newsics.com
ಸುಡಾನ್: ಪೂರ್ವ ಸುಡಾನ್‌ನಲ್ಲಿ ಸುರಿದ ಭಾರೀ ಮಳೆಗೆ ಅಣೆಕಟ್ಟು ಒಡೆದು ಕನಿಷ್ಠ 60 ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಧಾರಾಕಾರ ಮಳೆಯಿಂದಾಗಿ ಕೆಂಪು ಸಮುದ್ರದ ಸಮೀಪದಲ್ಲಿದ್ದ ಅರ್ಬತ್ ಅಣೆಕಟ್ಟು ಒಡೆದಿದ್ದು, ಸುಮಾರು 20 ಹಳ್ಳಿಗಳಿಗೆ ನೀರು ನುಗ್ಗಿದೆ. 50,000ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 200 ಮಂದಿ ನಾಪತ್ತೆಯಾಗಿದ್ದಾರೆ. ಪ್ರದೇಶವನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ವರದಿ ತಿಳಿಸಿದೆ.
ಈ ವರ್ಷ ಸುಡಾನ್‌ನಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ 132 ಮಂದಿ ಮೃತಪಟ್ಟಿದ್ದಾರೆ. 1,18,000 ಮಂದಿ ಸಂಕಷ್ಟಕ್ಕೊಳಗಾಗಿದ್ದಾರೆ.
ಯಾವುದೇ ಮಾಹಿತಿ ನೀಡದೆ ಪಾಕ್ ಆಗಸದಲ್ಲಿ 46 ನಿಮಿಷ ಹಾರಾಡಿದ್ದ ಪ್ರಧಾನಿ ಮೋದಿ ವಿಮಾನ! ಡಾನ್ ವರದಿಯಿಂದ ಬಹಿರಂಗ
ದೈಹಿಕ ಸಂಪರ್ಕ ಬೆಳೆಸಿದ್ರೆ ಮಾತ್ರ ಪೂಜೆಗೆ ಫಲ; ಪುರೋಹಿತನ ಅಸಭ್ಯ ವರ್ತನೆಗೆ ಧರ್ಮದೇಟು