newsics.com
ಬೆಂಗಳೂರು: ಕನ್ನಡ ಬಿಗ್‌ಬಾಸ್ ಸೀಸನ್ 10 ಮುಗಿದು ಬರೋಬ್ಬರಿ 7 ತಿಂಗಳು ಕಳೆದಿದೆ.
ಇದೀಗ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಅವರು ಬಿಗ್‌ಬಾಸ್ ಬಗ್ಗೆ ಹೊಸ ಅಪ್ಡೇಟ್ ಕೊಟ್ಟಿದ್ದಾರೆ.
ಬಿಗ್‌ಬಾಸ್ ಸೀಸನ್ 10ರಲ್ಲಿ ಗೆದ್ದವರಿಗೆ 50 ಲಕ್ಷ ರೂಪಾಯಿ ನಗದು, ವಿನ್ನರ್ ಟ್ರೋಫಿಯನ್ನು ಗಿಫ್ಟ್ ಕೊಡಲಾಗಿತ್ತು. ಇದರ ಜೊತೆಗೆ ಮಾರುತಿ ಸುಜುಕಿ ಬ್ರೆಝಾ ಕಾರು ಮತ್ತು ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿಜೇತರಿಗೆ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಇದೀಗ ಬಿಗ್‌ಬಾಸ್ ತಂಡ ಮಾತು ಕೊಟ್ಟಂತೆ ವಿನ್ನರ್ ಕಾರ್ತಿಕ್ ಮಹೇಶ್ ಅವರಿಗೆ ಮಾರುತಿ ಸುಜುಕಿ ಬ್ರೆಝಾ ಕಾರನ್ನು ಹಸ್ತಾಂತರಿಸಲಾಗಿದೆ.
ಬಿಗ್‌ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರು ಇಂದು ತಮ್ಮ ಇನ್ಸಾಸ್ಟಾಗ್ರಾಮ್ ಖಾತೆಯಲ್ಲಿ ಅಂತು ಇಂತು ಬಂತು ಬಿಗ್‌ಬಾಸ್ ಕಾರು ಎಂದು ಪೋಸ್ಟ್ ಹಾಕಿದ್ದಾರೆ.