newsics.com | ನ್ಯೂಸಿಕ್ಸ್
ಮಲಪ್ಪುರಂ: ಸಣ್ಣ ಮಕ್ಕಳು ಏನನ್ನಾದರೂ ತಿನ್ನುವಾಗ ಹೆತ್ತವರು ಸದಾ ಕಣ್ಣಿಟ್ಟಿರಬೇಕು ಎಂಬುದಕ್ಕೆ ಕೇರಳದಲ್ಲಿ ನಡೆದ ಈ ಒಂದು ಘಟನೆಯೇ ಸಾಕ್ಷಿ. ಆಟವಾಡುತ್ತಾ ಮಿಕ್ಸ್‌ಚರ್ ತಿನ್ನುತ್ತಿದ್ದ ಮೂರು ವರ್ಷದ ಮಗುವಿನ ಗಂಟಲಿನಲ್ಲಿ ಕಡಲೆಕಾಯಿ ಬೀಜ ಸಿಲುಕಿಕೊಂಡು, ಉಸಿರುಗಟ್ಟಿ ಮಗು ಪ್ರಾಣ ಕಳೆದುಕೊಂಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಚೆಂಗಣಿಯಲ್ಲಿ ನಡೆದಿದೆ.
ಮುನೀರ್ ಮತ್ತು ಫರ್ಸಿನಾ ದಂಪತಿಯ ಮಗ ಮುಹಮ್ಮದ್ ರಿಝಾನ್ (3) ಮೃತಪಟ್ಟ ಮಗು.
ಆಸ್ಪತ್ರೆಗೆ ಕರೆದೊಯ್ದರೂ ಉಳಿಯದ ಜೀವ
ಬೆಳಗ್ಗೆ ಮಗು ಮಿಕ್ಸ್‌ಚರ್ ತಿನ್ನುತ್ತಿರುವಾಗ ಶೇಂಗಾ ಬೀಜವೊಂದು ಮಗುವಿನ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಇದರಿಂದಾಗಿ ಮಗುವಿಗೆ ಉಸಿರಾಡಲು ಕಷ್ಟವಾಗಿ ತೀವ್ರವಾಗಿ ಒದ್ದಾಡಿದೆ. ಇದನ್ನು ಕಂಡು ಗಾಬರಿಯಾದ ಪೋಷಕರು ತಕ್ಷಣವೇ ಮಗುವನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ, ವೈದ್ಯರ ಪ್ರಯತ್ನದ ಹೊರತಾಗಿಯೂ ಚಿಕಿತ್ಸೆ ಫಲಿಸದೆ ಮಗು ಸಾವನ್ನಪ್ಪಿದೆ.
ಗಂಟಲಿನಲ್ಲಿ ಸಿಲುಕಿದ ಬೀಜದಿಂದಾಗಿ ಶ್ವಾಸಕೋಶಕ್ಕೆ ಗಾಳಿ ಹೋಗುವುದು ನಿಂತುಹೋಗಿದ್ದೇ ಮಗುವಿನ ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಮಕ್ಕಳ ಕೈಗೆ ಕಡಲೆಕಾಯಿ, ಗೋಡಂಬಿಯಂತಹ ತಿಂಡಿಗಳನ್ನು ಕೊಡುವಾಗ ಪೋಷಕರು ಸದಾ ಜಾಗೃತರಾಗಿರಬೇಕು.
Karnataka Weather Today ಹಲವು ಜಿಲ್ಲೆಗಳಲ್ಲಿ ಮಳೆಯ ಎಚ್ಚರಿಕೆ, ಮೋಡ ಕವಿದ ವಾತಾವರಣ ಮುಂದುವರಿಕೆ