newsics.com/ನ್ಯೂಸಿಕ್ಸ್
ನಟಿ ರುಕ್ಮಿಣಿ ವಸಂತ್ ಅವರಿಗೆ ಇತ್ತೀಚೆಗೆ ಮುಜುಗರ ಆಗುವ ಘಟನೆ ನಡೆದಿತ್ತು.ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ರುಕ್ಮಿಣಿ ವಸಂತ್ ವಿಡಿಯೋಗಳನ್ನು ಅಶ್ಲೀಲವಾಗಿ ಮಾರ್ಫ್ ಮಾಡಲಾಗಿತ್ತು. ಈ ಬಗ್ಗೆ ನಟಿ ರುಕ್ಮಿಣಿ ವಸಂತ್ ಅವರು ದೂರು ನೀಡಿದ್ದರು. ಈ ಬೆನ್ನಲ್ಲೇ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳಿಗೆ ಬೇಟೆ ಶುರು ಮಾಡಿದ್ದಾರೆ.
ತಮ್ಮ ಅಶ್ಲೀಲ ವಿಡಿಯೋ ಹಂಚಿಕೊಂಡಿದ್ದ ಇನ್‌ಸ್ಟಾಗ್ರಾಂ, ಎಕ್ಸ್ ಹಾಗೂ ಫೇಸ್‌ಬುಕ್ ಖಾತೆಗಳ ಬಗ್ಗೆ ನಟಿ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಖಾತೆಗಳ ವಿವರ ಕಲೆ ಹಾಕಿದಾಗ ಅವರೆಲ್ಲ ಆಂಧ್ರಪ್ರದೇಶ ಹಾಗೂ ತಮಿಳುನಾಡು ಸೇರಿ ಹೊರ ರಾಜ್ಯದ ವ್ಯಕ್ತಿಗಳು ಎಂಬುದು ಗೊತ್ತಾಯಿತು. ಪ್ರಕರಣ ದಾಖಲಾದ ಬಳಿಕ ಖಾತೆ ಬಂದ್ ಮಾಡಿದ್ದಾರೆ. ಈ ಕಿಡಿಗೇಡಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ರುಕ್ಮಿಣಿ ಅವರು ಈಜುಡುಗೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ಡೀಪ್ ಫೇಕ್ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು. ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳಿಗೆ ಬೇಟೆ ಶುರು ಮಾಡಿದ್ದಾರೆ.
ಐದು ಮಕ್ಕಳ ತಾಯಿಯ ಲವ್ ಕಹಾನಿ : ಪ್ರೀತಿಗಾಗಿ 2 ಬಾರಿ ಮತಾಂತರಗೊಂಡ ಮಹಿಳೆ