ಹೈದರಾಬಾದ್‌ನಲ್ಲಿರುವ ಅಮೆಜಾನ್ ಕಚೇರಿಗೆ ತನ್ನ ಪೋಷಕರನ್ನು ಕರೆದುಕೊಂಡು ಹೋದ ಯುವತಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರ್ಷಗಳ ಕಾಲ ವಿಡಿಯೊ ಕರೆಗಳ ಮೂಲಕ ಮಾತ್ರ ತನ್ನ ಕೆಲಸದ ಸ್ಥಳವನ್ನು ತೋರಿಸಿದ್ದ ಆಕೆ, ಕೊನೆಗೂ ಪೋಷಕರನ್ನು ನೇರವಾಗಿ ಕಚೇರಿಗೆ ಕರೆದುಕೊಂಡು ಹೋಗುವ ಕನಸನ್ನು ನನಸು ಮಾಡಿಕೊಂಡಿದ್ದಾಳೆ.
ಕಚೇರಿ ಆವರಣ ಸುತ್ತಾಟ, ಕುಟುಂಬದೊಂದಿಗೆ ಕಳೆದ ಸಂತಸದ ಕ್ಷಣಗಳು ಮತ್ತು ಪೋಷಕರ ಮುಖದಲ್ಲಿದ್ದ ಹೆಮ್ಮೆ ಹಾಗೂ ಸಂತೋಷವನ್ನು ವಿಡಿಯೊದಲ್ಲಿ ಕಾಣಬಹುದು. “ಪೋಷಕರ ಕಣ್ಣಲ್ಲಿ ಹೆಮ್ಮೆ ಕಾಣುವಾಗ ನಮ್ಮ ಎಲ್ಲಾ ಶ್ರಮ ಸಾರ್ಥಕವಾಗುತ್ತದೆ” ಎಂಬ ಸಂದೇಶದೊಂದಿಗೆ ಹಂಚಿಕೊಂಡಿರುವ ಈ ವಿಡಿಯೊ ಅನೇಕರ ಮನ ಮುಟ್ಟಿದೆ.
ವಿಡಿಯೊಗೆ ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಜೀವನದ ಅತ್ಯಂತ ಅಮೂಲ್ಯ ಕ್ಷಣಗಳಲ್ಲಿ ಇದು ಒಂದು” ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಪೋಷಕರ ಕನಸುಗಳನ್ನು ನನಸು ಮಾಡುವ ಮಕ್ಕಳ ಭಾವನಾತ್ಮಕ ಬಂಧವನ್ನು ಈ ವಿಡಿಯೊ ಮತ್ತೊಮ್ಮೆ ನೆನಪಿಸಿದೆ.