Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > BYV- Sadananda Gowda ವಿಜಯೇಂದ್ರ ಕೆಳಗಿಳಿಸಲು ಪ್ಲ್ಯಾನ್ ಮಾಡಿದ್ರಾ ಸದಾನಂದಗೌಡ? ಆಡಿಯೋ ವೈರಲ್, ಬಿಜೆಪಿಯಲ್ಲಿ ಸಂಚಲನ
ಕರ್ನಾಟಕದೇಶಪ್ರಮುಖ

BYV- Sadananda Gowda ವಿಜಯೇಂದ್ರ ಕೆಳಗಿಳಿಸಲು ಪ್ಲ್ಯಾನ್ ಮಾಡಿದ್ರಾ ಸದಾನಂದಗೌಡ? ಆಡಿಯೋ ವೈರಲ್, ಬಿಜೆಪಿಯಲ್ಲಿ ಸಂಚಲನ

Share
4 Min Read
SHARE

newsics.com | ನ್ಯೂಸಿಕ್ಸ್

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ (Karnataka BJP) ಮತ್ತೆ ನಾಯಕಯತ್ವ ಬದಲಾವಣೆ ಚರ್ಚೆ ಮುನ್ನಲೆಗೆ ಬಂದಿದೆ.

ಇದಕ್ಕೆ ಪೂಕರವೆಂಬಂತೆ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ‌ರನ್ನು (BY VIjayendra) ಕೆಳಗಿಳಿಸಲು ದೆಹಲಿ ನಾಯಕರಲ್ಲಿ ಒತ್ತಾಯ ಮಾಡಿರುವ ಡಿವಿ ಸದಾನಂದ ಗೌಡ (DV Sadanandagowda) ಅವರದ್ದು ಎನ್ನಲಾದ ಆಡಿಯೋ ವೈರಲ್ (Audio Viral) ಆಗಿದೆ.

ಬಿಜೆಪಿ ದೆಹಲಿ ಮಟ್ಟದ ನಾಯಕ ಪ್ರದೀಪ್ ಎಂಬುವರ ಜತೆ ಇಂಗ್ಲಿಷ್‌ನಲ್ಲಿ ನಡೆಸಿದ ಸಂಭಾಷಣೆ ಇದಾಗಿದ್ದು, ಇದರಲ್ಲಿ ಮೂರು ತಿಂಗಳ ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಿ ಎಂದು ಇದರಲ್ಲಿ ಬೇಡಿಕೆ ಇಡಲಾಗಿದೆ.

ಈ ಆಡಿಯೋ ಇದೀಗ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಮತ್ತೆ ಬಣ ಬಡಿದಾಟ ಶುರುವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ಇನ್ನು ಮೂರು ತಿಂಗಳಲ್ಲಿ ಮೂರು ವರ್ಷ ಪೂರೈಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಅವಧಿ ಮೂರು ವರ್ಷ ಇರುವುದು ಬಿಜೆಪಿಯಲ್ಲಿ ನಡೆದುಕೊಂಡು ಬಂದ ನಿಯಮವಾಗಿದೆ. ಇದೇ ಸಂದರ್ಭದಲ್ಲಿ ದೆಹಲಿ ಮಟ್ಟದ ನಾಯಕರೊಬ್ಬರ ಜತೆಗೆ ಡಿವಿ ಸದಾನಂದ ಗೌಡ ಅವರು ಮಾತನಾಡಿದ್ದಾರೆ ಎಂಬ ಆಡಿಯೋ ಹೊರಬಂದಿದ್ದು, ಡಿವಿ ಸದಾನಂದಗೌಡ ಅವರ ಧ್ವನಿಯನ್ನೇ ಹೋಲುವಂತಹ ಆಡಿಯೋ ಇದಾಗಿದೆ. ಹೀಗಾಗಿ ಸದ್ಯ ಬಿಜೆಪಿ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.

ಆಡಿಯೋನಲ್ಲೇನಿದೆ?

ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್‌ವರೆಗೂ ವಿಜಯೇಂದ್ರ‌ ಮುಂದುವರೆಯಲು ಬಿಡಿ, ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿ ಎಂಬುದು ಆಡಿಯೋದಲ್ಲಿ ಉಲ್ಲೇಖವಾಗಿದೆ. ಈಗಲೇ ತೆಗೆದು ಹಾಕಿದ್ರೆ ಬಿಜೆಪಿ ಮತ್ತೆ ಲಿಂಗಾಯತ ವಿರೋಧಿ ಎಂಬ ಟೀಕೆಗೆ ಗುರಿ ಆಗುವ ಅಪಾಯ ಇದೆ. ಇದು ಪಕ್ಷಕ್ಕೆ ಡ್ಯಾಮೇಜ್ ಆಗಬಹುದು. ಹಾಗಾಗಿ ಮುಂದಿನ ಅಕ್ಟೋಬರ್‌ವರೆಗೂ ಕಾದು ವಿಜಯೇಂದ್ರ‌ ಅವರನ್ನು ಪದವಿಯಿಂದ ತೆಗೆಯುವಂತೆ ಮನವಿ ಮಾಡಲಾಗಿದೆ.

ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಮೂರು ವರ್ಷ ಪೂರ್ಣಗೊಳಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಗೊಂದಲ ಮಾಡಿಕೊಳ್ಳುವುದು ಯಾಕೆ? ಎರಡು ತಿಂಗಳ ಒಳಗಾಗಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕಾಗಿದೆ. ಎರಡು ತಿಂಗಳಲ್ಲಿ ಅವರ ಅವಧಿ ಕೂಡಾ ಮುಕ್ತಾಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯಾರೂ ಇದನ್ನು ಪ್ರಶ್ನೆ ಮಾಡುವುದಿಲ್ಲ. ಪಕ್ಷದಲ್ಲಿ ಮುಂದುವರಿಯಬೇಕೆಂದು ಯಾವುದೇ ಷರತ್ತು ಇಲ್ಲ. ಹಾಗಾಗಿ ಯೋಜನಾಬದ್ಧವಾಗಿ ಅಕ್ಟೋಬರ್‌ನಲ್ಲಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ. ಈ ಕೆಲಸ ಮಾಡಿದರೆ, ಲಿಂಗಾಯತರು ಸ್ವಲ್ಪ ವಿರೋಧ ಮಾಡಬಹುದು. ಆದರೆ ಯೋಗ್ಯರನ್ನು ನಾವು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಎಲ್ಲಾ ವಿರೋಧಗಳು ತಣ್ಣಗಾಗಲಿದೆ. ಇದು ನನ್ನ ಅಭಿಪ್ರಾಯವಾಗಿದೆ.

ಬೇರೆ ಉತ್ತಮ ಅವಕಾಶಗಳು ಇದ್ದರೆ ನಾನು ಪಕ್ಷದ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ನಾನು ದೇವರಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನನ್ನು ಜನರು ಒಪ್ಪಿಕೊಂಡಿದ್ದಾರೆ. ಬಸ್ ನಿಲ್ದಾಣದಲ್ಲಿ ಕಾಣಿಸಿಕೊಂಡರೂ 25-30 ಆಟೋ ಚಾಲಕರು ಬಂದು ಮಾತನಾಡಿಸುತ್ತಾರೆ. ನಾನು ಆ ರೀತಿಯ ಸಂಪರ್ಕ ಇಟ್ಟಿದ್ದೇನೆ ಎಂದು ಪ್ರದೀಪ್ ಎಂಬುವರ ಜತೆ ಮಾತನಾಡಿದ ಆಡಿಯೋನಲ್ಲಿದೆ.

ಸದಾನಂದಗೌಡ ಹೇಳಿದ್ದೇನು?

ಇನ್ನು ಈ ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಈ ಬಗ್ಗೆ ಮಾತನಾಡಿರುವ ಡಿವಿಎಸ್, ಆಡಿಯೋ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ಆಡಿಯೋ ಬಗ್ಗೆ ನನಗೆ ಗೊತ್ತಿಲ್ಲ, ಹಾಗಾಗಿ ಉತ್ತರ ಕೊಡುವುದಿಲ್ಲ. ಆಡಿಯೋ ಬಗ್ಗೆ ಸತ್ಯ ಸಂಗತಿ ಹೊರಬರಲಿ. ನನ್ನ ಬಗ್ಗೆ ಬಹಳ ದಿನದಿಂದ ಚರ್ಚೆ ಆಗುತ್ತಿತ್ತು. ಕೋರ್ ಕಮಿಟಿ ಸಭೆಯಲ್ಲಿ ಕೆಲವು ಮಾತುಗಳನ್ನು ಹೇಳಿದ್ದೇನೆ. ಕೇಂದ್ರ ನಾಯಕರು, ರಾಜ್ಯ ನಾಯಕರು ಕೇಳಿದ್ರೆ ಉತ್ತರ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ರೇಣುಕಾಚಾರ್ಯ ಎಚ್ಚರಿಕೆ
ಇನ್ನು ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತು ಬಿಸಾಕಿ ಅನ್ನೋ ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಯಡಿಯೂರಪ್ಪ ಬಣದ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ದಾಣವಣಗೆರೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಎಸ್​​ವೈ ಬಣದ ಪ್ರಮುಖ ನಾಯಕ ಎಂಪಿ ರೇಣುಕಾಚಾರ್ಯ, ಯಡಿಯೂರಪ್ಪ ನವರ ಅಶೀರ್ವಾದ ದಿಂದ‌ ಕೆಲವರು ಸಿಎಂ ಆಗಿದ್ದಾರೆ, ಸಚಿವರು ಆಗಿದ್ದಾರೆ. ಏನಾದರೂ ಪಿತೂರಿ ನಡೆಸಿದರೆ ನಾವು ಸುಮ್ಮನೆ ಕೂರುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಎರಡು ವರ್ಷ ಪೂರೈಸಿದ್ದಾರೆ. ಪಕ್ಷ ಸಂಘಟನೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಪಕ್ಷ ಸಂಘಟನೆ ಮಾಡದಿದ್ರೆ ಈಗ ಮಾತನಾಡುವವರು ಇರುತ್ತಿರಲಿಲ್ಲ . ಆವರ ಮಗ ಎಂದು ಹೇಳುತ್ತಿಲ್ಲ ಅವರು ಜಾತ್ಯತೀತ ವ್ಯಕ್ತಿ . ರಾಜ್ಯದಲ್ಲಿ ಅನೇಕ ಹೋರಾಟವನ್ನು ವಿಜಯೇಂದ್ರ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯೇಂದ್ರ ಬಗ್ಗೆ ಮಾತನಾಡಿದ್ರೆ ಸಹಿಸುವುದಿಲ್ಲ
ಮೊನ್ನೆ ನಡೆದ ಪರಿಷತ್ ಚುನಾವಣೆಯಲ್ಲಿ ವಿಜಯೇಂದ್ರಗೆ ಅವರಿಗೆ ಕೆಟ್ಟ ಹೆಸರು ತರಲು ಅಡ್ಡ ಮತದಾನ ಮಾಡಿದ್ದಾರೆ. ತಾಕತ್ತು ಇದ್ದರೆ ಯಡಿಯೂರಪ್ಪ ಬಿಜೆಪಿಗೆ ಅವಶ್ಯಕತೆ ಇಲ್ಲ ಎಂದು ಹೇಳಲಿ ನೋಡೋಣಾ. ಇನ್ನೂ ಮುಂದೆ ವಿಜಯೇಂದ್ರ ಬಗ್ಗೆ ಅವಹೇಳನವಾಗಿ ಮಾತಾಡಿದ್ರೆ ಸಹಿಸುವುದಿಲ್ಲ. ಯಡಿಯೂರಪ್ಪ ಕಟ್ಟಿದ್ದ ಪಕ್ಷಕ್ಕೆ ಇವರೆಲ್ಲ ಬಂದು ಈಗ ಆವರ ಕುಟುಂಬದ ಬಗ್ಗೆ ಮಾತಾಡುತ್ತಾರೆ ಇದು ಒಳ್ಕೆಯದೆಲ್ಲ. 2028ಕ್ಕೆ ಆವರ ಮುಖಂಡತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ರಾಷ್ಟ್ರೀಯ ನಾಯಕರು ಬದಲಾವಣೆ ಮಾಡಲ್ಲ ಅವರೇ ಮುಂದುವರಿಯುತ್ತಾರೆ. ವಿಜಯೇಂದ್ರ ಅವರೇ ಮುಂದುವರಿಯಬೇಕು. ಇಲ್ಲದಿದ್ರೆ ನಾವು ಸಂಘಟನೆ ಮಾಡಿ ಹೋರಾಡುತ್ತೇವೆ.
ಆಂತರಿಕ ವಿಚಾರವನ್ನು ಮಾತಾಡಬಾರದು ಎಂದು ಮೌನವಾಗಿದ್ದೆ. ವಿಜಯೇಂದ್ರ ಬಗ್ಗೆ ಮಾತಾಡ್ರಿ ನಾವು ಅದೇ ತರ ಉತ್ತರ ಕೊಡುತ್ತೇವೆ .ಕುಮಾರ್ ಬಂಗಾರಪ್ಪ ನನ್ನು ಕರೆತಂದು ಶಾಸಕರನ್ನಾಗಿ ಮಾಡಿದ್ದು ವಿಜಯೇಂದ್ರ ಯಡಿಯೂರಪ್ಪ. ಯಡಿಯೂರಪ್ಪ ವಿಜಯೇಂದ್ರರವರ ಬೆಂಬಲ ಇಲ್ಲದೆ ಸೊರಬದಲ್ಲಿ ಗೆದ್ದು ತೋರಿಸಲಿ. ಕುಮಾರ್ ಬಂಗಾರಪ್ಪ ಜಿಲ್ಲಾ ಪಂಚಾಯತಿ ಸದಸ್ಯ ಆಗಲು ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.

SIR from tomorrow ನಾಳೆಯಿಂದ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಮನೆ ಮನೆಗೆ ಬಂದು ಪರಿಶೀಲನೆ

Death before operation ಚಪ್ಪಟೆ ಮೂಗಿಗೆ ಪ್ಲಾಸ್ಟಿಕ್ ಸರ್ಜರಿ; ಆಪರೇಷನ್‌‌ಗೂ ಮೊದಲೇ ಯುವಕ ಸಾವು!

TAGGED:Did Sadananda Gowda plan to bring down Vijayendra? Audio goes viralstirs in BJP
Share This Article
Facebook Twitter Copy Link Print
Previous Article Death before operation ಚಪ್ಪಟೆ ಮೂಗಿಗೆ ಪ್ಲಾಸ್ಟಿಕ್ ಸರ್ಜರಿ; ಆಪರೇಷನ್‌‌ಗೂ ಮೊದಲೇ ಯುವಕ ಸಾವು!
Next Article Nasal drops ವೈದ್ಯರು ಮಾಡಿದ ಎಡವಟ್ಟು : ದೃಷ್ಟಿ ಕಳೆದುಕೊಂಡ 19 ತಿಂಗಳ ಮಗು!

Popular Posts

Gruhajyoti scheme ಗೃಹಜ್ಯೋತಿ ದುರ್ಬಳಕೆಗೆ ಬ್ರೇಕ್: ಮನೆ ಮನೆಗೂ ಬರಲಿದೆ ಹೊಸ ಅರ್ಜಿ!

2 Min Read

Wanted… ಪ್ರೇಮಿಗಳನ್ನು ಬೇರೆ ಬೇರೆ ಮಾಡಲು ಬೇಕಾಗಿದ್ದಾರೆ ಚೀಫ್ ಬ್ರೇಕಪ್ ಆಫಿಸರ್! ತಿಂಗಳ ಸಂಬಳ 2.8 ಲಕ್ಷ ರೂ.!

3 Min Read

Fuel ಜುಲೈ 1ರಿಂದ ಪೆಟ್ರೋಲ್, ಡೀಸೆಲ್ ಮೇಲಿನ ನಿರ್ಬಂಧ ತೆರವು – ಕೇಂದ್ರದಿಂದ ಮಹತ್ವದ ನಿರ್ಧಾರ

1 Min Read

Sucide case ಪತ್ನಿಯ ಕಿರುಕುಳ, ದೌರ್ಜನ್ಯಕ್ಕೆ ಬೇಸತ್ತು ನೇಣಿಗೆ ಶರಣಾದ ಪತಿ

2 Min Read

You Might Also Like

ದೇಶಪ್ರಮುಖ

Jewellery ಚಿನ್ನದ ಬೆಲೆ ಕುಸಿತದ ಭೀತಿ: ಹಳೆ ಒಡವೆ ಮಾರಲು ಮುಗಿಬಿದ್ದ ಭಾರತೀಯರು

1 Min Read
ಕರ್ನಾಟಕದೇಶಪ್ರಮುಖವೈರಲ್

Droupadi Murmu ರಾಷ್ಟ್ರಪತಿಯ ಅಂಗರಕ್ಷಕನಿಗೆ ಯುವತಿಯರ ಕಾಟ- ಬಾಡಿಗಾರ್ಡ್​ಗೇ ಬೇಕಿದೆ ಬಾಡಿಗಾರ್ಡ್

1 Min Read
ಕರ್ನಾಟಕದೇಶಪ್ರಮುಖ

Highcourt order ಪತಿಗಿಂತ ಹೆಚ್ಚು ದುಡಿವ ಪತ್ನಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ : ಹೈಕೋರ್ಟ್‌

1 Min Read
filmಕರ್ನಾಟಕಪ್ರಮುಖ

Vijayalakshmi Darshan: ದರ್ಶನ್​ ಜೊತೆಗಿನ ಫೋಟೋ ಹಂಚಿಕೊಂಡ ಪತ್ನಿ

0 Min Read

Social Networks

Facebook-f Instagram Twitter
Welcome Back!

Sign in to your account

Lost your password?