newsics.com/ನ್ಯೂಸಿಕ್ಸ್
ಭಾರತೀಯ ಶೂಟಿಂಗ್ ದಿಗ್ಗಜ, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ತರಬೇತುದಾರ ಜಸ್ಪಾಲ್ ರಾಣಾ (49) ನಿಧನರಾಗಿದ್ದಾರೆ.
1990ರ ದಶಕದಲ್ಲಿ ಭಾರತದಲ್ಲಿ ಶೂಟಿಂಗ್ ಕ್ರೀಡೆಯು ಇನ್ನು ಜನಪ್ರಿಯವಾಗದ ಕಾಲದಲ್ಲೇ ಜಸ್ಪಾಲ್ ರಾಣಾ ಅವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅಸಾಧಾರಣ ಪ್ರದರ್ಶನ ನೀಡುವ ಮೂಲಕ ದೇಶದ ಗಮನ ಸೆಳೆದರು. ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಸಾಲು ಸಾಲು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತದಲ್ಲಿ ಶೂಟಿಂಗ್ ಕ್ರೀಡೆಗೆ ಒಂದು ಹೊಸ ಮೆರುಗನ್ನು ತಂದುಕೊಟ್ಟರು. ಅಸಂಖ್ಯಾತ ಯುವಕರು ಈ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಲು ಇವರೇ ಮುಖ್ಯ ಸ್ಫೂರ್ತಿಯಾಗಿದ್ದರು.
2012 ರಿಂದ ದೇಶದ ಜೂನಿಯರ್ ಪಿಸ್ತೂಲ್ ತಂಡದ ಜವಾಬ್ದಾರಿ ಹೊತ್ತು, ಭಾರತದ ಬೆಂಚ್ ಸ್ಟ್ರೆಂತ್ ಅನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಠಗೊಳಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಮ್ಯೂನಿಚ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್ ಮುಗಿಸಿ ಭಾರತಕ್ಕೆ ಮರಳುವ ವಿಮಾನ ಪ್ರಯಾಣದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ರಾಣಾ ಅವರನ್ನು ನವದೆಹಲಿಯ ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜೂನ್ 11ರ ಗುರುವಾರ ಅವರು ಕೊನೆಯುಸಿರೆಳೆದಿದ್ದಾರೆ ಎಂದು ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಪರಿಷತ್ತು ದೃಢಪಡಿಸಿದೆ.
Bigg Boss Kannada 13 ಬಿಗ್ ಬಾಸ್ 13 ಸಂಭಾವ್ಯ ಸ್ಪರ್ಧಿಗಳ ಪಟ್ಟಿ?ಹೆಸರುಗಳು ವೈರಲ್