newsics.com/ನ್ಯೂಸಿಕ್ಸ್
ಭಾರತೀಯ ಚಿತ್ರರಂಗದ ಜನಪ್ರಿಯ ಗಾಯಕ, ರ‍್ಯಾಪರ್ ಬಾದ್‌ಶಾ ಮೊದಲ ಪತ್ನಿಯೊಂದಿಗೆ ವಿಚ್ಚೇದನ ಪಡೆದು 6 ವರ್ಷಗಳ ಬಳಿಕ ಖ್ಯಾತ ನಟಿಯೊಂದಿಗೆ ಎರಡನೇ ವಿವಾಹವಾಗಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಮದುವೆಯ ಊಹಾಪೋಹಗಳಿಗೆ ಇಶಾ ರಿಖಿ ಸ್ಪಷ್ಟನೆ ನೀಡುವ ಮೂಲಕ ಎಲ್ಲ ಕುತೂಹಲಗಳಿಗೂ ತೆರೆ ಎಳೆದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡದಿರಲು ಕಾರಣವೇನು? ಇನ್‌ಸ್ಟಾಗ್ರಾಮ್ ಸಂವಾದದ ಸಮಯದಲ್ಲಿ ಅಭಿಮಾನಿಯೊಬ್ಬರು, ‘ನೀವಿಬ್ಬರು ಮದುವೆಯಾಗಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಏಕೆ ಫಾಲೋ ಮಾಡುತ್ತಿಲ್ಲ?’ ಎಂದು ನೇರವಾಗಿ ಪ್ರಶ್ನಿಸಿದ್ದರು. ಆ ಪ್ರಶ್ನೆಗೆ ಇಶಾ ರಿಖಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಅಭಿಮಾನಿಯ ಪ್ರಶ್ನೆಗೆ ಅತ್ಯಂತ ಹಾಸ್ಯಭರಿತವಾಗಿ ಉತ್ತರಿಸಿದ ಇಶಾ, ‘ಈ ಪ್ರಶ್ನೆಗಳು ನನಗೆ ಅತಿಯಾಗಿ ಎದುರಾಗುತ್ತಿವೆ. ಹೌದು, ನನಗೆ ಮದುವೆಯಾಗಿದೆ. ಇನ್ನು ನೀವೆಲ್ಲರೂ ಕೇಳುತ್ತಿರುವ ಮುಖ್ಯ ಪ್ರಶ್ನೆಗೆ ಬರುವುದಾದರೆ, ಇದಕ್ಕೆ ನನ್ನ ಪತಿಯೇ ಸರಿಯಾದ ವಿವರಣೆ ನೀಡಬೇಕು. ಪತಿದೇವ್ (ಬಾದ್‌ಶಾ), ಜನರಿಗೆ ಸಾಕಷ್ಟು ಪ್ರಶ್ನೆಗಳಿವೆ, ದಯವಿಟ್ಟು ಆದಷ್ಟು ಬೇಗ ಇದಕ್ಕೆ ಉತ್ತರಿಸಿ’ ಎಂದು ಬರೆದುಕೊಂಡು ಬಾದ್‌ಶಾ ಅವರನ್ನೇ ಟ್ಯಾಗ್ ಮಾಡಿದ್ದಾರೆ.
ನಿಮ್ಮ ಪತಿ ಬಾದ್‌ಶಾ ಜೊತೆ ಒಂದೇ ಒಂದು ಫೋಟೋ ಕೂಡ ಏಕೆ ಪೋಸ್ಟ್ ಮಾಡಿಲ್ಲ? ನೀವು ಅವರ ಪತ್ನಿಯಾಗಿದ್ದರೂ ಒಂದೇ ಒಂದು ಚಿತ್ರವೂ ಇಲ್ವಲ್ಲಾ?’ ಎಂದು ಮತ್ತೊಬ್ಬ ಅಭಿಮಾನಿ ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಇಶಾ, ಅಭಿಮಾನಿಗಳ ಮನಸ್ಸು ತಣಿಸಲು ತಮ್ಮಿಬ್ಬರ ಅಪರೂಪದ ಹಾಗೂ ಪ್ರೇಮಭರಿತ ಫೋಟೋ ಒಂದನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. ಆ ಚಿತ್ರದಲ್ಲಿ ಇಶಾ ಅವರು ಬಾದ್‌ಶಾ ಅವರ ಮಡಲಲ್ಲಿ ಕುಳಿತು ಗಟ್ಟಿಯಾಗಿ ಆಲಂಗಿಸಿಕೊಂಡಿರುವುದನ್ನು ಕಾಣಬಹುದು. ಈ ಪ್ರೇಮಪೂರಿತ ಚಿತ್ರವನ್ನು ನೋಡಿ ದಂಪತಿಯ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
Rukmini Vasanth ನಟಿ ರುಕ್ಮಿಣಿ ವಸಂತ್ ಫೇಕ್ ವಿಡಿಯೋ ಹಂಚಿಕೊಂಡವರು ಹೊರರಾಜ್ಯದವರು : ಸಿಸಿಬಿ ತನಿಖೆಯಲ್ಲಿ ಪತ್ತೆ