Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > Tamil Nadu ಯೂಟ್ಯೂಬ್ ನೋಡಿ ತನಗೆ ತಾನೇ ಹೆರಿಗೆ ಮಾಡಿಕೊಂಡ ಮಹಿಳೆ ಸಾವು
ದೇಶಪ್ರಮುಖ

Tamil Nadu ಯೂಟ್ಯೂಬ್ ನೋಡಿ ತನಗೆ ತಾನೇ ಹೆರಿಗೆ ಮಾಡಿಕೊಂಡ ಮಹಿಳೆ ಸಾವು

Share
2 Min Read
SHARE

newsics.com| ನ್ಯೂಸಿಕ್ಸ್
ಯೂಟ್ಯೂಬ್ ವಿಡಿಯೋ ನೋಡಿ ಮನೆಯಲ್ಲಿಯೇ ಹೆರಿಗೆ ಮಾಡಿಕೊಳ್ಳಲು ಯತ್ನಿಸಿದ 32 ವರ್ಷದ ಮಹಿಳೆಯೊಬ್ಬರು ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟ ಘಟನೆ ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ನಡೆದಿದೆ.

ಈಕೆಯ ಪತಿ ಹೆರಿಗೆಯ ಬಗ್ಗೆ ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸಲು ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಉತ್ತುಕುಳಿ ತಾಲ್ಲೂಕಿನ ಪುಂಜೈತಲವೈಪಾಳ್ಯಂನ ಕೆ. ಶಶಿಕಲಾ ಅವರನ್ನು ತೀವ್ರ ಗಂಭೀರ ಸ್ಥಿತಿಯಲ್ಲಿ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಅವರು ಭಾನುವಾರ ಬೆಳಿಗ್ಗೆ ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಪತಿಯ ಹೇಳಿಕೆಯ ಪ್ರಕಾರ, “ಮಹಿಳೆಗೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಇಷ್ಟವಿರಲಿಲ್ಲ. ಸಿಸೇರಿಯನ್ ಗೆ ಬಹಳ ಹೆದರಿಕೊಂಡಿದ್ದರು. ಮೊದಲ ಹೆರಿಗೆ ನಂತರ ಅವರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಹಾಗಾಗಿ ಎರಡನೇ ಬಾರಿ ಚೆಕ್ಅಪ್ ಮಾಡಿಸಿಕೊಳ್ಳಲು ಸಹ ಆಸ್ಪತ್ರೆಗೆ ಹೋಗಲಿಲ್ಲ. ಮನೆಯವರು ಹೇಳಿದರೂ ಸಹ ಆಸ್ಪತ್ರೆಗೆ ಹೋಗಲು ತಯಾರಿರಲಿಲ್ಲ. ಹಾಗಾಗಿ ಮನೆಯಲ್ಲಿಯೇ ಹೆರಿಗೆ ಮಾಡಿಸಲಾಗಿದೆ”.

ಜೂನ್ 24 ರಂದು ಬೆಳಗಿನ ಜಾವ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆಕೆಯ ಪತಿ ಕೋಲಂತಸಾಮಿ (35) ಮತ್ತು ಅತ್ತೆ ಹೆರಿಗೆಗೆ ಸಹಾಯ ಮಾಡಿದರು. ಯೂಟ್ಯೂಬ್‌ನಲ್ಲಿ ನೈಸರ್ಗಿಕ ಹೆರಿಗೆಯ ವೀಡಿಯೊಗಳನ್ನು ವೀಕ್ಷಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆರಿಗೆಯ ನಂತರ ಮಹಿಳೆಗೆ ಪ್ರಸವಾನಂತರದ ರಕ್ತಸ್ರಾವವಾಯಿತು. ಅದು ಕಡಿಮೆಯಾಗದೆ ಹೆಚ್ಚಾಗುತ್ತಲೇ ಹೋಗಿತ್ತು. ಅವರನ್ನು ಪೆರುಂಡುರೈನಲ್ಲಿರುವ ಸರ್ಕಾರಿ ಈರೋಡ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ, ಜೂನ್ 25 ರಂದು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಕುನ್ನತ್ತೂರಿನ ಬ್ಲಾಕ್ ವೈದ್ಯಕೀಯ ಅಧಿಕಾರಿ ನೀಡಿದ ದೂರಿನ ಮೇರೆಗೆ, ಉತುಕುಳಿ ಪೊಲೀಸರು ಕೋಲಂತಸಾಮಿ ವಿರುದ್ಧ ಐಪಿಸಿ ಸೆಕ್ಷನ್ 105 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
“ಮೃತ ಮಹಿಳೆಯ ಕುಟುಂಬ ಸದಸ್ಯರು ಯಾವುದೇ ದೂರು ದಾಖಲಿಸಲು ಬಯಸಲಿಲ್ಲ. ದಂಪತಿ ಮನೆಯಲ್ಲಿ ನ್ಯಾಚುರಲ್ ಹೆರಿಗೆಗೆ ಯೋಜಿಸಿದ್ದರು ಎಂದು ಅವರು ಹೇಳಿದರು” ಎಂದು ಉತ್ತುಕುಲಿ ಇನ್ಸ್‌ಪೆಕ್ಟರ್ ಎಸ್. ಸರವಣನ್ ಹೇಳಿದರು.

ಹೆರಿಗೆಯ ನಂತರ ಶಿಶು ಆರೋಗ್ಯವಾಗಿ ಅದರ ಆರೋಗ್ಯವೂ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

Share This Article
Facebook Twitter Copy Link Print
Previous Article CM DK shivakumar ಬೇರೆ ರಾಜ್ಯದ ಮತದಾರರಿಗೆ ನಾವು ಯಾಕೆ ಗ್ಯಾರಂಟಿ ನೀಡಬೇಕು? – ಸಿಎಂ ಡಿಕೆಶಿ
Next Article Ev policy ದೆಹಲಿಯಲ್ಲಿ ಹೊಸ ಇವಿ ಕಾರುಗಳಿಗೆ ಸಿಗಲಿದೆ 1 ಲಕ್ಷದವರೆಗೆ ರಿಯಾಯಿತಿ – ಗ್ರಾಹಕರಿಗೆ ಭರ್ಜರಿ ಸಬ್ಸಿಡಿ ಭಾಗ್ಯ

Popular Posts

ಬಿಜೆಪಿಯಲ್ಲಿ ‘ಆಡಿಯೋ’ ಬಾಂಬ್: ಬಿ. ವೈ. ವಿಜಯೇಂದ್ರ ಕೆಳಗಿಳಿಸಲು ಪ್ರಹ್ಲಾದ್ ಜೋಷಿ, ಬಿ.ಎಲ್. ಸಂತೋಷ್ ಗೇಮ್? ಸದ್ದು ಮಾಡ್ತಿದೆ ವೈರಲ್ ಕ್ಲಿಪ್!

1 Min Read

Chikkaballapura ಹೋಂಸ್ಟೇನಲ್ಲಿ ಯುವತಿ ಸಾವು ಪ್ರಕರಣ – ಮೃತ ಸುರಭಿಯ ಗ್ರಾಟಿಟ್ಯೂಡ್ ಜರ್ನಲ್ ಬಹಿರಂಗ

1 Min Read

Ketan agarwal ಕೇತನ್​ ಸಾವಿಗೆ ಅಪಹಾಸ್ಯ:​ ವೈದ್ಯೆಯ ಲೈಸೆನ್ಸ್ 5 ವರ್ಷ ಸಸ್ಪೆಂಡ್!

1 Min Read

Ksrtc ರಾಜ್ಯದಲ್ಲಿ ಮತ್ತೆ ಸಾರಿಗೆ ಬಸ್ ಟಿಕೆಟ್ ದರ ಏರಿಕೆ??

1 Min Read

You Might Also Like

ಕರ್ನಾಟಕದೇಶಪ್ರಮುಖ

Mumbai ಶಾಲಾ ಬಸ್‌ ಮೇಲೆ ಬಿದ್ದ ಮರ – ಓರ್ವ ವಿದ್ಯಾರ್ಥಿ ಸಾವು, 10 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

1 Min Read
Sportsಕರ್ನಾಟಕದೇಶಪ್ರಮುಖ

Hardik pandya ಮುಂಬೈ ಬಿಟ್ಟು ಬೆಂಗಳೂರಿಗೆ ಶಿಫ್ಟ್ ಆದ ಹಾರ್ದಿಕ್ ಪಾಂಡ್ಯ

1 Min Read
ದೇಶಪ್ರಮುಖವಿದೇಶ

AI ನಂಬಿ‌ ಕೆಟ್ಟ ಫೋರ್ಡ್! 350 ಅನುಭವಿ ಟೆಕ್ಕಿಗಳ ಮರುನೇಮಕ

2 Min Read
ಕರ್ನಾಟಕದೇಶಪ್ರಮುಖವಿದೇಶ

Whatsapp Username ವಾಟ್ಸ್ಯಾಪ್‌ನಲ್ಲಿ ಯೂಸರ್‌ನೇಮ್ ಫೀಚರ್: ನಿಮ್ಮ ಹೆಸರು ಈಗಲೇ ಕಾಯ್ದಿರಿಸಿಕೊಳ್ಳಿ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?