Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Magical car ಬೆಂಗಳೂರಿನ ಹೈವೇಯಲ್ಲಿ ತಡರಾತ್ರಿ ಟೆಕ್ಕಿ ಬೈಕ್ ಬೆನ್ನತ್ತಿದ ಚಾಲಕನಿಲ್ಲದ ಮಾಯಾವಿ ಕಾರು! ಚಳಿಯಲ್ಲೂ ಬೆವರಿದ ರೈಡರ್…
ಕರ್ನಾಟಕಪ್ರಮುಖವೈರಲ್

Magical car ಬೆಂಗಳೂರಿನ ಹೈವೇಯಲ್ಲಿ ತಡರಾತ್ರಿ ಟೆಕ್ಕಿ ಬೈಕ್ ಬೆನ್ನತ್ತಿದ ಚಾಲಕನಿಲ್ಲದ ಮಾಯಾವಿ ಕಾರು! ಚಳಿಯಲ್ಲೂ ಬೆವರಿದ ರೈಡರ್…

Share
2 Min Read
SHARE

newsics.com | ನ್ಯೂಸಿಕ್ಸ್

ಬೆಂಗಳೂರು: ನಗರದ ಹೊರವಲಯದ ರಸ್ತೆಗಳು ಹಗಲಿನಲ್ಲಿ ಎಷ್ಟು ಸುಂದರವಾಗಿ ಕಾಣಿಸುತ್ತದೆಯೋ, ತಡರಾತ್ರಿಯ ಕತ್ತಲಲ್ಲಿ ಅಷ್ಟೇ ನಿಗೂಢವಾಗಿ ಬದಲಾಗುತ್ತವೆ.

ಇಂತಹುದೇ ಒಂದು ಮೈ ಝುಂ ಎನ್ನಿಸುವ ಘಟನೆ ಸಾಫ್ಟ್‌ವೇರ್ ಇಂಜಿನಿಯರ್ ಆಕಾಶ್ ಎಂಬುವರಿಗೆ ಎದುರಾಗಿದೆ. ವೀಕೆಂಡ್ ಮುಗಿಸಿ ತಡರಾತ್ರಿ ಸರಿಯಾಗಿ 1 ಗಂಟೆಗೆ ಆಕಾಶ್ ತಮ್ಮ ಸ್ಪೋರ್ಟ್ಸ್ ಬೈಕ್‌ನಲ್ಲಿ ನೈಟ್ ಡ್ರೈವ್ (Night Drive) ಹೊರಟಿದ್ದರು.

ಆ ಸಮಯದಲ್ಲಿ ಇಡೀ ಹೈವೇ ರಸ್ತೆ (Highway Road) ಕಂಪ್ಲೀಟ್ ಆಗಿ ಖಾಲಿ ಇತ್ತು. ಸಡನ್ ಆಗಿ ಆಕಾಶ್ ಅವರ ಬೈಕ್ ರೇರ್ ವ್ಯೂ ಮಿರರ್‌ನಲ್ಲಿ ಕಡು ಕಪ್ಪು ಬಣ್ಣದ ಹಳೇ ಕಾಲದ ವಿಂಟೇಜ್ ಕಾರ್ (Ghost Car) ಒಂದು ಕಾಣಿಸಿಕೊಂಡಿದೆ. ಅಲ್ಲಿಂದ ಶುರುವಾಗಿದ್ದೇ ಆ ರಕ್ತ ಹೆಪ್ಪುಗಟ್ಟಿಸುವ ಹಾರರ್ ಜರ್ನಿ!

ಹೆಡ್‌ಲೈಟ್ ಇಲ್ಲ, ಇಂಜಿನ್ ಸದ್ದೂ ಇಲ್ಲ!

ಆಕಾಶ್ ಗಮನಿಸಿದಾಗ ಆ ಕಪ್ಪು ಕಾರಿನ ಹೆಡ್‌ಲೈಟ್‌ಗಳು ಕಂಪ್ಲೀಟ್ ಆಫ್ ಆಗಿದ್ದವು. ಅಷ್ಟೇ ಅಲ್ಲದೆ, ಅಷ್ಟು ದೊಡ್ಡ ಕಾರ್ ಹಿಂದೆ ಬರುತ್ತಿದ್ದರೂ ಅದರಿಂದ ಯಾವುದೇ ರೀತಿಯ ಇಂಜಿನ್ ಸದ್ದು ಅಥವಾ ಹಾರ್ನ್ ಶಬ್ದ ಕೇಳಿಸುತ್ತಿರಲಿಲ್ಲ. ಬರೀ ಗಾಳಿಯಲ್ಲಿ ತೇಲಿ ಬರುವಂತೆ ಆ ಕಾರ್ ಆಕಾಶ್ ಅವರ ಬೈಕ್‌ನ ತೀರಾ ಹತ್ತಿರಕ್ಕೆ ಅತಿ ವೇಗವಾಗಿ ಧಾವಿಸಿ ಬಂದಿದೆ.

ಸ್ಪೀಡ್ ಹೆಚ್ಚಿಸಿದರೂ ಬಿಡದ ಕರಾಳ ನೆರಳು!

ಇದರಿಂದ ಆಕಾಶ್ ಗಾಬರಿಯಾಗಿ ತಮ್ಮ ಬೈಕ್‌ನ ಸ್ಪೀಡ್ ಅನ್ನು ಒಮ್ಮೆಗೆ 100ಕ್ಕೆ ಏರಿಸಿದ್ದಾರೆ. ಆದರೆ ಆಶ್ಚರ್ಯ ಎಂದರೆ, ಆಕಾಶ್ ಬೈಕ್ ಸ್ಪೀಡ್ ಹೆಚ್ಚಿಸಿದಷ್ಟೂ ಆ ನಿಗೂಢ ಕಾರು ಸಹ ತನ್ನ ವೇಗವನ್ನು ಹೆಚ್ಚಿಸಿಕೊಂಡು ಇವರ ಇಂಚು ಇಂಚನ್ನೂ ಬೆನ್ನಟ್ಟಿದೆ. ಆಕಾಶ್ ರಸ್ತೆಯ ಎಡಕ್ಕೆ ಹೋದರೆ ಕಾರು ಎಡಕ್ಕೆ, ಬಲಕ್ಕೆ ಹೋದರೆ ಬಲಕ್ಕೆ ತಿರುಗುತ್ತಾ ಕಂಪ್ಲೀಟ್ ಆಗಿ ಲಾಕ್ ಮಾಡಿದೆ.

ಭಯದಲ್ಲೇ ಆಕಾಶ್ ಒಮ್ಮೆ ಧೈರ್ಯ ಮಾಡಿ ಹಿಂದೆ ತಿರುಗಿ ಕಾರಿನ ಒಳಗಡೆ ಕಣ್ಣು ಹಾಯಿಸಿದ್ದಾರೆ. ಆಗ ಕಂಡ ದೃಶ್ಯಕ್ಕೆ ಅವರ ಕೈಯಲ್ಲಿದ್ದ ಬೈಕ್ ಹ್ಯಾಂಡಲ್ ಒಮ್ಮೆಗೆ ಜಾರಿ ಬಿದ್ದಂತಾಗಿದೆ. ಆ ಕಾರಿನ ಡ್ರೈವರ್ ಸೀಟಿನಲ್ಲಿ ಯಾರೂ ಇರಲಿಲ್ಲ. ಚಾಲಕನೇ ಇಲ್ಲದೆ ಆ ಕಾರಿನ ಸ್ಟೀರಿಂಗ್ ವ್ಹೀಲ್ (Steering Wheel) ತಾನೇ ತಾನಾಗಿ ಜೋರಾಗಿ ತಿರುಗುತ್ತಿತ್ತಂತೆ.

ಮಾಯವಾಯ್ತು ಮಾಯಾವಿ ಕಾರು!

ಪ್ರಾಣ ಉಳಿಸಿಕೊಳ್ಳಲು ಆಕಾಶ್ ಬೈಕ್ ಅನ್ನು ಮ್ಯಾಕ್ಸಿಮಮ್ ಸ್ಪೀಡ್‌ನಲ್ಲಿ ಓಡಿಸಿ ಹೈವೇ ಪಕ್ಕದಲ್ಲಿದ್ದ ಒಂದು ಹಳೇ ಸ್ಮಶಾನದ ಕ್ರಾಸ್ ರಸ್ತೆಗೆ ತಿರುಗಿಸಿದ್ದಾರೆ. ಆಗ ಆ ಕಪ್ಪು ಕಾರ್ ಕೂಡ ಇವರ ಹಿಂದೆನೇ ತಿರುಗಿದೆ. ಆದರೆ ಆಕಾಶ್ ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ, ಆ  ಕಾರು ಸ್ಮಶಾನದ ಗೇಟ್ ಮುಂಭಾಗದಲ್ಲಿ ಒಮ್ಮೆಗೆ ಗಾಳಿಯಲ್ಲಿ ಕರಗಿ ಕಂಪ್ಲೀಟ್ ಮಾಯವಾಗಿದೆ.

ಮರುದಿನ ಆಕಾಶ್ ಆ ಹೈವೇ ಹತ್ತಿರದ ಲೋಕಲ್ ಡಾಬಾ ಒಂದರಲ್ಲಿ ವಿಚಾರಿಸಿದಾಗ ಆ ರಸ್ತೆಯ ಕರಾಳ ರಹಸ್ಯ ಬಯಲಾಗಿದೆ. ಸರಿಯಾಗಿ 25 ವರ್ಷಗಳ ಹಿಂದೆ ಅದೇ ಜಾಗದಲ್ಲಿ ಕಪ್ಪು ವಿಂಟೇಜ್ ಕಾರೊಂದಕ್ಕೆ ಭೀಕರ ಅಪಘಾತ (Accident) ಸಂಭವಿಸಿ, ಇಡೀ ಕುಟುಂಬವೇ ಜೀವಂತವಾಗಿ ಸಮಾಧಿಯಾಗಿತ್ತಂತೆ.

ಅಂದಿನಿಂದ ಅಮಾವಾಸ್ಯೆಯ ದಿನಗಳಲ್ಲಿ ಆ ಚಾಲಕನಿಲ್ಲದ ಕಾರು ಒಂಟಿ ಸವಾರರನ್ನು ಬೇಟೆಯಾಡಲು ಹೈವೇಗೆ ಬರುತ್ತದೆಯಂತೆ. ಈ ವಿಚಾರ ತಿಳಿದು ನನ್ನ ಎದೆ ಬಡಿತ ನಿಲ್ಲುವ ಹಾಗೇ ಆಗಿತ್ತು ಅಂತ ಆಕಾಶ್‌ ನಮ್ಮೊಂದಿಗೆ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

Misbehave in metro ಮೆಟ್ರೋದಲ್ಲಿ ಮಹಿಳೆ ಅಂಗಾಂಗ ಸ್ಪರ್ಶಿಸಿದ ಸಹಪ್ರಯಾಣಿಕ! ವಿಡಿಯೋ ನೋಡಿ

TAGGED:A driverless car chased a techie biker on a highway in Bengaluru late at night! The rider was sweating in the cold...
Share This Article
Facebook Twitter Copy Link Print
Previous Article Misbehave in metro ಮೆಟ್ರೋದಲ್ಲಿ ಮಹಿಳೆ ಅಂಗಾಂಗ ಸ್ಪರ್ಶಿಸಿದ ಸಹಪ್ರಯಾಣಿಕ! ವಿಡಿಯೋ ನೋಡಿ
Next Article PSI Arrest ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ: ಮಂಕಿ ಠಾಣೆ ಪಿಎಸ್‌ಐ ಬಂಧನ

Popular Posts

PSI Arrest ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ: ಮಂಕಿ ಠಾಣೆ ಪಿಎಸ್‌ಐ ಬಂಧನ

1 Min Read

Magical car ಬೆಂಗಳೂರಿನ ಹೈವೇಯಲ್ಲಿ ತಡರಾತ್ರಿ ಟೆಕ್ಕಿ ಬೈಕ್ ಬೆನ್ನತ್ತಿದ ಚಾಲಕನಿಲ್ಲದ ಮಾಯಾವಿ ಕಾರು! ಚಳಿಯಲ್ಲೂ ಬೆವರಿದ ರೈಡರ್…

2 Min Read

Misbehave in metro ಮೆಟ್ರೋದಲ್ಲಿ ಮಹಿಳೆ ಅಂಗಾಂಗ ಸ್ಪರ್ಶಿಸಿದ ಸಹಪ್ರಯಾಣಿಕ! ವಿಡಿಯೋ ನೋಡಿ

1 Min Read

Ramacharitamanasa ರಾಮಮಂದಿರದಲ್ಲಿದ್ದ 5 ಕೋಟಿ ಮೌಲ್ಯದ ಚಿನ್ನಲೇಪಿತ ರಾಮಚರಿತಮಾನಸ ಗ್ರಂಥ ಸುರಕ್ಷಿತವಾಗಿದ್ಯಾ? ದಾನಿಯ ಆತಂಕ

1 Min Read

You Might Also Like

ಕರ್ನಾಟಕದೇಶವಿದೇಶ

Great Green Wall ಆಫ್ರಿಕಾದಲ್ಲಿ ಜಗತ್ತಿನ ಅತಿ ದೊಡ್ಡ ‘ಹಸಿರು ಮಹಾಗೋಡೆ’! ಉತ್ರರ ಕರ್ನಾಟಕದಲ್ಲಿ ಯಾವಾಗ?

2 Min Read
ದೇಶಪ್ರಮುಖ

Student robs woman ಆನ್‌ಲೈನ್ ಗೇಮ್ ಗೀಳು: ಮಹಿಳೆಯನ್ನು ಲೂಟಿ ಮಾಡಿ ಬಾವಿಗೆ ತಳ್ಳಿದ ವಿದ್ಯಾರ್ಥಿ, 21 ಗಂಟೆ ಬಾವಿಯಲ್ಲಿದ್ದು ಬದುಕುಳಿದ ಮಹಿಳೆ!

2 Min Read
ಕರ್ನಾಟಕಪ್ರಮುಖ

Abhimanyu’s tooth is broken! ಅಭಿಮನ್ಯುವಿಗೆ ದಂತಭಗ್ನ! ಈ ಬಾರಿಯೂ ಅಂಬಾರಿ ಹೊರಲಿದ್ದಾನಾ?

1 Min Read
ಕರ್ನಾಟಕಪ್ರಮುಖ

Crime news ಹಣ, ಮೊಬೈಲ್‌ಗಾಗಿ ಪೀಡಿಸಿದ ಗೆಳೆಯನನ್ನೇ ಹತ್ಯೆಗೈದ ಯುವಕ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?