newsics.com
ರಾಂಪುರ: ಮನೆಯ ಮೇಕೆಯ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ.
ಆತನ ನೆರೆಮನೆಯವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಕ್ಕದ ಮನೆಯ ವಿಜಯ್ ಸಿಂಗ್ ಮತ್ತು ಅವರ ಪತ್ನಿ ಮನೆಕೆಲಸದಲ್ಲಿ ನಿರತರಾಗಿದ್ದಾಗ ಈ ಘಟನೆ ಸಂಭವಿಸಿದೆ. ಮಕ್ಕಳ ಕಿರುಚಾಟ ಕೇಳಿ ಘಟನಾ ಸ್ಥಳಕ್ಕೆ ಧಾವಿಸಿದ ಆಕೆ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮೇಕೆಯನ್ನು ನೋಡಿ ಕಂಗಾಲಾಗಿದ್ದಾರೆ.
ಅಷ್ಟರಲ್ಲಾಗಲೇ ಈ ಕೃತ್ಯ ಎಸಗಿದ ಆರೋಪಿ ತನ್ನ ಮನೆಯೊಳಗೆ ಹೋಗಿ ಅಡಗಿ ಕುಳಿತಿದ್ದಾನೆ. ಮಕ್ಕಳು ಆತನೇ ಮೇಕೆಗೆ ಗಾಯ ಮಾಡಿದ್ದಾನೆಂದು ಹೇಳಿದ ಬಳಿಕ ಅಲ್ಲಿಂದಲೂ ಪರಾರಿಯಾಗಿದ್ದಾನೆ. ಆದರೆ ಗ್ರಾಮಸ್ಥರು ಕೂಡಲೇ ಆರೋಪಿ ಶೇರ್ ಸಿಂಗ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.