newsics.com| ನ್ಯೂಸಿಕ್ಸ್
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಪತ್ನಿ ಸಮೇತ ಆಂಜನೇಯ ಜನ್ಮಭೂಮಿ ಅಂಜನಾದ್ರಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದರು.
575 ಮೆಟ್ಟಿಲು ಹತ್ತಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿಯಲ್ಲಿ ಹನುಮನ ದರ್ಶನವನ್ನು ರಾಹುಲ್ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ದೇವಾಲಯದ ಕಮಿಟಿ ವತಿಯಿಂದ ಅರ್ಚಕರು ರಾಹುಲ್ ದ್ರಾವಿಡ್ ದಂಪತಿಗೆ ಸನ್ಮಾನಿಸಿ, ಶ್ರೀ ಆಂಜನೇಯನ ಭಾವಚಿತ್ರ ನೀಡಿ ಕೇಸರಿ ಶಾಲು ಹೊದಿಸಿ ದೇವಾಲಯದ ಪ್ರಸಾದ ವಿತರಿಸಿದರು.