newsics.com/ನ್ಯೂಸಿಕ್ಸ್
ವಾಷಿಂಗ್ಟನ್: ಅಮೆರಿಕ -ಇರಾನ್ ನಡುವಿನ ಯುದ್ಧ ಅಂತ್ಯವಾಗಿದೆ. ಬರೋಬ್ಬರಿ 110 ದಿನಗಳ ಸಮರಕ್ಕೆ ಅಮೆರಿಕ- ಇರಾನ್ ಅಂತ್ಯವಾಡಿವೆ. ಪರಸ್ಪರ ಶಾಂತಿ ಒಪ್ಪಂದಕ್ಕೆ ಉಭಯ ದೇಶಗಳು ಅಸ್ತು ಎಂದಿವೆ. ಜೂನ್ 19 ರಂದು ಸ್ವಿಟ್ಜರ್ ಲೆಂಡ್ ನ ಜಿನೇವಾದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು.
ಅಮೆರಿಕ-ಇರಾನ್ ‘ಶಾಂತಿ ಒಪ್ಪಂದ’ ಘೋಷಣೆ ಮಾಡಿದ್ದು, ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವುದಾಗಿ ಟ್ರಂಪ್ ಹೇಳಿದ್ದಾರೆ.
ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಗೆ ನೀಡಲಾಗಿದೆ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಟೋಲ್-ಫ್ರೀ ಸಾಗಣೆ ಈಗ ಪ್ರಾರಂಭವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಇರಾನ್ನ ಉಪ ವಿದೇಶಾಂಗ ಸಚಿವ ಕಜೆಮ್ ಘರಿಬಬಾದಿ ನಂತರ ಭಾನುವಾರ ದೃಢಪಡಿಸಿದ ಈ ಒಪ್ಪಂದವು ಇರಾನ್ ಮತ್ತು ಅಮೆರಿಕ ನಡುವಿನ ಹಗೆತನವನ್ನು ತಕ್ಷಣವೇ ಕೊನೆಗೊಳಿಸುತ್ತದೆ.
ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!