newsics.com/ನ್ಯೂಸಿಕ್ಸ್
ಜೋಡಿ ನಂ 1 ಸೀಸನ್ 2 ಶೋ ನಲ್ಲಿ ಈ ವಾರ ಸ್ಪರ್ಧಿಗಳು ತಮ್ಮ ದಾಂಪತ್ಯದಲ್ಲಿರುವ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಆ ವೇಳೆ ಗಾಯಕ ಬಾಳು ಬೆಳೆಗುಂದಿ ಪತ್ನಿ ಮಾಲಾಶ್ರೀ ಅವರು ಪತಿ ಮೇಲೆ ಅನೇಕ ದೂರುಗಳನ್ನು ಹೊರಿಸಿದ್ದು ಬಾಳು ಬೆಳಗುಂದಿ ನನ್ನ ಯಾವ ಕಷ್ಟಗಳಿಗೂ ಸ್ಪಂದಿಸುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ.
ಸದ್ಯ ಜೋಡಿ ನಂ 1 ಸೀಸನ್ 2 ಶೋ ಪ್ರೋಮೋ ಮಾತ್ರ ರಿಲೀಸ್ ಆಗಿದೆ. ಈ ವೇಳೆ ಬಾಳೆ ಬಾಳೆಗುಂದಿಯಿಂದ ಯಾವ ವಿಷಯದಲ್ಲಿ ಬೇಸರ ಆಗ್ತಿದೆ ಎಂದು ಪತ್ನಿ ಮಾಲಾಶ್ರೀ ಹೇಳಿದ್ದಾರೆ. ಹೆಜ್ಜೆ ಹೆಜ್ಜೆಗೂ ಮಾಲಾಶ್ರೀ ಕೋಪ ಮಾಡಿಕೊಳ್ಳುತ್ತಾಳೆ. ಬೆಳಗ್ಗೆಯಿಂದ ನನಗೆ ಬದುಕು ಜಟಕಾಬಂಡಿ ಕಾರ್ಯಕ್ರಮ ನೆನಪಾಗುತ್ತದೆ. ಹೆಣ್ಣು ಮಗಳಿಗೆ ನನ್ನಿಂದ ನೆಮ್ಮದಿಯಿಲ್ಲ ಎಂದು ಬಾಳು ಹೇಳಿದ್ದಾರೆ.
ನನಗೆ ಸರಿಯಾಗಿ ಸ್ಪಂದಿಸಿದರೆ ನಾನು ಕೋಪ ಮಾಡಿಕೊಳ್ಳೋದಿಲ್ಲ. ನಮ್ಮ ಮನೆಯವರನ್ನು ಬಿಟ್ಟುಕೊಡಬೇಡ, ನನ್ನೂ ಬಿಟ್ಟುಕೊಡಬೇಡ. ಹೆಣ್ಣು ಮಕ್ಕಳಿಗೆ ತಿಂಗಳಿನಲ್ಲಿ ಮೂರು ದಿನ ರೆಸ್ಟ್ ಬೇಕಾಗುತ್ತದೆ, ಆ ಟೈಮ್‌ನಲ್ಲಿ ನೀನು ಸಹಾಯ ಮಾಡಿದರೆ ನನ್ನಷ್ಟು ಖುಷಿ ಪಡೋರು ಯಾರೂ ಇಲ್ಲ. ಜೀವನವೇ ಬೇಡ ಎನಿಸುವಾಗ ಮಾತ್ರ..” ಎಂದು ಪತ್ನಿ ಮಾಲಾಶ್ರೀ ಹೇಳಿದ್ದಾರೆ.
ಅವಳ ಮನಸ್ಸಿಗೆ ಬೇಸರ ಆಗುವಂಥ ಪದಗಳನ್ನು ಯಾಕೆ ಬಳಸುತ್ತೀಯಾ ಎಂದು ನಟಿ ಮಾಳವಿಕಾ ಅವರು ಬಾಳು ಬೆಳೆಗುಂದಿ ಬಳಿ ಮಾತನಾಡಿದ್ದಾರೆ ಎಂದು ನಟಿ ಮಾಳವಿಕಾ ಅವರು ಪ್ರಶ್ನೆ ಮಾಡಿದ್ದಾರೆ. ಆದರೆ ಈ ಕಾರ್ಯಕ್ರಮದಲ್ಲಿ ಏನೆಲ್ಲ ನಡೆಯಿತು ಎಂಬುದರ ಕುರಿತು ಇನ್ನಷ್ಟೇ ತಿಳಿಯಬೇಕಿದೆ. ಸದ್ಯ ಇವಿಷ್ಟನ್ನು ಮಾತ್ರ ನಾವು ಪ್ರೋದಲ್ಲಿ ನೋಡಲು ಸಾಧ್ಯವಾಗಿದೆ.
Health Care ಊಟದ ನಂತರ ಸೋಂಪು ತಿಂದ್ರೆ ದೇಹದಲ್ಲಾಗುತ್ತೆ ಈ ಚಮತ್ಕಾರಿ ಬದಲಾವಣೆಗಳು