Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Shocking incident ವಾಚ್‌ಮ್ಯಾನ್ ಕೊಂದು ಪರಾರಿಯಾದ ನಾಲ್ವರು ಅಪ್ರಾಪ್ತರು!
ದೇಶಪ್ರಮುಖ

Shocking incident ವಾಚ್‌ಮ್ಯಾನ್ ಕೊಂದು ಪರಾರಿಯಾದ ನಾಲ್ವರು ಅಪ್ರಾಪ್ತರು!

Share
2 Min Read
SHARE

newsics.com | ನ್ಯೂಸಿಕ್ಸ್

ರಾಯ್‌ಪುರ: 40 ವರ್ಷದ ವಾಚ್‌ಮ್ಯಾನ್‌ನನ್ನು ಕೊಂದು ನಾಲ್ವರು ಅಪ್ರಾಪ್ತ ಬಾಲಕರು ಬಾಲಾಪರಾಧಿ ಕೇಂದ್ರದಿಂದ ತಪ್ಪಿಸಿಕೊಂಡಿರುವ ಘಟನೆ ಛತ್ತೀಸ್‌ಗಢದಲ್ಲಿ ಸೋಮವಾರ (ಜುಲೈ 13) ನಡೆದಿದೆ (Juvenile Inmates).

ತಪ್ಪಿಸಿಕೊಂಡ ಬಾಲಕರ ಪತ್ತೆಗಾಗಿ ಈಗಾಗಲೇ ಶೋಧ ಕಾರ್ಯ ಆರಂಭಿಸಲಾಗಿದೆ.

ಛತ್ತೀಸ್‌ಗಢದ ಬಿಲಾಸ್ಪುರ ಜಿಲ್ಲೆಯಲ್ಲಿನ ಸರ್ಕಾರಿ ಬಾಲಾಪರಾಧಿ ಕೇಂದ್ರದಲ್ಲಿ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿದೆ. ಬಾಲಕರ ಈ ಕ್ರೂರ ಕೃತ್ಯ ಬೆಳಕಿಗೆ ಬಂದ ಬಳಿಕ ದೇಶವೇ ಬೆಚ್ಚಿ ಬಿದ್ದಿದೆ.

ʼʼಸರ್ಕಂಡ ಪೊಲೀಸ್‌ ಠಾಣೆಯ ವ್ಯಾಪ್ತಿಯ ವೀಕ್ಷಣಾ ಗೃಹದಲ್ಲಿ ಮುಂಜಾನೆ 2 ಗಂಟೆ ವೇಳೆಗೆ ವಾಚ್‌ಮ್ಯಾನ್‌ ಅನ್ನು ಕೊಲೆಗೈದು ನಾಲ್ವರು ತಪ್ಪಿಸಿಕೊಂಡಿದ್ದಾರೆ. ಬೆಳಗ್ಗೆ 8 ಗಂಟೆಗೆ ಈ ವಿಚಾರ ಬೆಳಕಿಗೆ ಬಂದಿದ್ದು, ತಪ್ಪಿಸಿಕೊಂಡ ಬಾಲಕರ ಪತ್ತೆಗಾಗಿ ಬಲೆ ಬೀಸಲಾಗಿದೆ. ಘಟನೆ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆʼʼ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬಿಲಾಸ್ಪುರ ಎಸ್‌ಪಿ ರಜನೀಶ್‌ ಸಿಂಗ್‌ ಈ ಬಗ್ಗೆ ಮಾಹಿತಿ ನೀಡಿ, ʼʼಮೃತ ವಾಚ್‌ಮ್ಯಾನ್‌ ಅನ್ನು ನರೇಂದ್ರ ಕುಮಾರ್‌ ಖಾಂಡೆ ಎಂದು ಗುರುತಿಸಲಾಗಿದೆ. ಅವರು ಬಿಲಾಸ್ಪುರ ಜಿಲ್ಲೆಯ ತಖಾತ್ಪುರದ ಅರೈಬಂದ್‌ ಗ್ರಾಮದ ನಿವಾಸಿ. ಬಾಲಾಪರಾಧಿ ಕೇಂದ್ರದ ವಾಚ್‌ಮ್ಯಾನ್‌ ಆಗಿ ಕೆಲವು ಸಮಯಗಳಿಂದ ಕಾರ್ಯ ನಿರ್ವಹಿಸುತ್ತಿದ್ದರುʼʼ ಎಂದು ಹೇಳಿದ್ದಾರೆ.

ʼʼಪ್ರಾಥಮಿಕ ತನಿಖೆಯ ಪ್ರಕಾರ, ನಾಲ್ವರು ಬಾಲಾಪರಾಧಿಗಳು ಖಾಂಡೆ ಮೇಲೆ ಹಲ್ಲೆ ನಡೆಸಿ, ಕೈಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕತ್ತು ಹಿಸುಕಿ ಕೊಂದು ಪರಾರಿಯಾಗಿದ್ದಾರೆ. ಪರಾರಿಯಾಗಿರುವ ಬಾಲಾಪರಾಧಿಗಳಲ್ಲಿ ಮೂವರು ರಾಯ್‌ಗಢ ಜಿಲ್ಲೆಯವರಾಗಿದ್ದರೆ, ಮತ್ತೋರ್ವ ಕೊರ್ಬಾ ಜಿಲ್ಲೆಯವನು. ನಾಲ್ವರ ವಿರುದ್ಧ ಗಂಭೀರ ಅಪರಾಧ ಪ್ರಕರಣ ದಾಖಲಾಗಿದೆʼʼ ಎಂದು ತಿಳಿಸಿದ್ದಾರೆ.

“ಕೊಲೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಬಾಲಾಪರಾಧಿಗಳು ಆರಂಭದಲ್ಲಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ವಾಚ್‌ಮ್ಯಾನ್‌ ಬಳಿ ರಿಮಾಂಡ್ ಹೋಮ್ ಗೇಟ್‌ಗಳ ಕೀ ಕೇಳಿದ್ದಾರೆ. ವಾಚ್‌ಮ್ಯಾನ್‌ ಕೀ ನೀಡಲು ನಿರಾಕರಿಸಿದಾಗ ಕೊಲೆ ಮಾಡಿ ಓಡಿ ಹೋಗಿದ್ದಾರೆ” ಎಂದು ರಜನೀಶ್‌ ಸಿಂಗ್‌ ವಿವರಿಸಿದ್ದಾರೆ.

ತನಿಖೆ ಆರಂಭ

ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳವೂ ಆಗಮಿಸಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಪೊಲೀಸರು ಸುಳಿವುಗಳಿಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೂನ್ 23ರಂದು ಸುರ್ಗುಜಾ ಜಿಲ್ಲೆಯ ಸರ್ಕಾರಿ ಸ್ವಾಮ್ಯದ ಬಾಲಾಪರಾಧಿ ಗೃಹದಿಂದ 11 ಬಾಲಾಪರಾಧಿಗಳು ತಪ್ಪಿಸಿಕೊಂಡ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ.

Shocking mur*der ಹೆಂಡತಿ ಬಿಟ್ಟುಹೋದ ಆಘಾತ: ಕರೆಂಟ್ ಶಾಕ್ ನೀಡಿ ಮಕ್ಕಳಿಬ್ಬರನ್ನು ಕೊಂ*ದ ತಂದೆ ಆತ್ಮಹ*ತ್ಯೆ!

Techie Ganesha ಐಟಿ ಮಂದಿಗೆ ಇನ್ಕ್ರಿಮೆಂಟ್ ಕೊಡಿಸ್ತಾನಂತೆ ಈ ಟೆಕ್ಕಿ‌ ಗಣೇಶ! ಇಲ್ಲಿ ಸಾಲು ಸಾಲು ಟೆಕ್ಕಿಗಳು… ವಿಡಿಯೋ ನೋಡಿ

Viral video ರೈಲು ಬೋಗಿಯಲ್ಲಿ ಫಸ್ಟ್ ನೈಟ್ ಸೆಟಪ್ ಆಯ್ತು, ಈಗ ಪೂಜೆ, ವೈರಲ್ ವಿಡಿಯೋ ನೋಡಿ

TAGGED:Watchman killed and four minors escaped!
Share This Article
Facebook Twitter Copy Link Print
Previous Article Shocking mur*der ಹೆಂಡತಿ ಬಿಟ್ಟುಹೋದ ಆಘಾತ: ಕರೆಂಟ್ ಶಾಕ್ ನೀಡಿ ಮಕ್ಕಳಿಬ್ಬರನ್ನು ಕೊಂ*ದ ತಂದೆ ಆತ್ಮಹ*ತ್ಯೆ!
Next Article ಪಪ್ಪಾಯಿ ಹಣ್ಣಿನ ಅದ್ಭುತ ಆರೋಗ್ಯ ಪ್ರಯೋಜನಗಳು

Popular Posts

Avoid These Common Mistakes ಮನೆ ಕಟ್ಟುವಾಗ ಈ ತಪ್ಪುಗಳನ್ನು ಮಾಡದಿರಿ: ನಿಮ್ಮ ಕನಸಿನ ಮನೆಗಾಗಿ ಉಪಯುಕ್ತ ಸಲಹೆಗಳು

2 Min Read

Media Secretary Remove | ಸಿಎಂ ಮಾಧ್ಯಮ ಕಾರ್ಯದರ್ಶಿ ರಾಘವೇಂದ್ರ ಭಟ್ ನೇಮಕ ಆದೇಶ ತಾತ್ಕಾಲಿಕ ಸ್ಥಗಿತ: ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾದ ಬೆಳವಣಿಗೆ

2 Min Read

ಮನಿ ಪ್ಲಾಂಟ್ ಮನೆಯಲ್ಲಿ ಇಟ್ರೆ ಅದೃಷ್ಟ ಬದಲಾಗುತ್ತೆ |

2 Min Read

Sharmila Mandre Marriage | ಕನ್ನಡ ನಟಿ ಶರ್ಮಿಳಾ ಮಾಂಡ್ರೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು – ಹೊಸ ಬದುಕಿನತ್ತ ‘ಸಜನಿ’ಯ ಹೆಜ್ಜೆ

2 Min Read

You Might Also Like

ಪ್ರಮುಖಆರೋಗ್ಯಟೇಸ್ಟ್ವೈರಲ್

ಪಪ್ಪಾಯಿ ಹಣ್ಣಿನ ಅದ್ಭುತ ಆರೋಗ್ಯ ಪ್ರಯೋಜನಗಳು

1 Min Read
ದೇಶಪ್ರಮುಖ

Shocking mur*der ಹೆಂಡತಿ ಬಿಟ್ಟುಹೋದ ಆಘಾತ: ಕರೆಂಟ್ ಶಾಕ್ ನೀಡಿ ಮಕ್ಕಳಿಬ್ಬರನ್ನು ಕೊಂ*ದ ತಂದೆ ಆತ್ಮಹ*ತ್ಯೆ!

2 Min Read
ಕರ್ನಾಟಕದೇಶಪ್ರಮುಖವೈರಲ್

Techie Ganesha ಐಟಿ ಮಂದಿಗೆ ಇನ್ಕ್ರಿಮೆಂಟ್ ಕೊಡಿಸ್ತಾನಂತೆ ಈ ಟೆಕ್ಕಿ‌ ಗಣೇಶ! ಇಲ್ಲಿ ಸಾಲು ಸಾಲು ಟೆಕ್ಕಿಗಳು… ವಿಡಿಯೋ ನೋಡಿ

2 Min Read
ದೇಶಪ್ರಮುಖವೈರಲ್

Viral video ರೈಲು ಬೋಗಿಯಲ್ಲಿ ಫಸ್ಟ್ ನೈಟ್ ಸೆಟಪ್ ಆಯ್ತು, ಈಗ ಪೂಜೆ, ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?