newsics.com/ನ್ಯೂಸಿಕ್ಸ್
ಕಳೆದ ಕೆಲವು ತಿಂಗಳುಗಳಿಂದ ತಮಿಳುನಾಡು ಸಿಎಂ ವಿಜಯ್ ಮತ್ತು ಪತ್ನಿ ಸಂಗೀತಾ ಅವರ ದಾಂಪತ್ಯ ಜೀವನದ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ವಿಚ್ಛೇದನದ ಊಹಾಪೋಹಗಳ ನಡುವೆಯೇ ಇದೀಗ ದಂಪತಿ ಮತ್ತೆ ಒಂದಾಗುವ ಸಾಧ್ಯತೆ ಇದೆ ಎಂಬ ಚರ್ಚೆ ಸಿನಿ ವಲಯದಲ್ಲಿ ಜೋರಾಗಿದೆ.
ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೇ ತಡ, ಅವರ ಡಿವೋರ್ಸ್ ಸುದ್ದಿ ಎಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ಸಿಎಂ ಆಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ವಿಜಯ್ ಮತ್ತು ಸಂಗೀತಾ ವಿಚ್ಚೇದನ ಪಡೆಯಲಿದ್ದಾರೆ ಹಾಗೂ ವಿಜಯ್ ತ್ರಿಷಾ ಅವರನ್ನು ವಿವಾಹವಾಗಲಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು.
ಆದರೆ ಜೂನ್ 12 ರಂದು ಜೋಸೆಫ್ ವಿಜಯ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು, ಹಿಂತಿರುಗಿದ ಬೆನ್ನಲ್ಲೇ ವಿಜಯ್ ಹಾಗೂ ಸಂಗೀತ ವಿಚ್ಛೇದನದ ನಿರ್ಧಾರದಿಂದ ಹಿಂದೆ ಸರಿದ್ದಾರೆ ಎಂಬ ಮಾತುಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಇದೀಗ ವೈಮನಸ್ಸಿನಿಂದಾಗಿ ಸಿಎಂ ವಿಜಯ್ ಹಾಗೂ ಸಂಗೀತಾ ನಡುವೆ ವಿಚ್ಛೇದನದ ಚರ್ಚೆಗಳು ನಡೆದಿದ್ದವು ಎನ್ನಲಾಗಿತ್ತು. ಆದ್ರೆ ಇದೀಗ ಮತ್ತೆ ದಳಪತಿ ವಿಜಯ್ ದಂಪತಿ ಒಂದಾಗ್ತಾರೆ ಎಂಬ ಮಾತುಗಳು ವೈರಲ್ ಆಗುತ್ತಿದೆ. ಇನ್ನೇನು ಎರಡು ದಿನಗಳಲ್ಲಿ ಅಂದರ ಜೂನ್ 15 ರಂದು ವಿಜಯ್ ಮತ್ತು ಸಂಗೀತಾ ನಡುವಿನ ವಿಚ್ಛೇದನ ಅರ್ಜಿ ವಿಚಾರಣೆ ನಡೆಯಬೇಕಿತ್ತು. ಈ ನಡುವೆ ವಿಜಯ್ ಮತ್ತು ಸಂಗೀತಾ ಮತ್ತೆ ಒಂದಾಗ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.
ಇನ್ನು ವಿಜಯ್ ಪತ್ನಿ ಸಂಗೀತಾ ಡಿವೋರ್ಸ್ ಅರ್ಜಿ ಸಲ್ಲಿಸಲು ಮುಖ್ಯ ಕಾರಣವೇ ನಟಿ ತ್ರಿಷಾ ಎಂಬ ಸುದ್ದಿಗಳು ಹರಿದಾಡಿತ್ತು. ನಟಿ ತ್ರಿಷಾ ಜೊತೆ ವಿಜಯ್ ಆತ್ಮೀಯತೆಯಿಂದ ಇರುವುದೇ ದಳಪತಿ ದಂಪತಿ ನಡುವೆ ವೈಮಸ್ಸಿಗೆ ಕಾರಣ ಎಂದು ವರದಿಯಾಗಿತ್ತು. ಅಲ್ಲದೇ ಸೋಷಿಯಲ್ ಮೀಡಿಯಾಗಳಲ್ಲೂ ಈ ಬಗ್ಗೆ ಸದಾ ಟ್ರೋಲ್‌ಗಳು ನಡೆಯುತ್ತಿತ್ತು. ಆದರೆ ಈ ಎಲ್ಲಾ ಚರ್ಚೆಗಳ ನಡುವೆ ಇದೀಗ ಮತ್ತೆ ವಿಜಯ್ ಮತ್ತು ಸಂಗೀತಾ ಒಂದಾಗಲಿದ್ದಾರೆ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್ನು ಈ ರಾಜಿ ಸಂಧಾನದಲ್ಲಿ ಮುಖ್ಯವಾಗಿ ಸಿಎಂ ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಅವರೇ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.