newsics.com/ನ್ಯೂಸಿಕ್ಸ್
ಜಾನ್ವಿ ಕಪೂರ್ ಅವರು ರಾಮ್ ಚರಣ್ ಅವರನ್ನು ಹೊಗಳಿರುವ ಸ್ಕ್ರೀನ್ ರೆಕಾರ್ಡ್ಗಳು ವೈರಲ್ ಆಗುತ್ತಿವೆ. ಪೆದ್ದಿ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಭಾರೀ ಟ್ರೋಲ್ ಆಗಿದೆ. ನಟಿಯನ್ನು ಕೆಟ್ಟ ಕ್ಯಾಮೆರಾ ಆಯಂಗಲ್ ಇಟ್ಟು ಶೂಟ್ ಮಾಡಲಾಗಿದೆ ಎಂದು ಈಗಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ.
ಹೀಗಿರುವಾಗ ಈ ಎಲ್ಲದರ ಬಗ್ಗೆ ನಟಿ ಜಾನ್ವಿ ಕಪೂರ್ ಕೂಡಾ ಅಪ್ಸೆಟ್ ಆಗಿದ್ದಾರೆ ಎನ್ನುವಂತಹ ಅವರ ಚಾಟಿಂಗ್ ಸ್ಕ್ರೀನ್ ಶಾಟ್ಸ್ ವೈರಲ್ ಆಗುತ್ತಿದೆ. ಸಿನಿಮಾ ರಿಲೀಸ್ ಆದ ನಂತರ ಜಾನ್ವಿ ಕಪೂರ್ ಟ್ರೋಲ್ ಆಗಿದ್ದಾರೆ.
ಆದರೆ ಅಭಿನಯದ ವಿಚಾರದಲ್ಲಿ ಟ್ರೋಲ್ ಆಗಿಲ್ಲ. ಆದರೆ ಮಹಿಳಾ ಕಲಾವಿದರನ್ನು ತೋರಿಸುವ ರೀತಿ ಸರಿ ಇಲ್ಲ ಎಂದು ಟ್ರೋಲ್ ಮಾಡಲಾಗಿದೆ. ಚಿತ್ರತಂಡದ ವಿರುದ್ಧ ಭಾರೀ ಟೀಕೆ ಕೇಳಿ ಬರುತ್ತಿದೆ. ಜಾನ್ವಿ ಈ ಸಿನಿಮಾದಲ್ಲಿ ಆಚ್ಚಿಯಮ್ಮ ಪಾತ್ರ ಮಾಡಿದ್ದರು.
ಇದೀಗ ವೈರಲ್ ಆಗಿರುವ ಸ್ಕ್ರೀನ್ ಶಾಟ್ ಅಸಲಿಗೆ ಜಾನ್ವಿ ಕಪೂರ್ ಅವರದ್ದೇನಾ ಎನ್ನುವುದು ಇನ್ನೂ ಕನ್ಫರ್ಮ್ ಆಗಿಲ್ಲ. ಆದರೆ ಸ್ಕ್ರೀನ್ ಶಾಟ್ನಲ್ಲಿ ಜಾನ್ವಿ ಕಪೂರ್ ಸಿನಿಮಾ ಶೂಟಿಂಗ್ ವೇಳೆ ತಾನು ಮುಜುಗರ ಅನುಭವಿಸಿದ್ದನ್ನು ಶೇರ್ ಮಾಡಿದ್ದಾರೆ. ನಾನು ತೀರಾ ಕೆಟ್ಟದಾಗಿ ತೋರಿಸಬಾರದು ಎಂದು ಹೇಳಿದ್ದೆ. ರಾಮ್ ಸರ್ ಅವರು ಕ್ಯಾಮೆರಾ ಆ ರೀತಿ ಹಿಡಿದಿದ್ದಕ್ಕೆ ಬೈದರು. ಅಂಥಹ ಶಾಟ್ಸ್ ಪುನಃ ಶೂಟ್ ಮಾಡಬಾರದು ಎಂದು ಎಚ್ಚರಿಸಿದರು ಎಂದು ಜಾನ್ವಿ ಹೇಳಿದ್ದಾರೆ.
ಬುಚ್ಚಿ ಬಾಬು ಸನಾ ನಿರ್ದೇಶನದ ಪೆದ್ದಿ ಸಿನಿಮಾ ರಿಲೀಸ್ ಆಗಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ. ಆದರೆ ಸಿನಿಮಾದಲ್ಲಿ ಬಾಲಿವುಡ್ ಚೆಲುವೆಯನ್ನು ತೋರಿಸಿರುವ ರೀತಿಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ.
ಸಿನಿಮಾಗಳಲ್ಲಿ ಹೀರೋಯಿನ್ ಎಂದರೆ ಕಂಪ್ಲೀಟ್ ಮನೋರಂಜನೆ. ಗ್ಲಾಮರ್, ಎಕ್ಸ್ಪೋಸ್ ಅನ್ನೋ ಕಾನ್ಸೆಪ್ಟ್ ಹಿಂದಿನಿಂದಲೇ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದನ್ನು ಸ್ವಲ್ಪ ಬದಲಾಯಿಸಲಾಗುತ್ತಿದೆ. ಮಹಿಳಾ ಪಾತ್ರಗಳಿಗೆ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಆದರೆ ದೇವರ ಸಿನಿಮಾದಂತೆಯೇ ಜಾನ್ವಿ ಕಪೂರ್ ಅವರು ಈ ಸಿನಿಮಾದಲ್ಲಿಯೂ ಜಸ್ಟ್ ಗ್ಲಾಮರ್ ಗೊಂಬೆಯಾಗಿದ್ದಾರೆ.
ಸಿನಿಮಾದಲ್ಲಿ ಮಸಾಲೆ ತುಂಬೋದಿಕ್ಕಷ್ಟೇ ಹೀರೋಯಿನ್ ಅನ್ನು ನಿರ್ದೇಶಕರು ಬಳಸಿಕೊಂಡಿದ್ದಾರೆ ಎನ್ನುವುದು ಸಿನಿಮಾ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ. ಇದೇ ಕಾರಣದಿಂದ ಜಾನ್ವಿ ಕಪೂರ್ ಪಾತ್ರ ಟ್ರೋಲ್ ಆಗುತ್ತಿದೆ.
ಜೂನ್ 4 ರಂದು ಚಿತ್ರಮಂದಿರಗಳಲ್ಲಿ ಪೆದ್ದಿ ಸಿನಿಮಾ ಬಿಡುಗಡೆಯಾಯಿತು. ಬಿಡುಗಡೆಯಾದಾಗಿನಿಂದ, ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಅಭಿನಯದ ಸಿನಿಮಾದಲ್ಲಿ ಹೀರೋಯಿನ್ ಪಾತ್ರದ ಬಗ್ಗೆ ಟೀಕೆಗಳು ಕೇಳಿ ಬರುತ್ತಿವೆ. ಅನೇಕ ವೀಕ್ಷಕರು ಚಿತ್ರವು ಅವಳನ್ನು ವಸ್ತುನಿಷ್ಠವಾಗಿ ತೋರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಪಾತ್ರವನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಆರೋಪಿಸಿದ್ದಾರೆ.