newsics.com | ನ್ಯೂಸಿಕ್ಸ್
ನೆಲಮಂಗಲ: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದ ಬಸವನಹಳ್ಳಿಯಲ್ಲಿ ನಡೆದಿದೆ. ಗೌರಿಬಿದನೂರು ಮೂಲದ ತನುಜಾ (31) ಮೃತ ದುರ್ದೈವಿ.
ಘಟನೆಯ ವಿವರ: ಯಲಹಂಕದ ರವೀಂದ್ರ ಎಂಬುವವರನ್ನು ತನುಜಾ ಇತ್ತೀಚೆಗಷ್ಟೇ ಧರ್ಮಸ್ಥಳದಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ನಂತರ ಇವರಿಬ್ಬರು ಯಲಹಂಕದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಭಾನುವಾರ ರಾತ್ರಿ ತನುಜಾ ಪತಿಗೆ ಫೋನ್ ಮಾಡಿ ಮನೆಗೆ ಬರುವಂತೆ ಕರೆದಿದ್ದಾರೆ. ಆದರೆ ರವೀಂದ್ರ, “ನಾಳೆ ಬೆಳಗ್ಗೆ ಬರುತ್ತೇನೆ” ಎಂದಿದ್ದಕ್ಕೆ ಕೋಪಗೊಂಡ ತನುಜಾ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ಬಳಿಕ ರಾತ್ರಿ 10 ಗಂಟೆಗೆ, ನಾನು ವಿಷ ಕುಡಿದಿದ್ದೇನೆ ಎಂದು ಪತಿಗೆ ಮೆಸೇಜ್ ಕಳುಹಿಸಿದ್ದಾರೆ. ಗಾಬರಿಗೊಂಡ ರವೀಂದ್ರ ತಕ್ಷಣ ಸ್ಥಳಕ್ಕೆ ಧಾವಿಸಿ, ತನುಜಾಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಸಹ ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಾರೆ.
ಈ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Ram Mandir ರಾಮಮಂದಿರ ದೇಣಿಗೆ ದುರುಪಯೋಗ ವಿವಾದ: ತನಿಖಾ ವರದಿ ಸಲ್ಲಿಸಲು SITಗೆ ಸುಪ್ರೀಂ ಕೋರ್ಟ್ ಕಡಕ್ ಆದೇಶ