newsics.com
ಅಯೋಧ್ಯೆ: 4 ವರ್ಷದ ದಲಿತ ಬಾಲಕಿ ಮೇಲೆ ನೆರೆಮನೆಯ ವ್ಯಕ್ತಿ ಅತ್ಯಾಚಾರ ಮಾಡಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ.
35 ವರ್ಷದ ಸಲ್ಮಾನ್ ಕೃತ್ಯವೆಸಗಿರುವ ಆರೋಪಿ ಎಂದು ತಿಳಿದು ಬಂದಿದೆ. ಕೃತ್ಯ ಎಸಗಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಎನ್‌ಕೌಂಟರ್ ನಡೆಸಿ ಆರೋಪಿ ಸಲ್ಮಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬಾಲಕಿ ಸ್ಥಿತಿ ಚಿಂತಜನಕವಾಗಿದೆ..
ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿ ಆರೋಪಿ ಸಲ್ಮಾನ್ ಓಡಿಹೋಗುತ್ತಿದ್ದ ಎಂದು ಸಿಒ ಸದರ್ ಸಂದೀಪ್ ಸಿಂಗ್ ತಿಳಿಸಿದ್ದಾರೆ. ಮಹಾರಾಜ್‌ಗಂಜ್‌ನ ಐಮಿ ಅಲಾಪುರ್ ರಸ್ತೆಯಲ್ಲಿರುವ ತಾರಾಪುರ ಗ್ರಾಮದ ಬಳಿ ಎನ್‌ಕೌಂಟರ್ ನಡೆದಿದೆ. ಎನ್‌ಕೌಂಟರ್‌ನಲ್ಲಿ ಗುಂಡು ತಗುಲಿ ಸಲ್ಮಾನ್ ಗಾಯಗೊಂಡಿದ್ದರು. ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.