newsics.com/ನ್ಯೂಸಿಕ್ಸ್
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್ ಅಮೀರ್ ಖಾನ್ ಮತ್ತು ಅವರ ಆಪ್ತ ಗೆಳತಿ ಗೌರಿ ಸ್ಪ್ರ್ಯಾಟ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕೈ ಕೈ ಹಿಡಿದು ನಡೆದುಕೊಂಡು ಹೋಗುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಗುರುವಾರ ಮುಂಜಾನೆ ಮುಂಬೈ ಏರ್‌ಪೋರ್ಟ್ ಟರ್ಮಿನಲ್‌ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಪರಸ್ಪರ ಮಾತನಾಡುತ್ತಾ, ನಗುತ್ತಾ ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ. ಈ ವೇಳೆ ಆಮೀರ್ ಖಾನ್ ಕ್ಯಾಶುವಲ್ ಬ್ಲ್ಯಾಕ್ ಟಿ-ಶರ್ಟ್, ಬ್ಲ್ಯಾಕ್ ಕ್ಯಾಪ್ ಧರಿಸಿದ್ದರೆ, ಗೌರಿ ಸ್ಪ್ರ್ಯಾಟ್ ಅವರು ನೇವಿ-ಬ್ಲೂ ಕೋ-ಆರ್ಡ್ ಔಟ್‌ಫಿಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು.
ಮೂಲಗಳ ಪ್ರಕಾರ, ಈ ಜೋಡಿ ಮುಂದಿನ ತಿಂಗಳು ಜುಲೈ 5 ಗೌರಿ ಸ್ಟ್ರಾಟ್ ಅವರನ್ನು ಜುಲೈ 5 ರಂದು ಮದುವೆಯಾಗುವುದು ಆಗಿ ಆಮೀರ್ ಖಾನ್ ಅವರು ಹೇಳಿದ್ದಾರೆ. ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ವಿವಾಹ ಸಮಾರಂಭ ನಡೆಯಲಿದೆ ಎಂದು ಹೇಳಿದ್ದಾರೆ. ಇದಕ್ಕಿಂತ ಮೊದಲು ಗೌರಿ ಸ್ಟ್ರಾಟ್ ಅವರ ಜೊತೆ ಆಮೀರ್ ಖಾನ್ ಅವರು ಸರಳವಾಗಿ ವಿವಾಹವಾಗಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿತ್ತು. ಇದರಿಂದ ಯಾವುದೇ ಗಲಿಬಿಲಿಯಾಗದ ಸ್ಟಾರ್ ನಟ, ನಾನು ಸದ್ಯ ಅಮೆರಿಕದ ಟೂರ್‌ನಲ್ಲಿದ್ದೇನೆ. ಅಲ್ಲಿ ಕೇಳಿ ಬರುತ್ತಿರುವ ಕೆಲವೊಂದು ವಿಷಯಗಳು ಸತ್ಯವಾಗಿರುತ್ತದೆ. ನಮ್ಮಿಬ್ಬರ ನಡುವೆ ಸಂಬಂಧ ಇದ್ದು ಇದೇ ಜುಲೈ 5 ರಂದು ಮದುವೆಯಾಗುತ್ತಿದ್ದೇವೆ ಎಂದು ಖಚಿತ ಪಡಿಸಿದ್ದಾರೆ.
ಕಳೆದ ವರ್ಷವಷ್ಟೇ ಆಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಅಂದಿನಿಂದ ಗೌರಿ ಅವರು ಆಮೀರ್ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ವಿಶೇಷವೆಂದರೆ, ಈ ಇಬ್ಬರಿಗೂ ಕಳೆದ 25 ವರ್ಷಗಳಿಂದ ಪರಿಚಯವಿದ್ದು, ಈ ದೀರ್ಘಾವಧಿಯ ಸ್ನೇಹ ಇತ್ತೀಚಿನ ವರ್ಷಗಳಲ್ಲಿ ಪ್ರೀತಿಯಾಗಿ ಬದಲಾಗಿದೆ. ಈ ವರ್ಷದ ಆರಂಭದಲ್ಲಿ ತಮ್ಮ 60 ನೇ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಆಮೀರ್ ಖಾನ್ ಅವರು ಗೌರಿ ಅವರನ್ನು ಮಾಧ್ಯಮಗಳಿಗೆ ಅಧಿಕೃತವಾಗಿ ಪರಿಚಯಿಸಿದ್ದರು. ಗೌರಿ ಅವರಿಗೆ 7 ವರ್ಷದ ಮಗನಿದ್ದು, ಅವರು ಚಿತ್ರರಂಗ ಮತ್ತು ಗ್ಲಾಮರ್ ಪ್ರಪಂಚದಿಂದ ದೂರವೇ ಉಳಿದಿದ್ದಾರೆ.