newsics.com/ನ್ಯೂಸಿಕ್ಸ್
ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸದಾ ತಮ್ಮ ಆಟದ ಜೊತೆಗೆ ವೈಯಕ್ತಿಕ ಜೀವನದ ಕಾರಣಕ್ಕೂ ಸುದ್ದಿಯಲ್ಲಿರುತ್ತಾರೆ. ಇದೀಗ ಹಾರ್ದಿಕ್ ಪಾಂಡ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗುವ ಮೂಲಕ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದಾರೆ.
ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನಲ್ಲಿರುವ ಪ್ರೈಮಾ ಡಯಾಗ್ನೋಸ್ಟಿಕ್ಸ್ಗೆ ಹಾರ್ದಿಕ್ ಪಾಂಡ್ಯ ಮತ್ತು ಗರ್ಲ್ ಫ್ರೆಂಡ್ ಮಹಿಕಾ ಶರ್ಮಾ ಆಗಮಿಸಿದ್ದರು. ಐಷಾರಾಮಿ ಫೆರಾರಿ ಕಾರ್ನಲ್ಲಿ ಬಂದಿದ್ದ ಹಾರ್ದಿಕ್ ಪಾಂಡ್ಯರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು.
ಪ್ರೈಮಾ ಡಯಾಗ್ನೋಸ್ಟಿಕ್ಸ್ಗೆ ಹಾರ್ದಿಕ್ ಪಾಂಡ್ಯ ಬಂದಿರೋ ವಿಚಾರ ತಿಳಿದ ಅಭಿಮಾನಿಗಳು ಹಾರ್ದಿಕ್ ಪಾಂಡ್ಯರನ್ನು ನೋಡಲು ಮುಗಿಬಿದ್ದಿದ್ದಾರೆ. ಡಯಾಗ್ನೋಸ್ಟಿಕ್ಸ್ ಕಟ್ಟಡ ಮತ್ತು ಫೆರಾರಿ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಫ್ಯಾನ್ಸ್ಗಳ ತಳ್ಳಾಟ ಮತ್ತು ನೂಕಾಟದಿಂದ ಹಾರ್ದಿಕ್ ಪಾಂಡ್ಯ, ಹೊರಗಡೆ ಬರಲಾಗದೇ ಪರದಾಟ ಅನುಭವಿಸಿದರು. ಕೊನೆಗೆ ಪೊಲೀಸರ ಭದ್ರತೆ ನಡುವೆ ಹಾರ್ದಿಕ್ ಪಾಂಡ್ಯ ಹಾಗೂ ಗೆಳತಿ ಮಹಿಕಾ ಶರ್ಮಾ ಹೊರ ನಡೆದಿದ್ದಾರೆ.
ತಮ್ಮ ಗೆಳತಿ ಜೊತೆ ಡಯಾಗ್ನೋಸ್ಟಿಕ್ಸ್ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿರುವುದರಿಂದ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಅಪ್ಪನಾಗ್ತಿದ್ದಾರಾ? ಎಂಬ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೇಗ ಪಡೆದುಕೊಂಡಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದೆ, ಅಭಿಮಾನಿಗಳಲ್ಲಿ ಕುತೂಹಲ ಮಾತ್ರ ಹೆಚ್ಚಾಗಿದೆ.
ಐಷಾರಾಮಿ ಕಾರುಗಳ ಕ್ರೇಜ್ ಹೊಂದಿರುವ ಹಾರ್ದಿಕ್ ಪಾಂಡ್ಯ, ಇತ್ತೀಚಿಗಷ್ಟೇ ಫೆರಾರಿ 12 ಸಿಲಿಂಡ್ರಿ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಬೆಲೆ ಸುಮಾರು 12 ಕೋಟಿ ಎಂದು ಅಂದಾಜಿಸಲಾಗಿದೆ. ಇದೇ ಕಾರಿನಲ್ಲಿ ಹಾರ್ದಿಕ್ ಪಾಂಡ್ಯ ಬೆಂಗಳೂರು ರೌಂಡ್ಸ್ ಹಾಕಿದ್ದಾರೆ.