newsics. com| ನ್ಯೂಸಿಕ್ಸ್
ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಅವರು ಇಂದು ತಿರುಪತಿಯ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಪೂಜೆ ಸಲ್ಲಿಸಿ, ಮುಡಿ ನೀಡಿ ಹರಕೆ ತೀರಿಸಿದ್ದಾರೆ. ಜೊತೆಗೆ ದೇವಸ್ಥಾನದ ಆನೆಗಳಿಗೂ ಆಹಾರವನ್ನೂ ನೀಡಿದ್ದಾರೆ.
ದೇವಾಲಯಕ್ಕೆ ಆಗಮಿಸಿದ ಅನಂತ್ ಅಂಬಾನಿ ಅವರನ್ನು ತಿರುಮಲ ತಿರುಪತಿ ದೇವಸ್ಥಾನದ ಅಧಿಕಾರಿಗಳು ಮತ್ತು ಅರ್ಚಕರು ಆತ್ಮೀಯವಾಗಿ ಸ್ವಾಗತಿಸಿದರು. ರಂಗನಾಯಕುಲ ಮಂಟಪದಲ್ಲಿ ಅವರಿಗೆ ವೇದ ಮಂತ್ರಗಳ ಮೂಲಕ ಆಶೀರ್ವಾದ ನೀಡಿ, ತೀರ್ಥ ಪ್ರಸಾದ ಹಾಗೂ ದೇವರ ಪವಿತ್ರ ಶೇಷ ವಸ್ತ್ರವನ್ನು ನೀಡಿ ಗೌರವಿಸಲಾಯಿತು.
ಅಂಬಾನಿ ಕುಟುಂಬಕ್ಕೆ ತಿಮ್ಮಪ್ಪನ ಮೇಲೆ ಅಪಾರ ಭಕ್ತಿ ಇದ್ದು ಅವರು ಪ್ರತಿ ವರ್ಷ ತಪ್ಪದೇ ತಿರುಮಲಕ್ಕೆ ಭೇಟಿ ನೀಡುತ್ತಾರೆ. ಇದಕ್ಕೂ ಮುನ್ನ, ಜೂನ್ 12 ರಂದು ಕೂಡ ಅನಂತ್ ಅಂಬಾನಿ ತಮ್ಮ ತಂದೆ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ ಜೊತೆ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಅನಂತ್ ಅವರ ಪತ್ನಿ ರಾಧಿಕಾ ಮರ್ಚೆಂಟ್ ಕೂಡ ಜೊತೆಗಿದ್ದರು. ಇಡೀ ಕುಟುಂಬ ಒಟ್ಟಾಗಿ ದೇವರಿಗೆ ಪೂಜೆ ಸಲ್ಲಿಸಿತ್ತು.