Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > ಯುಎಇಯಲ್ಲಿ 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ
ವಿದೇಶಪ್ರಮುಖ

ಯುಎಇಯಲ್ಲಿ 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ

Share
2 Min Read
SHARE

newsics.com/ನ್ಯೂಸಿಕ್ಸ್

ಯುಎಐ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಅದರಂತೆ, ಇನ್ನೂ ಮುಂದೆ ದೇಶದಲ್ಲಿ 15 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು 23 . ಸೈಬರ್ ಬುಲ್ಲೀಯಿಂಗ್, ಆನ್‌ಲೈನ್ ವಂಚನೆ, ಅನುಚಿತ ಕಂಟೆಂಟ್‌ನಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಈ ಕಠಿಣ ಕ್ರಮ ಜಾರಿಗೆ ಬಂದಿದೆ.

ಹೌದು, ಇತ್ತೀಚಿನ ವರ್ಷಗಳಲ್ಲಿ ಸೈಬ‌ರ್ ಬುಲ್ಲಿಂಗ್ (ಆನ್‌ಲೈನ್ ಪೀಡನೆ), ಸ್ಟ್ರೀನ್ ಅಡಿಕ್ಷನ್ (ಮೊಬೈಲ್ ದಾಸ್ಯ), ಖಿನ್ನತೆ ಮತ್ತು ಅಪರಿಚಿತರಿಂದ ಎದುರಾಗುವ ಅಪಾಯಗಳು ಮಕ್ಕಳಲ್ಲಿ ಗಣನೀಯವಾಗಿ ಹೆಚ್ಚುತ್ತಿವೆ. ಮಕ್ಕಳಿಗೆ ಸುರಕ್ಷಿತ ಮತ್ತು ಆರೋಗ್ಯಕರ ಡಿಜಿಟಲ್ ವಾತಾವರಣವನ್ನು ನಿರ್ಮಿಸುವುದು ಈ ಕಾನೂನಿನ ಮುಖ್ಯ ಉದ್ದೇಶವಾಗಿದೆ. ಕೇವಲ ಮನರಂಜನೆಯ ಹೆಸರಿನಲ್ಲಿ ಮಕ್ಕಳು ತಮ್ಮ ಬಾಲ್ಯವನ್ನು ಕಳೆದುಕೊಳ್ಳಬಾರದು ಮತ್ತು ಆನ್‌ಲೈನ್ ವಂಚನೆಗಳಿಗೆ ಬಲಿಯಾಗಬಾರದು ಎಂದು ಯುಎಇ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಮನಿಕಂಟ್ರೋಲ್ ವರದಿ ಮಾಡಿರುವಂತೆ, ಈ ಹೊಸ ಕಾನೂನಿನ ಪ್ರಕಾರ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟಿಪ್ಟಾಕ್, ಎಕ್ಸ್ (ಟ್ವಿಟರ್) ಅಥವಾ ಸ್ಕ್ಯಾಪ್‌ಚಾಟ್‌ನಂತಹ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಖಾತೆಗಳನ್ನು ಹೊಂದುವಂತಿಲ್ಲ. ಕೇವಲ ಖಾತೆ ತೆರೆಯುವುದಷ್ಟೇ ಅಲ್ಲದೆ, ಪೋಸ್ಟ್‌ಗಳನ್ನು ಮಾಡುವುದು, ಕಮೆಂಟ್ ಮಾಡುವುದು, ಶೇರ್ ಮಾಡುವುದು ಅಥವಾ ಸಾರ್ವಜನಿಕ ಗ್ರೂಪ್‌ಗಳನ್ನು ಸೇರುವುದನ್ನು ಸಹ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅತ್ಯಂತ ಪ್ರಮುಖವಾದ ಅಂಶವೆಂದರೆ, ಪೋಷಕರು ಒಪ್ಪಿಗೆ ನೀಡಿದರೂ ಸಹ ಮಕ್ಕಳಿಗೆ ಖಾತೆ ತೆರೆಯಲು ಕಾನೂನಿನಲ್ಲಿ ಅವಕಾಶವಿಲ್ಲ.!

ಹದಿಹರೆಯದವರಿಗೆ ಕಟ್ಟುನಿಟ್ಟಿನ ನಿಯಮಗಳು!

ಏತನ್ಮಧ್ಯೆ, 15 ರಿಂದ 16 ವರ್ಷದ ಹದಿಹರೆಯದವರಿಗೆ ಸಾಮಾಜಿಕ ಜಾಲತಾಣ ಬಳಸಲು ಸೀಮಿತ ಅವಕಾಶ ನೀಡಲಾಗಿದ್ದರೂ, ಅದಕ್ಕೆ ಕಠಿಣ ನಿಬಂಧನೆಗಳನ್ನು ವಿಧಿಸಲಾಗಿದೆ. ಇವರ ಖಾತೆಗಳಲ್ಲಿ ಪೋಷಕರ ನಿಗಾ ಕಡ್ಡಾಯವಾಗಿರುತ್ತದೆ. ಅಪರಿಚಿತರೊಂದಿಗೆ ಸಂವಹನ ನಡೆಸುವುದು, ವಯಸ್ಸಿಗೆ ಸೂಕ್ತವಲ್ಲದ ಕಂಟೆಂಟ್‌ಗಳನ್ನು ವೀಕ್ಷಿಸುವುದನ್ನು ನಿರ್ಬಂಧಿಸಲಾಗುತ್ತದೆ. ಅಲ್ಲದೆ, ರಾತ್ರಿ ವೇಳೆ ಆಪ್‌ ಬಳಕೆಯನ್ನು ನಿಯಂತ್ರಿಸುವ ಸ್ಟ್ರೀನ್ ಟೈಮ್ ಮಿತಿಗಳನ್ನು ಅನ್ವಯಿಸಲಾಗುತ್ತದೆ.

ಮುಂದುವರೆದು, ಈ ಕಾನೂನನ್ನು ಜಾರಿಗೆ ತರಲು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಯುಎಇ ಸರ್ಕಾರ 12 ತಿಂಗಳ ಕಾಲಾವಕಾಶ ನೀಡಿದೆ. ಕಂಪನಿಗಳು ಕೇವಲ ಬಳಕೆದಾರರು ಸ್ವಯಂ ಘೋಷಿಸುವ ವಯಸ್ಸನ್ನು ನಂಬುವಂತಿಲ್ಲ. ಬದಲಿಗೆ ಸುಧಾರಿತ ಎಐ (Al) ತಂತ್ರಜ್ಞಾನ ಮತ್ತು ಅಧಿಕೃತ ಡಿಜಿಟಲ್ ಐಡಿಗಳ ಮೂಲಕ ಕಡ್ಡಾಯವಾಗಿ ವಯಸ್ಸನ್ನು ಪರಿಶೀಲಿಸಬೇಕು. ನಿಯಮ ಉಲ್ಲಂಘಿಸುವ ಕಂಪನಿಗಳಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ ಅಥವಾ ಯುಎಇನಲ್ಲಿ ಆ ಆಪ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಅಧಿಕಾರವನ್ನು ಅಲ್ಲಿನ ಟೆಲಿಕಾಂ ನಿಯಂತ್ರಣ ಪ್ರಾಧಿಕಾರಕ್ಕೆ ನೀಡಲಾಗಿದೆ.

ಕೇವಲ ಬ್ರಿಟನ್ ಮಾತ್ರವಲ್ಲದೆ, ವಿಶ್ವದ ಹಲವು ರಾಷ್ಟ್ರಗಳು ಈಗಾಗಲೇ ಇಂತಹ ನಿರ್ಧಾರಗಳನ್ನು ಕೈಗೊಂಡಿವೆ:

ಆಸ್ಟ್ರೇಲಿಯಾ: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳನ್ನು ಸಂಪೂರ್ಣವಾಗಿ ನಿಷೇಧಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಲೇಷ್ಯಾ ಮತ್ತು ಇಂಡೋನೇಷ್ಯಾ: ಈ ದೇಶಗಳೂ ಸಹ ಕಟ್ಟುನಿಟ್ಟಾದ ವಯಸ್ಸಿನ ತಪಾಸಣೆಯ ಮೂಲಕ 16 ವರ್ಷದೊಳಗಿನವರ ಡಿಜಿಟಲ್ ಬಳಕೆಯನ್ನು ನಿಯಂತ್ರಿಸುತ್ತಿವೆ.

ಬ್ರಿಟನ್: ಎರಡು ದಿನದ ಹಿಂದೆ ಬ್ರಿಟನ್ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಘೋಷಿಸಿದೆ.

Health – Insomnia ನಿದ್ರಾಹೀನತೆ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು! ಯಾಕೆ ಹೀಗೆ?

 

TAGGED:UAE bans social media for children under 15
Share This Article
Facebook Twitter Copy Link Print
Previous Article Health – Insomnia ನಿದ್ರಾಹೀನತೆ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು! ಯಾಕೆ ಹೀಗೆ?
Next Article Nivedita Gowda: ಗರಿ ಬಿಚ್ಚಿ ಕುಣಿದ ನಿವೇದಿತಾ ಗೌಡ- ಕಿಶನ್! ವೈರಲ್ ವಿಡಿಯೋ ನೋಡಿ

Popular Posts

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read

ಮೊಡವೆ, ತಲೆನೋವಿಗೆ ಇದೇ ರಾಮಬಾಣ!; ಇದನ್ನು ಬಳಸುವುದರಿಂದಾಗುವ ಪ್ರಯೋಜನಗಳೇನು?

2 Min Read

9 ವರ್ಷಗಳ ಕಾನೂನು ಹೋರಾಟಕ್ಕೆ ತೆರೆ; ಚೈತ್ರಾ ಕುಂದಾಪುರ ಭಾವುಕ ಪೋಸ್ಟ್

1 Min Read

Nivedita Gowda: ಗರಿ ಬಿಚ್ಚಿ ಕುಣಿದ ನಿವೇದಿತಾ ಗೌಡ- ಕಿಶನ್! ವೈರಲ್ ವಿಡಿಯೋ ನೋಡಿ

1 Min Read

You Might Also Like

ದೇಶಪ್ರಮುಖಮನರಂಜನೆವಿದೇಶ

New Crush Era ಕ್ರಿಕೆಟ್ ಲೋಕದ ನ್ಯೂ ಕ್ರಶ್! ಆಸೀಸ್ ಕ್ರಿಕೆಟರ್ ಇರಾ ಏರಿ ಭಾರತೀಯ ಮೂಲದ ಸುಂದರಿ

2 Min Read
ಕರ್ನಾಟಕದೇಶಪ್ರಮುಖವಿದೇಶ

Gold expensive again ಯುದ್ಧ ಅಂತ್ಯ ಹಿನ್ನೆಲೆ: ಮತ್ತೆ ದುಬಾರಿಯಾಗಲಿದೆ ಚಿನ್ನ! ರಿಸರ್ಚ್ ಸಂಸ್ಥೆ ಹೇಳಿದ್ದೇನು?

2 Min Read
ವಿದೇಶ

ಪಶ್ಚಿಮ ಏಷ್ಯಾ ಯುದ್ಧಕ್ಕೆ ಅಂತ್ಯ? ಟ್ರಂಪ್–ಇರಾನ್ ಅಧ್ಯಕ್ಷರ ಐತಿಹಾಸಿಕ ಒಪ್ಪಂದ

1 Min Read
ವಿದೇಶದೇಶಪ್ರಮುಖ

Fifa 2026 ಫಿಫಾ ವಿಶ್ವಕಪ್: ಎಂಬಾಪೆ ದಾಖಲೆಯ ಬೇಟೆ, ಸೆನೆಗಲ್ ವಿರುದ್ಧ ಫ್ರಾನ್ಸ್‌ಗೆ ಭರ್ಜರಿ ಜಯ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?