newsics.com| ನ್ಯೂಸಿಕ್ಸ್
ಯವತಿಯೊಬ್ಬಳು ಗೆಳೆಯನ ಜೊತೆಗೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಲೇ ಬದುಕು ಅಂತ್ಯಗೊಳಿಸಿದ ಘಟನೆ ಹೈದರಾಬಾದ್‌ನ ಖಾಸಗಿ ಹೊಟೆಲ್‌ನಲ್ಲಿ ನಡೆದಿದೆ. 26ರ ಹರೆಯದ ಕ್ಲಬ್ ಡ್ಯಾನ್ಸರ್ ರೇಣುಕಾ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಗೆಳೆಯ ಫಾರುಖ್ ಹಾಗೂ ರೇಣುಕಾ ಕೆಲ ಹೊತ್ತು ಹೋಟೆಲ್ ನಲ್ಲೇ ತಂಗಿದ್ದರು. ಬಳಿಕ ಫಾರುಖ್ ರೂಂನಿಂದ ಹೊರಗಡೆ ತೆರಳಿದರೆ ಹೋಟೆಲ್ ರೂಂನಲ್ಲಿ ರೇಣುಕಾ ಮಾತ್ರ ಇದ್ದಳು. ಈ ವೇಳೆ ಫಾರೂಖ್‌ಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಲೇ ರೇಣುಕಾ ದುರಂತ ಅಂತ್ಯ ಕಂಡಿದ್ದಾಳೆ.
ಹೈದರಾಬಾದ್‌ನ ಬೊಲರಾಂ ನಿವಾಸಿಯಾಗಿರುವ ರೇಣುಕಾ 8 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈಕೆಗೆ ಒಬ್ಬ ಮಗನಿದ್ದಾನೆ. ಆದರೆ ಗಂಡನಿಂದ ದೂರವಾಗಿರುವ ರೇಣುಕಾ ಕಳೆದ 6 ತಿಂಗಳಿನಿಂದ ಫಾರೂಖ್ ಜೊತೆಗೆ ರಿಲೇಶನ್‌ಶಿಪ್‌ನಲ್ಲಿದ್ದಳು. ಇವರಿಬ್ಬರ ರಿಲೇಶನ್‌ಶಿಪ್ ಬೆಡ್ ರೂಂಗೆ ತಲುಪಿತ್ತು. ಹೀಗೆ ಹೈದರಾಬಾದ್‌ನ ಹೊಟೆಲ್‌ನಲ್ಲಿ ರೂಂ ಪಡೆದ ಈ ಜೋಡಿ ಇಬ್ಬರು ಚೆಕ್ ಇನ್ ಆಗಿದ್ದಾರೆ. ಇಬ್ಬರು ಜೊತೆಯಾಗಿಯೇ ಕೆಲ ಹೊತ್ತು ಹೊಟೆಲ್ ರೂಂನಲ್ಲಿ ಕಳೆದಿದ್ದಾರೆ.
ರೇಣುಕಾ ಹಾಗೂ ಫಾರೂಖ್ ಇಬ್ಬರು ಹೊಟೆಲ್ ರೂಂನಲ್ಲಿ ಕೋಣೆಯಲ್ಲಿ ಹಾಯಾಗಿ ಕಳೆದಿದ್ದರು. ರಾತ್ರಿ ವೇಳೆ ಆನ್‌ಲೈನ್ ಮೂಲಕ ಬಿರಿಯಾನಿ ಆರ್ಡರ್ ಮಾಡಿ ಇಬ್ಬರು ತಿಂದಿದ್ದಾರೆ. ಊಟದ ಬಳಿಕ ಫಾರೂಖ್ ತನಗೆ ಒಂದು ಕಾರ್ಯಕ್ರಮವಿದೆ ಎಂದು ತೆರಳಿದ್ದಾನೆ. ಫೂರೂಖ್ ಕಾರ್ಯಕ್ರಮಕ್ಕಾಗಿ ಹೊರಗೆ ತೆರಳಿದ ಬಳಿಕ ಕೋಣೆಯಲ್ಲಿ ಒಬ್ಬಳೇ ಇದ್ದ ರೇಣುಕಾ ಕೆಲ ಹೊತ್ತಲ್ಲಿ ಕರೆ ಮಾಡಿದ್ದಾರೆ. ವಿಡಿಯೋ ಕಾಲ್ ಮಾಡಿದ ರೇಣುಕಾ ಮಾತನಾಡುತ್ತಲೇ ಬದುಕು ಅಂತ್ಯಗೊಳಿಸಿದ್ದಾಳೆ.
ರೇಣುಕಾ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಲೇ ‘ನಿನಗೆ ನನ್ನ ಕಡೆಯಿಂದ ಬರ್ತ್ ಡೇ ಗಿಫ್ಟ್ ‘ ಎಂದಿದ್ದಾಳೆ. ಬಳಿಕ ದುರಂತ ಅಂತ್ಯಕಂಡಿದ್ದಾಳೆ. ಬರ್ತ್ ಡೇ ಗಿಫ್ಟ್ ರೇಣುಕಾ ಆಡಿದ ಕೊನೆಯ ಮಾತು. ಮಾಹಿತಿ ತಿಳಿಯುತ್ತಿದ್ದಂತೆ ಹೈದರಾಬಾದ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ಪ್ರಕರಣದ ತನಿಖೆ ತೀವ್ರಗೊಳಿಸಿದ್ದಾರೆ.
ರೇಣುಕಾ ಗಂಡನಿಂದ ದೂರವಾಗಿ ಒಬ್ಬಳೇ ಇರುವ ಕುರಿತು ಮಾಹಿತಿ ಪಡೆದಿದ್ದ ಫಾರೂಖ್ ಆಕೆಯ ಜೊತೆ ಪ್ರೀತಿಯಿಂದ ನಡೆದುಕೊಂಡಿದ್ದಾನೆ. ಆಕೆಗೆ ನೆರವಾಗುವ ನಿಟ್ಟಿನಲ್ಲಿ ಆಪ್ತನಾಗಿದ್ದಾನೆ. ಆದರೆ ಫಾರೂಖ್ ತನಗೆ ಮದುವೆಯಾಗಿ ಮೂವರು ಮಕ್ಕಳಿರುವ ವಿಚಾರ ರೇಣುಕಾದಿಂದ ಮರೆಮಾಚಿದ್ದಾನೆ. ಇಷ್ಟೇ ಅಲ್ಲ ಬೇರೆ ಹೆಸರಿನಲ್ಲಿ ಗುರುತಿಸಿಕೊಂಡಿದ್ದ ಎಂಬ ಆರೋಪಗಳು ಕೇಳಿಬಂದಿದೆ.