Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

Share
4 Min Read
SHARE

newsics.com / ನ್ಯೂಸಿಕ್ಸ್

ಶುಭೋದಯ

ಇಂದಿನ ಪಂಚಾಂಗ/ ರಾಶಿ ಭವಿಷ್ಯ

16-06-2026, ಮಂಗಳವಾರ

ಪರಾಭವ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ನಿಜ ಜ್ಯೇಷ್ಠ ಮಾಸ ಶುಕ್ಲಪಕ್ಷದ ದ್ವಿತೀಯಾ.

* ಚಂದ್ರ ದರ್ಶನ, ಅಲ್- ಹಿಜ್ರಾ

* ದೇಶಬಂಧು ಚಿತ್ತರಂಜನ್ ದಾಸ್ ಸ್ಮೃತಿದಿನ

——-

ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಮೃಗಶಿರಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಧೃತಿ, ಕರಣ : ಗರಜ, ಸೂರ್ಯೋದಯ – 05 – 54 am, ಸೂರ್ಯಾಸ್ತ – 06 – 45 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:33 – 17:09, ಯಮಗಂಡ ಕಾಲ 09:08 – 10:44, ಗುಳಿಕ ಕಾಲ 12:20 – 13:57.

===========

ಇಂದಿನ ರಾಶಿ ಭವಿಷ್ಯ

ಮೇಷ

ನಿಮ್ಮ ಕಾರ್ಯದ ಶಿಸ್ತಿಗೆ ಸಹೋದ್ಯೋಗಿಗಳ ಸಹಾಯ ಪಡೆಯಿರಿ. ಆತ್ಮವಂಚನೆಗೆ ಅವಕಾಶ ಕೊಡಬೇಡಿ. ಪ್ರಾಮಾಣಿಕವಾಗಿದ್ದರೆ ನೀವು ತೃಪ್ತರು. ನಿಮ್ಮ ಮೇಲೆ ವಿಶ್ವಾಸವು ಮೂಡುವ ದಿನವಾಗಿದೆ. ಸೋಮಾರಿತನ ಮೇಲುಗೈ ಸಾಧಿಸಬಹುದು, ಆದರೆ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಒಳ್ಳೆಯ ಸುದ್ದಿ ಸಿಗಬಹುದು. ಆದಾಯ ಚೆನ್ನಾಗಿರುತ್ತದೆ. ನಿಮ್ಮ ಬಗ್ಗಯೇ ನೀವು ಹೇಳಿಕೊಳ್ಳುವುದು ಉಚಿತವಾಗದು. ಕೆಲವು ಸಂದರ್ಭವು ನಿಮ್ಮ ನಿಯಂತ್ರಣವನ್ನು ಮೀರಿ ತಪ್ಪು ಆಗಬಹುದು.

ವೃಷಭ

ಸಾಲಕ್ಕೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗಲಿವೆ. ಯಾವುದನ್ನೂ ಕಲಿಸುವ ಪ್ರಯತ್ನ ಮಾಡಬೇಡಿ. ಹಣಕಾಸಿನಲ್ಲಿ ಸ್ವಲ್ಪ ಚಿಂತೆ ಉಂಟಾಗಬಹುದು. ಸಂಬಂಧಿತ ವ್ಯಕ್ತಿಗಳೊಂದಿಗೆ ಸಮಯ ಕಳೆಯಲು ಅವಕಾಶ ಸಿಗಬಹುದು. ಕೆಲಸದ ಒತ್ತಡ ಹೆಚ್ಚು ಇರುವುದು ಸಾಧ್ಯ. ವಿವಾದಗಳನ್ನು ಬದಿಗೊತ್ತುವುದು ಉತ್ತಮ. ಉದ್ಯೋಗಿಗಳು ಬಹಳ ಪರಿಶ್ರಮದಿಂದ ಲಾಭವನ್ನು ಪಡೆಯಬೇಕಾಗಿದೆ. ಸ್ನೇಹಿತರನ್ನು ದೂರ ಮಾಡಿಕೊಂಡು ಒಂಟಿಯಾಗಿ ಇರಲು ಇಚ್ಛಿಸುವಿರಿ. ಯಾರ ಮೇಲೂ ಹಗುರಾದ ಮನೋಭಾವ ಬೇಡ.

ಮಿಥುನ

ಇಂದು ಹೊಸದಾಗಿ ವೃತ್ತಿಯನ್ನು ಆರಂಭಿಸಿದವರಿಗೆ ತಮ್ಮ ವೃತ್ತಿಜೀವನದ ಬಗ್ಗೆ ಗೊಂದಲದಲ್ಲಿ ಇರುವರು. ಹೊಸ ಕೆಲಸವನ್ನು ತಯಾರಿಸಲು ಉತ್ತಮ ಸಮಯ. ನಿಮ್ಮ ಕೆಲಸದ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿ. ಹಿರಿಯರಿಂದ ಮೆಚ್ಚುಗೆ ಸಿಗಬಹುದು. ಹಣಕಾಸಿನ ವ್ಯವಹಾರದಲ್ಲಿ ಮುಂದಾಲೋಚನೆ ಅಗತ್ಯ. ಮನಸ್ಸು ಕೆಲವೊಮ್ಮೆ ಆಳವಾದ ಯೋಚನೆಗಳಲ್ಲಿ ಇಳಿಯಬಹುದು. ಹೃದಯವೈಶಾಲ್ಯದಿಂದ ಪ್ರಶಂಸೆ ಸಿಗುವುದು. ವಾಹನದ ಮೇಲಿನ ವ್ಯಾಮೋಹ ಕಡಿಮೆಯಾಗುವುದು.

ಕರ್ಕಾಟಕ 

ಪದೇ ಪದೇ ಆಗಿಹೋದುದರ ಬಗ್ಗೆ ಯೋಚಿಸಿ ಮಾನಸಿಕವಾಗಿ ಹಿಂಸೆ ಮಾಡಿಕೊಳ್ಳುವಿರಿ. ನಿಮ್ಮ ಇಷ್ಟದ ಜನರಿಂದ ನೀವು ಬೆಂಬಲವನ್ನು ಪಡೆಯುತ್ತಿರುವಿರಿ. ನಿಮ್ಮನ್ನು ಬೆರಳು ಮಾಡಿ ತೋರಿಸದಂತೆ ನೋಡಿಕೊಳ್ಳಿ. ದೀರ್ಘ ಪ್ರಯಾಣ ಉತ್ತಮ ದಿನವಲ್ಲ. ಕೆಲಸದ ಸ್ಥಳದಲ್ಲಿ ಒತ್ತಡ ಅಧಿಕವಾಗಬಹುದು. ಪ್ರೇಮವು ಕಾಮವಾಗಿ ಮನಸ್ಸನ್ನು ಕೆಡಿಸುವುದು. ಸಂಬಂಧದಲ್ಲಿನ ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು.

ಸಿಂಹ

ಬಹಳ ದಿನಗಳ ಅನಂತರ ಹೊರಗಿನ‌ ಸುತ್ತಾಟವು ಹಿತವೆನಿಸುವುದು. ಗೊಂದಲ ಬರುವ ವಿಚಾರಕ್ಕೆ ಸಮಾಲೋಚನೆ ಅಗತ್ಯ. ಹಣದ ವಿಚಾರದಲ್ಲಿ ಗೆಲುವು ಇದೆ. ಸ್ನೇಹಿತರಿಂದ ಸಹಾಯ ಸಿಗುವ ಸಾಧ್ಯತೆ. ಸರ್ಕಾರದ ಕೆಲಸಕ್ಕೆ ನಿಯುಕ್ತರಾಗಬಹುದು. ಸದೃಢ ಭವಿಷ್ಯದ ನೆಲೆಗಾಗಿ ಸಣ್ಣ ಸಿದ್ಧತೆ ಆರಂಭವಾಗುತ್ತದೆ. ಕೆಲ ದಿನಗಳಿಂದ ನಿಮ್ಮ ಆರೋಗ್ಯ ಹದಗೆಟ್ಟಿದ್ದು, ಮನಸ್ಸೂ ಸರಿಯಾಗಿರದು. ಎಲ್ಲರ ಜೊತೆ ವಾದಕ್ಕಿಳಿಯುವ ಮನಸ್ಸಿನಲ್ಲಿ ಇರುವಿರಿ. ಶಿಸ್ತಿನಿಂದ ಇಂದಿನ ಕಾರ್ಯವನ್ನು ಮಾಡುವಿರಿ.

ಕನ್ಯಾ

ಅವಶ್ಯಕ ವಸ್ತುವನ್ನು ಕಣ್ಮರೆ ಮಾಡಿಕೊಳ್ಳುವಿರಿ. ಇಂದು ನಿಮಗೆ ಅನುಕೂಲಕರ ಸಮಯ. ಅನಗತ್ಯ ಮೋಜಿನಲ್ಲಿ ಸಮಯ ವ್ಯರ್ಥ ಮಾಡಬಾರದು. ಹಣಕಾಸು ಪರಿಸ್ಥಿತಿ ಬಲವಾಗಲಿದೆ. ಎಲ್ಲಿಯೂ ಪೂರ್ಣ ಬಲವನ್ನು ಹಾಕಲಾರಿರಿ. ಶಾಂತ ವಾತಾವರಣಕ್ಕಾಗಿ ಮನೆಯಲ್ಲಿ ಸಮಯ ಕಳೆಯಿರಿ. ವ್ಯವಹಾರಕ್ಕೆ ಸಮಯ ಒಳ್ಳೆಯದು. ತಪ್ಪುಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು. ಯಾವುದೇ ಊಹೆಗಳಿಗೆ ಬೆಲೆ ಕೊಡದೇ ಸ್ಪಷ್ಟವಾದುದನ್ನು ನಂಬಿ.

ತುಲಾ

ಹೊಸ ಕೆಲಸವನ್ನು ಪ್ರಾರಂಭಿಸುವುದು ನಿಮಗೆ ಸಂತೋಷವನ್ನು ನೀಡುತ್ತದೆಯಾದರೂ ಕ್ರಮಬದ್ಧ ಮಾಡಿಕೊಳ್ಳದಿದ್ದರೆ ಅದೂ ಗೊಂದಲವಾದೀತು. ಕೇಳಿ ಪಡೆದ ಹಣವನ್ನು ಕೇಳದೇ ಕೊಡಿ. ಮನಸ್ಸು ಭಾರವಾಗಿದ್ದರೂ, ಸಾಯಂಕಾಲದವರೆಗೆ ಸ್ಥಿತಿಗತಿಗಳು ಸುಧಾರಿಸುತ್ತವೆ. ನಿಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇರಲಿ. ದೀರ್ಘಕಾಲದ ವೈರವು ಮುಕ್ತಾಯವಾಗುವುದು. ಮಾತನ್ನು ಚೆನ್ನಾಗಿ ಬಲ್ಲ ನೀವು ಕಟುವಾದ ಮಾತುಗಳನ್ನು ಆಡಬೇಡಿ. ಹೊಸ ಉದ್ಯೋಗಿಗಳನ್ನು ನಿಯೋಜಿಸಿಕೊಂಡು ಕಾರ್ಯವನ್ನು ವಿಸ್ತರಿಸಿ.

ವೃಶ್ಚಿಕ

ಇಂದು ಅನಾವಶ್ಯಕ ಸಮಸ್ಯೆಗಳನ್ನು ಬೇಕೆಂದೇ ಎಳೆದುಕೊಳ್ಳುವಿರಿ. ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿ ನಿಮ್ಮ ಆತ್ಮಸ್ಥೈರ್ಯವು ಕುಸಿಯದಂತೆ ಇರಬೇಕಾಗುವುದು. ನಿಮ್ಮನ್ನು ಸಕಾರಾತ್ಮಕವಾಗಿ ಇಟ್ಟುಕೊಂಡು ಮುಂದಾಗಿ. ಕೆಲಸದಲ್ಲಿ ಸಣ್ಣ ಬದಲಾವಣೆಗಳು ಆಗಬಹುದು. ಕೆಲವೊಂದು ವಿಷಯಗಳಲ್ಲಿ ಸಹೋದ್ಯೋಗಿಗಳಿಂದ ಸ್ಪಷ್ಟತೆ ಬೇಕಾಗುತ್ತದೆ. ಹಣದ ಲೆಕ್ಕಾಚಾರದಲ್ಲಿ ತಪ್ಪು ಸಾಧ್ಯ. ಬಹಳ ಚಂಚಲವಾದ ಮನಸ್ಸನ್ನು ಶುಭವಾದ ಕಾರ್ಯದಲ್ಲಿ ಜೋಡಿಸಿ.

ಧನುಸ್ಸು

ನಿಮ್ಮ ವೃತ್ತಿಜೀವನವನ್ನು ಮುನ್ನಡೆಸಲು ಮಾರ್ಗದರ್ಶನವನ್ನು ಪಡೆಯುತ್ತೀರಿ. ಮುಂದಾಳುವಾಗಲು ನಿಮ್ಮನ್ನೇ ದೂಡಬಹುದು. ಹಣದ ವ್ಯವಹಾರದಲ್ಲಿ ನೀವು ತಕ್ಷಣ ವಿಶ್ವಾಸಕ್ಕೆ ಬರಬೇಡಿ. ವ್ಯಾಪಾರದವರು ಹೊಸ ಅವಕಾಶ ಪಡೆಯಬಹುದು. ಕುಟುಂಬದಲ್ಲಿ ಸಂತೋಷದ ಸನ್ನಿವೇಶ. ಮಕ್ಕಳ ಯಶಸ್ಸು ನಿಮಗೆ ಗರಿಮೆ ತರುತ್ತದೆ. ಇಂದು ಶತ್ರುವಿನ ಆಗಲಿಕೆಯಿಂದ ಸಂತೋಷವಾಗುವುದು‌. ನಿಮ್ಮ ವಿದ್ಯಾಭ್ಯಾಸದ ಸಾಮರ್ಥ್ಯವನ್ನು ತೋರಿಸುವಿರಿ.

ಮಕರ

ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿದರೆ ಉತ್ಸಾಹ ಹೆಚ್ಚಾಗುತ್ತದೆ. ಕಛೇರಿಯ ವಸ್ತುವನ್ನು ಸ್ವಂತ ಖರ್ಚಿನಿಂದ ಮಾಡಿಸುವಿರಿ. ಪ್ರವಾಸದ ಯೋಜನೆ ಕೈಗೊಳ್ಳಬಹುದು. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಸಿಗಬಹುದು. ವಿವಾದಾತ್ಮಕ ವಿಷಯಗಳಿಂದ ದೂರವಿರುವುದು ಉತ್ತಮ. ಶತ್ರುಗಳು ನಿಮ್ಮ ಸಂಪತ್ತನ್ನು ಕರಗಿಸಲು ತಂತ್ರವನ್ನು ಹೆಣೆಯಬಹುದು. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿ ಇರುವಿರಿ. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ.

ಕುಂಭ

ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯವನ್ನು ಕಳೆದು ನೆಮ್ಮದಿಯನ್ನು ಪಡೆಯುವಿರಿ. ಚಿಂತೆಯ ಸ್ಥಿತಿಯನ್ನು ಸ್ವತಃ ನಿರ್ಮಾಣ ಮಾಡಿಕೊಳ್ಳುವಿರಿ. ಕೆಲವೊಂದು ನಿರ್ಧಾರಗಳನ್ನು ಬದಲಾಯಿಸಬೇಕಾದ ಪರಿಸ್ಥಿತಿ ಇರದು. ಹಳೆಯ ಪರಿಚಯಗಳು ಪುನಃ ಸಂಪರ್ಕಕ್ಕೆ ಬರಲಿವೆ. ಖರ್ಚು ಹೆಚ್ಚು ಆಗುವ ದಿನವಿದು. ಕುಟುಂಬದಲ್ಲಿ ಬೇರೆ ಬೇರೆ ಅಭಿಪ್ರಾಯಗಳು ಮೂಡಬಹುದು. ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗುವುದು.

ಮೀನ

ನಿಮ್ಮ ಯಾರಾದರೂ ಸಾಲವನ್ನು ಕೇಳಿ ಬರಬಹುದು. ನಯವಾಗಿ ತಳ್ಳಿಹಾಕುವಿರಿ. ಕೋಪಗೊಳ್ಳುವ ಬದಲು ಶಾಂತರೀತಿಯಿಂದ ಸಮಸ್ಯೆಯನ್ನು ಪರಿಹರಿಸಿ. ನಿಮ್ಮ ಕೆಲಸದ ಗತಿಯು ಹೆಚ್ಚು ಚುರುಕುಗೊಳ್ಳುವುದು. ಕೌಟುಂಬಿಕ ವಿಚಾರದಲ್ಲಿ ಮಾತುಕತೆ ಗಂಭೀರವಾಗಬಹುದು. ಸ್ನೇಹಿತರಿಂದ ಅಲ್ಪ ನಿರಾಶೆ ಸಿಗಬಹುದು. ಹಣದ ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ. ಅಪಮಾನವಾಗುವ ಘಟನೆಗಳು ನಡೆಯಬಹುದು.

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

ಗಂಡ ಆಫೀಸ್‌ಗೆ ಹೋದ ತಕ್ಷಣ ಸ್ನಾನ, ಕಸ ಗುಡಿಸುವ ಅಭ್ಯಾಸ ನಿಮಗಿದ್ಯಾ?; ಹಾಗಾದ್ರೆ ಎಚ್ಚರವಹಿಸಿ

TAGGED:#almanac #zodiac #prediction #16-06-2026 #tuesday #horoscope #planetary #positions #news #newsics
Share This Article
Facebook Twitter Copy Link Print
Previous Article RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್
Next Article Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

Popular Posts

ಗೃಹಲಕ್ಷ್ಮಿ ಯೋಜನೆಯಲ್ಲಿ ಏನೆಲ್ಲಾ ಚೇಂಜ್ ಆಗ್ತಿದೆ; ಅರ್ಜಿ ಸಲ್ಲಿಸಲು ಏನು ಮಾಡ್ಬೇಕು?

2 Min Read

Rain shortage ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಶೇ.21 ಕೊರತೆ!

2 Min Read

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read
ಪ್ರಮುಖದೇಶಮನರಂಜನೆ

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read
ಕರ್ನಾಟಕದೇಶಪ್ರಮುಖ

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read
ಕರ್ನಾಟಕಪ್ರಮುಖ

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?