newsics. com| ನ್ಯೂಸಿಕ್ಸ್
ದರ್ಶನ್ ಪತ್ನಿ ವಿಜಯಲಕ್ಷ್ಮಿ ಪತಿ ಜೊತೆಗಿನ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೊಂದು ರೊಮ್ಯಾಂಟಿಕ್ ಹಾಡನ್ನು ಬ್ಯಾಗ್ರೌಂಡ್‌ನಲ್ಲಿ ಹಾಕಿದ್ದಾರೆ.
ಸೋಮವಾರ ಬೆಳ್ಳಗ್ಗೆಯೇ ಇನ್ಸ್ಟಾಗ್ರಾಂನಲ್ಲಿ ತಮ್ಮ ಜೋಡಿಯ ಫೋಟೋ ಶೇರ್ ಮಾಡಿರೋ ವಿಜಯಲಕ್ಷ್ಮಿ ಆ ಫೋಟೋಗೆ ತಾರಕ್ ಚಿತ್ರದ ‘ಹೇಗಾದರೂ ಮಾತಾಡು ನೀ’ ಹಾಡನ್ನ ಹಾಕಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಬೇಲ್ ಕ್ಯಾನ್ಸಲ್ ಆದ ಬಳಿಕ ದರ್ಶನ್ ಪರಪ್ಪನ ಅಗ್ರಹಾರ ಸೇರಿದ್ದರು. 2025ರ ಆಗಸ್ಟ್ 14 ರಿಂದ ಇಲ್ಲಿಯವರೆಗೂ ಸತತವಾಗಿ ದರ್ಶನ್ ಜೈಲಲ್ಲೇ ಇದ್ದಾರೆ. ವಾರಕ್ಕೆರಡು ಬಾರಿ ಪತಿ ದರ್ಶನ್ ಭೇಟಿಯನ್ನು ವಿಜಯಲಕ್ಷ್ಮಿ ಮಿಸ್ ಮಾಡೋದಿಲ್ಲ.