Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > New Trend ಸ್ಮಶಾನದಲ್ಲಿ ಡೇಟಿಂಗ್! ಯುವಜನರ ಹೊಸ ಟ್ರೆಂಡ್
ಕರ್ನಾಟಕದೇಶಪ್ರಮುಖಲೈಫ್‌ಸ್ಟೈಲ್

New Trend ಸ್ಮಶಾನದಲ್ಲಿ ಡೇಟಿಂಗ್! ಯುವಜನರ ಹೊಸ ಟ್ರೆಂಡ್

Share
2 Min Read
SHARE

newsics.com | ನ್ಯೂಸಿಕ್ಸ್

ಕಾಫಿ ಶಾಪ್, ಪಾರ್ಕ್‌ಗಳೆಲ್ಲಾ ಹಳೆಯದಾಯ್ತು. ಈಗಿನ ಹೊಸ ಟ್ರೆಂಡ್ ಗ್ರೇವ್‌ಯಾರ್ಡ್ ಡೇಟಿಂಗ್y. ಯುವ ಜೋಡಿಗಳು ಸ್ಮಶಾನಗಳಲ್ಲಿ ಯಾಕೆ ಡೇಟಿಂಗ್ ಮಾಡ್ತಿದ್ದಾರೆ? ಇದರ ಹಿಂದಿನ ಅಸಲಿ ಕಾರಣಗಳೇನು?

ಒಂದು ಕಾಲದಲ್ಲಿ ಡೇಟಿಂಗ್ ಅಂದ್ರೆ ಕಾಫಿ ಶಾಪ್, ರೆಸ್ಟೋರೆಂಟ್ ಅಥವಾ ಸಿನಿಮಾ ಥಿಯೇಟರ್‌ಗಳಿಗೆ ಸೀಮಿತವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಯುವಕರ ಆಲೋಚನೆಗಳು ಇನ್ನೂ ವೇಗವಾಗಿ ಬದಲಾಗುತ್ತಿವೆ. ಸದ್ಯ ‘ಗ್ರೇವ್‌ಯಾರ್ಡ್ ಡೇಟಿಂಗ್’ ಎಂಬ ಹೊಸ ಟ್ರೆಂಡ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹೆಸರು ಕೇಳಿದರೆ ಮೈ ಜುಂ ಎನಿಸಿದರೂ, ಈ ಕಾಲದ ಪ್ರೇಮಿಗಳು ಇದಕ್ಕೆ ಜೈ ಎನ್ನುತ್ತಿದ್ದಾರೆ.

ಡೇಟಿಂಗ್ ಅಂದ ತಕ್ಷಣ ನೆನಪಾಗೋದು ಸುಂದರ ತಾಣಗಳು ಅಥವಾ ಲೈಟಿಂಗ್ಸ್ ಇರುವ ಹೋಟೆಲ್‌ಗಳು. ಆದರೆ ಈ ಟ್ರೆಂಡ್‌ನಲ್ಲಿ ಪ್ರೇಮಿಗಳು ಸ್ಮಶಾನಗಳಲ್ಲಿ ಭೇಟಿಯಾಗುತ್ತಾರೆ. ಅಲ್ಲಿ ಕುಳಿತು ಹರಟೆ ಹೊಡೆಯುತ್ತಾರೆ. ಕೇಳಲು ವಿಚಿತ್ರ ಎನಿಸಿದರೂ, ಇನ್‌ಸ್ಟಾಗ್ರಾಮ್, ಟಿಕ್‌ಟಾಕ್‌ನಂತಹ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಈಗ ತುಂಬಾನೇ ಹರಿದಾಡುತ್ತಿವೆ. ಈಗಾಗಲೇ ಫ್ಲಡ್‌ಲೈಟಿಂಗ್, ಮಂಕಿ ಬ್ಯಾರಿಂಗ್, ಬ್ರೆಡ್‌ಕ್ರಂಬಿಂಗ್‌ನಂತಹ ವಿಚಿತ್ರ ಡೇಟಿಂಗ್ ಟ್ರೆಂಡ್‌ಗಳನ್ನು ನೋಡಿದ್ದೇವೆ. ಈಗ ಇವೆಲ್ಲವನ್ನೂ ಮೀರಿಸಿ ಈ ಗ್ರೇವ್‌ಯಾರ್ಡ್ ಡೇಟಿಂಗ್ ಚರ್ಚೆಯಲ್ಲಿದೆ.

ಜನದಟ್ಟಣೆ ಇರುವ ಸ್ಥಳಗಳ ಬದಲು, ಯುವಜನರು ಏಕಾಂತ ಪ್ರದೇಶಗಳತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣಗಳೆಂದರೆ ಶಾಂತಿ, ಪ್ರೈವೆಸಿ ಮತ್ತು ಗಂಭೀರ ಸಂಭಾಷಣೆ. ನಗರದ ಟ್ರಾಫಿಕ್ ಗದ್ದಲ, ರೆಸ್ಟೋರೆಂಟ್‌ಗಳ ಕಿರಿಚಾಟ ಇಲ್ಲದೆ ಸ್ಮಶಾನಗಳು ನಿಶ್ಯಬ್ದವಾಗಿರುತ್ತವೆ. ಇಲ್ಲಿ ನಮ್ಮನ್ನು ನೋಡುವವರು, ಡಿಸ್ಟರ್ಬ್ ಮಾಡುವವರು ಯಾರೂ ಇರಲ್ಲ. ಹಾಗಾಗಿ, ಮನಸ್ಸಿನ ಮಾತುಗಳನ್ನು ಧೈರ್ಯವಾಗಿ ಹಂಚಿಕೊಳ್ಳಲು ಇದು ಸರಿಯಾದ ಜಾಗ ಎಂದು ಕೆಲವರು ಭಾವಿಸುತ್ತಾರೆ. ಹಳೆಯ ಸಮಾಧಿಗಳು, ಮರಗಳ ನಡುವೆ ಕುಳಿತಾಗ ಜೀವನ, ಭಯ, ಕನಸುಗಳ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತವೆ ಎಂದು ವೋಗ್ ಇಂಡಿಯಾದಂತಹ ಪತ್ರಿಕೆಗಳು ಕೂಡ ಹೇಳಿವೆ. ಇದೊಂದು ರೀತಿ ಹೊಂದಾಣಿಕೆ ಪರೀಕ್ಷೆ ಇದ್ದಂತೆ ಎನ್ನುತ್ತಾರೆ ಡೇಟರ್ಸ್.

ಸಾಮಾನ್ಯವಾಗಿ ಸೂರ್ಯಾಸ್ತದ ನಂತರ ಸ್ಮಶಾನದ ಕಡೆ ಹೋಗಲು ಎಲ್ಲರೂ ಹೆದರುತ್ತಾರೆ. ಆತ್ಮಗಳು ಓಡಾಡುತ್ತವೆ, ದೆವ್ವಗಳಿರುತ್ತವೆ ಎಂಬ ನಂಬಿಕೆಗಳಿವೆ. ಆದರೆ ಈ ಗ್ರೇವ್‌ಯಾರ್ಡ್ ಡೇಟಿಂಗ್ ಮಾಡುವವರಿಗೆ ಪ್ರೀತಿಯ ಮುಂದೆ ಈ ಭಯ ಕಾಣುತ್ತಿಲ್ಲವಂತೆ. ಆದರೆ, ಇದು ಎಲ್ಲರಿಗೂ ಇಷ್ಟವಾಗಬೇಕೆಂದಿಲ್ಲ. ಕೆಲವರಿಗೆ ಇದು ವಿಚಿತ್ರ ಎನಿಸಿದರೆ, ಇನ್ನು ಕೆಲವರು ಇದನ್ನು ಅಸಹ್ಯಕರ ಎಂದು ಭಾವಿಸುತ್ತಾರೆ. ಸತ್ತವರು ಮಲಗುವ ಜಾಗದಲ್ಲಿ ರೊಮ್ಯಾನ್ಸ್ ಏನೂಂತ ಟೀಕಿಸುವವರೂ ಇದ್ದಾರೆ. ಇಂದಿನ ದಿನಗಳಲ್ಲಿ, ಜನರ ಇಷ್ಟಗಳು ಅವರವರ ಆಯ್ಕೆ. ಜೆನ್-ಝಿ ಮತ್ತು ಮಿಲೇನಿಯಲ್‌ಗಳು ತಮ್ಮ ಒತ್ತಡದ ಬದುಕಿನಿಂದ ವಿರಾಮ ಪಡೆಯಲು ಇಂತಹ ನಿಶ್ಯಬ್ದ ಜಾಗಗಳನ್ನು ಹುಡುಕುತ್ತಿದ್ದಾರೆ ಎಂಬ ಅಭಿಪ್ರಾಯಗಳೂ ಇವೆ.

ರಸ್ತೆಯಲ್ಲೇ ಬೆತ್ತಲಾದ ಯುವತಿ: ಕ್ಯಾಬ್ ಚಾಲಕನ ಮೇಲೆ ಹಲ್ಲೆ, ವೈರಲ್ ವಿಡಿಯೋ ನೋಡಿ

50 ಮೊಟ್ಟೆ ತಿನ್ನುವ ಚಾಲೆಂಜ್‌ ಸ್ವೀಕರಿಸಿದ್ದ ವ್ಯಕ್ತಿ ಸಾವು! 42ನೇ ಮೊಟ್ಟೆ ತಿಂದ ಬಳಿಕ ಕುಸಿದು ಬಿದ್ದು ದುರಂತ

TAGGED:Dating in a cemetery! A new trend among young people
Share This Article
Facebook Twitter Copy Link Print
Previous Article ಪದ್ಮಭೂಷಣ ಗೌರವಕ್ಕೆ ಭಾಜನರಾದ ರೋಹಿತ್ ಶರ್ಮಾ; ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ

Popular Posts

New Trend ಸ್ಮಶಾನದಲ್ಲಿ ಡೇಟಿಂಗ್! ಯುವಜನರ ಹೊಸ ಟ್ರೆಂಡ್

2 Min Read

ಪದ್ಮಭೂಷಣ ಗೌರವಕ್ಕೆ ಭಾಜನರಾದ ರೋಹಿತ್ ಶರ್ಮಾ; ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ

1 Min Read

ಎಲ್ ನಿನೋ ಪರಿಣಾಮ ಎದುರಿಸಲು ಮೇಘಾಲಯ ಸಜ್ಜು; ನೀರಿನ ಭದ್ರತೆ, ಕೃಷಿಗೆ ಆದ್ಯತೆ

1 Min Read

ಎಲ್ ನಿನೋ ಪರಿಣಾಮ ಎದುರಿಸಲು ಮೇಘಾಲಯ ಸಜ್ಜು; ನೀರಿನ ಭದ್ರತೆ, ಕೃಷಿಗೆ ಆದ್ಯತೆ

1 Min Read

You Might Also Like

ಕರ್ನಾಟಕಪ್ರಮುಖ

ಕಾರವಾರ-ಬಳ್ಳಾರಿಯಲ್ಲಿ ಲೋಕಾಯುಕ್ತ ದಾಳಿ: ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಗಳು ಬಲೆಗೆ, ಕೋಟಿ ಕೋಟಿ ಆಸ್ತಿ ಪತ್ತೆ

1 Min Read
ಲೈಫ್‌ಸ್ಟೈಲ್

 ದೆಹಲಿ ಬಿಸಿಲಿನ ಮಧ್ಯೆ ಎಸಿ ಕ್ಯಾಬ್‌ಗಳ ಸಂಕಷ್ಟ: ಪ್ರಯಾಣಿಕರು-ಚಾಲಕರ ನಡುವೆ ಹೆಚ್ಚಿದ ತಕರಾರು

1 Min Read
ಕರ್ನಾಟಕದೇಶಪ್ರಮುಖ

ಗೃಹಲಕ್ಷ್ಮಿ ಗೋಲ್‌ಮಾಲ್: 19 ಸಾವಿರ ಫಲಾನುಭವಿಗಳಿಗೆ ಒಂದೇ ಖಾತೆ! ಕೋಟಿಗಟ್ಟಲೆ ಹಣ ಜಮಾ

2 Min Read
ಕರ್ನಾಟಕಪ್ರಮುಖಮನರಂಜನೆ

ಕಾಡಿದ ಖಿನ್ನತೆ: ಜೀವ ಕಳೆದುಕೊಂಡ ಯುವ ನಿರ್ದೇಶಕ ಮಂಜುನಾಥ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?