಿತ ಸಶಸ್ತ್ರ ಪಡೆಗಳು ಅಮೆರಿಕದ ನಾಯಕರಿಗೆ ಪದೇ ಪದೇ ಬೆದರಿಕೆಗಳನ್ನು ಹಾಕುತ್ತಿವೆ. ಸುಲೈಮಾನಿ ಮತ್ತು ಅಲ್ ಮುಹಂದಿಸ್ ಅವರ ಹತ್ಯೆಯೇ ಇದಕ್ಕೆ(ಪ್ರತಿಕಾರಕ್ಕೆ) ಪ್ರಮುಖ ಕಾರಣ ಎಂದು ಹೇಳಿಕೊಂಡಿವೆ.

ಹತರಾದ ಕಮಾಂಡರ್‌ಗಳನ್ನು ಟ್ರಂಪ್ ಅವರು ನಿರಂತರವಾಗಿ ಗುರಿಯಾಗಿಸುತ್ತಿರುವುದು ಅಮೆರಿಕ ಆಡಳಿತದ ‘ನೈತಿಕ ಅಧಃಪತನವನ್ನು’ ತೋರಿಸುತ್ತದೆ. ಯಾರು ಇರಾಕಿಗಳ ರಕ್ತ ಹರಿಸಿದ್ದಾರೋ, ಅವರನ್ನು ದೇಶಭ್ರಷ್ಟರನ್ನಾಗಿ ಮಾಡಿದ್ದಾರೋ, ನಮ್ಮ ಮಕ್ಕಳನ್ನು, ನಾಯಕರನ್ನು ಕೊಂದಿದ್ದಾರೋ, ಅ ಅಪರಾಧಿಯನ್ನು (ಟ್ರಂಪ್‌) ಈ ಜಗತ್ತಿನ ಸ್ವತಂತ್ರ ಜನರು ನೆಮ್ಮದಿಯಿಂದ ಬದುಕಲು ಬಿಡುವುದಿಲ್ಲ. ನಾವು ಅವರ ತಲೆಗೆ 10 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಘೋಷಿಸಿದ್ದೇವೆ ಎಂದು ಇರಾಕ್‌ನ ಇಸ್ಲಾಮಿಕ್ ರೆಸಿಸ್ಟೆನ್ಸ್ ಗುಡುಗಿದೆ.

ಅಪರಾಧಿ ಟ್ರಂಪ್‌ಗೆ ನಮ್ಮಿಂದ ಅವಮಾನದ ಹೊರತು ಬೇರೇನೂ ಸಿಗುವುದಿಲ್ಲ. ದಬ್ಬಾಳಿಕೆಯ ಕೋಟೆಗಳು ಕುಸಿದು, ಆಕ್ರಮಣಕಾರರ ಸಿಂಹಾಸನ ಉರುಳುವವರೆಗೂ ಈ ಹೋರಾಟ ಮುಂದುವರಿಯಲಿದೆ’ ಎಂದೂ ಎಚ್ಚರಿಸಿದೆ.

ಅಮೆರಿಕದ ಕನ್ಸರ್ವೇಟಿವ್ ಪಕ್ಷದ ಕಾರ್ಯಕರ್ತೆ ಲಾರಾ ಲೂಮರ್ ಈ ವರದಿಗಳನ್ನು ಟೀಕಿಸಿದ್ದಾರೆ. ‘ಟ್ರಂಪ್ ಅವರ ಹತ್ಯೆಗಾಗಿ ಇರಾಕ್‌ ಇಸ್ಲಾಮಿಕ್ ರೆಸಿಸ್ಟೆನ್ಸ್ ಘೋಷಿಸಿರುವ 10 ಮಿಲಿಯನ್ ಡಾಲರ್ ಬಹುಮಾನದ ಸುದ್ದಿಯನ್ನು ರಷ್ಯಾದ ಸರ್ಕಾರಿ ಮಾಧ್ಯಮಗಳು ಪ್ರಚಾರ ಮಾಡುತ್ತಿವೆ’ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

Beauty is not beautiful ಮಿಲಿಯನ್ ಫಾಲೋವರ್ಸ್ ಹೊಂದಿರುವ ಈ ‘ಸುಂದರಿ’ ಮನುಷ್ಯಳೇ ಅಲ್ಲ! ಈಕೆಯ ವಿರುದ್ಧ ಭಾರೀ ಕ್ಯಾಂಪೇನ್

Hydrogen train- Modi ಹೈಡ್ರೋಜನ್ ರೈಲು ಸಂಚಾರಕ್ಕೆ ಮೋದಿ ಚಾಲನೆ, ಈ ರೈಲಿನ ಪ್ರಯಾಣ ದರ ಟೀಗಿಂತ ಅಗ್ಗ! ವಿಡಿಯೋ ನೋಡಿ

Supreme resentment against doctors ಅತ್ಯಾ*ಚಾರ ಸಂತ್ರಸ್ತ ಬಾಲಕಿ ಸಾವಿಗೆ ಕಾರಣರಾದ ನಿಮ್ಮನ್ನು ಡಾಕ್ಟರ್ ಎನ್ನಬೇಕಾ? ಖಾಸಗಿ ಆಸ್ಪತ್ರೆಗಳಿಗೆ ಸುಪ್ರೀಂ ತರಾಟೆ

 

TAGGED:The Iraqi armed group that put a price on Trump's head! 83 crore reward for those who kill big brother!
Share This Article
Facebook Twitter Copy Link Print
Previous Article Hydrogen train- Modi ಹೈಡ್ರೋಜನ್ ರೈಲು ಸಂಚಾರಕ್ಕೆ ಮೋದಿ ಚಾಲನೆ, ಈ ರೈಲಿನ ಪ್ರಯಾಣ ದರ ಟೀಗಿಂತ ಅಗ್ಗ! ವಿಡಿಯೋ ನೋಡಿ
Next Article God of money ಒಂದೇ ದಿನದಲ್ಲಿ ತಿರುಪತಿ ವೆಂಕಟರಮಣನಿಗೆ 97 ಕೋಟಿ ಕಾಣಿಕೆ!

Popular Posts

Relationship- Love kick ಪ್ರೀತಿಯಲ್ಲಿ ಬಿದ್ದರೆ ಮೆದುಳು ಕೊಕೇನ್ ತಿಂದಂತೆ ಆಡುತ್ತೆ! ನಿಮ್ಮೊಳಗಿನ ‘ಲವ್ ಕೆಮಿಸ್ಟ್ರಿ’ ಬಗ್ಗೆ ನಿಮಗೇನಾದ್ರೂ ಗೊತ್ತಾ?

2 Min Read

S Janaki life ಹೈದ್ರಾಬಾದ್‌ನಲ್ಲಿ ಭವ್ಯ ಬಂಗಲೆಯಿದ್ರೂ ಮೈಸೂರಿನ ಬಾಡಿಗೆ ಮನೆಯಲ್ಲಿ ಗಾನಕೋಗಿಲೆ ವಾಸ! ಜಾನಕಿ ಜೀವನ ಯಾಕೆ ಹೀಗೆ? ಕೇರ್ ಟೇಕರ್ಸ್ ಹೇಳಿದ್ದೇನು?

2 Min Read

Unlucky couple 15 ದಿನಗಳ ಹಿಂದಷ್ಟೇ ಮದುವೆ! ಬೈಕ್ ಅಪಘಾತದಲ್ಲಿ ನವವಿವಾಹಿತೆ ಸಾವು, ಗಂಭೀರ ಸ್ಥಿತಿಯಲ್ಲಿ ಪತಿ

1 Min Read

God of money ಒಂದೇ ದಿನದಲ್ಲಿ ತಿರುಪತಿ ವೆಂಕಟರಮಣನಿಗೆ 97 ಕೋಟಿ ಕಾಣಿಕೆ!

1 Min Read

You Might Also Like

ದೇಶಪ್ರಮುಖವೈರಲ್

Hydrogen train- Modi ಹೈಡ್ರೋಜನ್ ರೈಲು ಸಂಚಾರಕ್ಕೆ ಮೋದಿ ಚಾಲನೆ, ಈ ರೈಲಿನ ಪ್ರಯಾಣ ದರ ಟೀಗಿಂತ ಅಗ್ಗ! ವಿಡಿಯೋ ನೋಡಿ

2 Min Read
ದೇಶಕರ್ನಾಟಕಪ್ರಮುಖವೈರಲ್

Beauty is not beautiful ಮಿಲಿಯನ್ ಫಾಲೋವರ್ಸ್ ಹೊಂದಿರುವ ಈ ‘ಸುಂದರಿ’ ಮನುಷ್ಯಳೇ ಅಲ್ಲ! ಈಕೆಯ ವಿರುದ್ಧ ಭಾರೀ ಕ್ಯಾಂಪೇನ್

2 Min Read
ಕರ್ನಾಟಕದೇಶಪ್ರಮುಖ

Chennamma critical ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ, ಆಸ್ಪತ್ರೆಗೆ ಎಚ್‌ಡಿಡಿ, ಎಚ್‌ಡಿಕೆ, ರೇವಣ್ಣ ಭೇಟಿ

1 Min Read
ದೇಶಪ್ರಮುಖ

Supreme resentment against doctors ಅತ್ಯಾ*ಚಾರ ಸಂತ್ರಸ್ತ ಬಾಲಕಿ ಸಾವಿಗೆ ಕಾರಣರಾದ ನಿಮ್ಮನ್ನು ಡಾಕ್ಟರ್ ಎನ್ನಬೇಕಾ? ಖಾಸಗಿ ಆಸ್ಪತ್ರೆಗಳಿಗೆ ಸುಪ್ರೀಂ ತರಾಟೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?