newsics.com/ನ್ಯೂಸಿಕ್ಸ್
ಕೊಡಗು: ಗ್ಯಾಸ್ ಗೀಸರ್ ಸೋರಿಕೆಯಾಗಿ ಪ್ರವಾಸಕ್ಕೆ ಬಂದಿದ್ದ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಚೌಡ್ಲು ಗ್ರಾಮದ ಹೋಂ ಸ್ಟೇಯಲ್ಲಿ ನಡೆದಿದೆ. ಮೈಸೂರು ಮೂಲದ ಯುವತಿ ವಿನುತಾ ಎಂಬಾಕೆ ಮೃತಪಟ್ಟಿದ್ದಾಳೆ.
ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆ ನಿವಾಸಿಯಾಗಿರುವ ಜಗನ್ನಾಥ ಮತ್ತು ರೇಣುಕಾ ದಂಪತಿಯ ಪುತ್ರಿ ವಿನುತಾ ಸೇರಿದಂತೆ 14 ಜನರ ತಂಡ ಕೊಡಗು ಜಿಲ್ಲಾ ಪ್ರವಾಸಕ್ಕೆ ಬಂದಿದ್ದಾಗ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಸ್ನಾನ ಮಾಡಲು ಬಾತ್ ರೂಮಿಗೆ ತೆರಳಿದ್ದ ಸಂದರ್ಭದಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿದೆ. ಪರಿಣಾಮ ವಿಷಗಾಳಿ ಸೇವಿಸಿ ವಿನುತಾ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆ. ಇನ್ನು ಈಕೆ ಸಾವನ್ನಪ್ಪಿದ ಬಾತ್ ರೂಮಿನಲ್ಲಿ ಕಿಟಕಿ ಇರಲಿಲ್ಲವೆಂದು ಹೇಳಲಾಗಿದೆ. ವಿನುತಾ ಸಾವಿನ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Rain Alert ರಾಜ್ಯದಲ್ಲಿ ಭಾರಿ ಮಳೆ : 8 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ