newsics.com/ನ್ಯೂಸಿಕ್ಸ್
ಸಾವು ಎನ್ನುವುದು ನಮ್ಮ ಹಣೆಯಲ್ಲಿ ಯಾವಾಗ ಬರೆದಿರುತ್ತೋ ಆಗ ಬಂದೇ ಬರುತ್ತದೆ. ಏನೇ ಮಾಡಿದರೂ ಅದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಆಯಸ್ಸು ಮುಗಿಯದೇ ಇದ್ದರೆ ಏನೇ ಮಾಡಿದರೂ ಜೀವ ಹೋಗಲ್ಲ. ಈ ವೃದ್ಧನ ವಿಚಾರದಲ್ಲಿ ನಡೆದಿದ್ದೂ ಇದೇ ಕತೆ.
ಓರ್ವ ವಯೋ ವೃದ್ಧ ವ್ಯಕ್ತಿ ರಸ್ತೆಯ ಡಿವೈಡರ್ ಪಕ್ಕದಲ್ಲೇ ನಡೆದುಕೊಂಡು ಹೋಗುತ್ತಿರುತ್ತಾನೆ. ಎದುರಿನಿಂದ ಕಬ್ಬಿಣದ ಕಂಬಿಗಳನ್ನು ಲೋಡ್ ಮಾಡಿಕೊಂಡು ಬೃಹತ್ ಟ್ರಕ್ ಒಂದು ಬರುತ್ತಿತ್ತು.
ಡಿವೈಡರ್ ಪಕ್ಕ ಬಂದಾಗ ಅದು ಕೊಂಚ ನಿಯಂತ್ರಣ ತಪ್ಪಿರುತ್ತದೆ. ಹಾಗಿದ್ದರೂ ಆ ಚಾಲಕ ಹೇಗೋ ಸಾವರಿಸಿಕೊಂಡು ಹೋಗುತ್ತಿದ್ದ. ಆದರೆ ಟ್ರಕ್ ನೋಡಿ ಗಲಿಬಿಲಿಯಾದ ವೃದ್ಧ ರಸ್ತೆ ಮಧ್ಯಕ್ಕೆ ಹೋಗಲು ಯತ್ನಿಸಿದ್ದಾನೆ. ಇದರ ನಡುವೆ ಟ್ರಕ್ ನಡಿಗೆ ಸಿಲುಕಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.