Newsics.com
ಬೆಂಗಳೂರು: ಮದುವೆಯಾದ ಕೆಲವೇ ದಿನಗಳಲ್ಲಿ ಅನೇಕ ಗಂಡ-ಹೆಂಡತಿ ಸಣ್ಣಪುಟ್ಟ ಜಗಳಗಳನ್ನು ಪ್ರಾರಂಭಿಸುತ್ತಾರೆ. ನಾವು ಇಂದು ನಿಮಗೆ ಸುಖ ಸಂಸಾರದ ಗುಟ್ಟು ಹೇಳುತ್ತೇವೆ.
ಗಂಡ-ಹೆಂಡತಿ ಮಲಗುವ ಮುನ್ನ ಸ್ವಲ್ಪ ಸಮಯ ಪರಸ್ಪರ ಮಾತನಾಡಬೇಕು. ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು. ಮಲಗುವ ಮುನ್ನಾ ಹೀಗೆ ಮಾಡುವುದರಿಂದ ವೈವಾಹಿಕ ಬಂಧವು ಫೆವಿಕ್ವಿಕ್ ಗಮ್ ರೀತಿಯಲ್ಲಿ ಗಟ್ಟಿಯಾಗುತ್ತದೆ.
ಪ್ರತಿ ರಾತ್ರಿ ಮಲಗುವ ಮುನ್ನ ನಿಮ್ಮ ಜೀವನ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಬೇಕು. ಒಬ್ಬರಿಗೊಬ್ಬರು ಪ್ರೀತಿಯಿಂದ ಮಾತನಾಡಬೇಕು.
ಮಲಗುವ ಮುನ್ನಾ ನಿಮ್ಮ ಸಂಗಾತಿ ಜೊತೆಗೆ ತಮ್ಮ ಫೋನ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಆಫ್ ಮಾಡಬೇಕು ಮತ್ತು ಸ್ವಲ್ಪ ಸಮಯವನ್ನು ಒಟ್ಟಿಗೆ ಕಳೆಯಬೇಕು.