Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Ev policy ದೆಹಲಿಯಲ್ಲಿ ಹೊಸ ಇವಿ ಕಾರುಗಳಿಗೆ ಸಿಗಲಿದೆ 1 ಲಕ್ಷದವರೆಗೆ ರಿಯಾಯಿತಿ – ಗ್ರಾಹಕರಿಗೆ ಭರ್ಜರಿ ಸಬ್ಸಿಡಿ ಭಾಗ್ಯ
ಕರ್ನಾಟಕದೇಶಪ್ರಮುಖ

Ev policy ದೆಹಲಿಯಲ್ಲಿ ಹೊಸ ಇವಿ ಕಾರುಗಳಿಗೆ ಸಿಗಲಿದೆ 1 ಲಕ್ಷದವರೆಗೆ ರಿಯಾಯಿತಿ – ಗ್ರಾಹಕರಿಗೆ ಭರ್ಜರಿ ಸಬ್ಸಿಡಿ ಭಾಗ್ಯ

Share
1 Min Read
SHARE

newsics.com|ನ್ಯೂಸಿಕ್ಸ್

ದೇಶದ ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯಕ್ಕೆ ಬ್ರೇಕ್ ಹಾಕಲು ಮತ್ತು ಹಸಿರು ಸಾರಿಗೆಯನ್ನು ಉತ್ತೇಜಿಸಲು ದೆಹಲಿ ಸರ್ಕಾರವು ಮಹತ್ವದ ಹೆಜ್ಜೆ ಇಡಲಾಗಿದ್ದು, ಹೊಸ ಎಲೆಕ್ಟ್ರಿಕ್ ವಾಹನ ನೀತಿಗೆ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ., ಇವಿ ಗ್ರಾಹಕರಿಗೆ ಬಂಪರ್ ಸಬ್ಸಿಡಿ ಹಾಗೂ ರಸ್ತೆ ತೆರಿಗೆ ವಿನಾಯಿತಿಗಳನ್ನು ಪ್ರಕಟಿಸಿದೆ.

30 ಲಕ್ಷ ರೂ.ವರೆಗಿನ ಎಲೆಕ್ಟ್ರಿಕ್ ಕಾರುಗಳಿಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಆದರೆ ಇಂಧನ ಮತ್ತು ಎಲೆಕ್ಟ್ರಿಕ್‌ನಿಂದ ಚಲಿಸುವ ಹೈಬ್ರಿಡ್ ವಾಹನಗಳಿಗೆ ಯಾವುದೇ ಸಬ್ಸಿಡಿ ಇರುವುದಿಲ್ಲ, ಕೇವಲ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.
ಇದರೊಂದಿಗೆ ಮುಂದಿನ ಕೆಲವು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ದ್ವಿಚಕ್ರ ವಾಹನಗಳ ನೋಂದಣಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನೇ ರಸ್ತೆಗಿಳಿಸುವ ದೃಢ ಸಂಕಲ್ಪವನ್ನು ಸರ್ಕಾರ ಮಾಡಿದೆ.

ದೆಹಲಿಯಲ್ಲಿ ವಾಯು ಮಾಲಿನ್ಯ ತಗ್ಗಿಸಲು ಈಗಿನಿಂದಲೇ ಪ್ರಯತ್ನ ಮಾಡಲಾಗುತ್ತದೆ. ಚಳಿಗಾಲ ಆರಂಭಗೊಳ್ಳುತ್ತಿದ್ದಂತೆ ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತವಾಗುತ್ತದೆ. ಹೀಗಾಗಿ ಅಕ್ಟೋಬರ್ ತಿಂಗಳಿನಿಂದ ದೆಹಲಿಯಲ್ಲಿ ಗಣನೀಯವಾಗಿ ವಾಯು ಮಾಲಿನ್ಯ ತಗ್ಗಿಸಲು ಇವಿ ವಾಹನಗಳಿಗೆ ಒತ್ತು ನೀಡಲಾಗುತ್ತದೆ. ಜೊತೆಗೆ ತೈಲ ಅವಲಂಬನೆಯೂ ಕಡಿಮೆಯಾಗಲಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ದೆಹಲಿ ಸರ್ಕಾರ ಇವಿ ಪಾಲಿಸಿಗಾಗಿ ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಈ ಪೈಕಿ 7,000 ಕೋಟಿ ರೂಪಾಯಿಗಳನ್ನು ಸಬ್ಸಿಡಿಗಳಿಗೆ ನೀಡಲಾಗುತ್ತದೆ. ಇನ್ನುಳಿದ 8000 ರೂಪಾಯಿ ಮೊತ್ತವನ್ನು ಇವಿ ಮೂಲಭೂತ ಸೌಕರ್ಯ ಹೆಚ್ಚಿಸಲು ನೀಡಲಾಗುತ್ತದೆ. ದೆಹಲಿಯಲ್ಲಿ 32000 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಶನ್ ಅಳವಡಿಕೆ ಕಾರ್ಯಗಳು ಪ್ರಗತಿಯಲ್ಲಿದೆ ಎಂದು ರೇಖಾ ಗುಪ್ತ ಹೇಳಿದ್ದಾರೆ.

Share This Article
Facebook Twitter Copy Link Print
Previous Article Tamil Nadu ಯೂಟ್ಯೂಬ್ ನೋಡಿ ತನಗೆ ತಾನೇ ಹೆರಿಗೆ ಮಾಡಿಕೊಂಡ ಮಹಿಳೆ ಸಾವು
Next Article Krishna byre gowda ನಾನೇನು ಕಿವಿಯಲ್ಲಿ ದಾಸವಾಳ ಇಟ್ಕೊಂಡು ಕೂತಿದಿನಾ? ಅಸಂಬದ್ಧ ಉತ್ತರಗಳನ್ನು ಕೊಡಬೇಡಿ- ಅಧಿಕಾರಿಗಳಿಗೆ ಸಚಿವರ ಎಚ್ಚರಿಕೆ

Popular Posts

ಬಿಜೆಪಿಯಲ್ಲಿ ‘ಆಡಿಯೋ’ ಬಾಂಬ್: ಬಿ. ವೈ. ವಿಜಯೇಂದ್ರ ಕೆಳಗಿಳಿಸಲು ಪ್ರಹ್ಲಾದ್ ಜೋಷಿ, ಬಿ.ಎಲ್. ಸಂತೋಷ್ ಗೇಮ್? ಸದ್ದು ಮಾಡ್ತಿದೆ ವೈರಲ್ ಕ್ಲಿಪ್!

1 Min Read

Chikkaballapura ಹೋಂಸ್ಟೇನಲ್ಲಿ ಯುವತಿ ಸಾವು ಪ್ರಕರಣ – ಮೃತ ಸುರಭಿಯ ಗ್ರಾಟಿಟ್ಯೂಡ್ ಜರ್ನಲ್ ಬಹಿರಂಗ

1 Min Read

Ketan agarwal ಕೇತನ್​ ಸಾವಿಗೆ ಅಪಹಾಸ್ಯ:​ ವೈದ್ಯೆಯ ಲೈಸೆನ್ಸ್ 5 ವರ್ಷ ಸಸ್ಪೆಂಡ್! ವಿಡಿಯೋ ನೋಡಿ

1 Min Read

Ksrtc ರಾಜ್ಯದಲ್ಲಿ ಮತ್ತೆ ಸಾರಿಗೆ ಬಸ್ ಟಿಕೆಟ್ ದರ ಏರಿಕೆ??

1 Min Read

You Might Also Like

ಕರ್ನಾಟಕದೇಶಪ್ರಮುಖ

Mumbai ಶಾಲಾ ಬಸ್‌ ಮೇಲೆ ಬಿದ್ದ ಮರ – ಓರ್ವ ವಿದ್ಯಾರ್ಥಿ ಸಾವು, 10 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

1 Min Read
Sportsಕರ್ನಾಟಕದೇಶಪ್ರಮುಖ

Hardik pandya ಮುಂಬೈ ಬಿಟ್ಟು ಬೆಂಗಳೂರಿಗೆ ಶಿಫ್ಟ್ ಆದ ಹಾರ್ದಿಕ್ ಪಾಂಡ್ಯ

1 Min Read
ದೇಶಪ್ರಮುಖವಿದೇಶ

AI ನಂಬಿ‌ ಕೆಟ್ಟ ಫೋರ್ಡ್! 350 ಅನುಭವಿ ಟೆಕ್ಕಿಗಳ ಮರುನೇಮಕ

2 Min Read
ಕರ್ನಾಟಕದೇಶಪ್ರಮುಖವಿದೇಶ

Whatsapp Username ವಾಟ್ಸ್ಯಾಪ್‌ನಲ್ಲಿ ಯೂಸರ್‌ನೇಮ್ ಫೀಚರ್: ನಿಮ್ಮ ಹೆಸರು ಈಗಲೇ ಕಾಯ್ದಿರಿಸಿಕೊಳ್ಳಿ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?