newsics.com/ನ್ಯೂಸಿಕ್ಸ್
ಕ್ರಿಕೆಟ್ ಲೋಕದ ಅತ್ಯಂತ ರೋಮಾಂಚನಕಾರಿ ಟೂರ್ನಿ ಟಾಟಾ ಐಪಿಎಲ್ 2026 ಈಗ ಭವ್ಯ ಮುಕ್ತಾಯ ಕಂಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಗುಜರಾತ್ ಟೈಟಾನ್ಸ್ (GT) ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತು.
ಮೈದಾನದಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಬ್ಯಾಟಿಂಗ್ ಅಬ್ಬರ ಒಂದೆಡೆಯಾದರೆ, ಇಡೀ ಪಂದ್ಯದುದ್ದಕ್ಕೂ ಗ್ಯಾಲರಿಯಲ್ಲಿ ನಿಂತು ಆರ್‌ಸಿಬಿ ತಂಡವನ್ನು ಅತ್ಯಂತ ಉತ್ಸಾಹದಿಂದ ಹುರಿದುಂಬಿಸುತ್ತಿದ್ದ ವಿರಾಟ್ ಪತ್ನಿ, ಅನುಷ್ಕಾ ಶರ್ಮಾ ಅವರ ಉಪಸ್ಥಿತಿ ಮತ್ತು ಫ್ಯಾಷನ್ ಸೆನ್ಸ್ ಪ್ರೇಕ್ಷಕರ ವಿಶೇಷ ಗಮನ ಸೆಳೆಯಿತು.
ದಂಪತಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನುಷ್ಕಾ ಧರಿಸಿದ್ದ ಆ ಕಂಫರ್ಟಬಲ್ ಕ್ಯಾಶುಯಲ್ ಜೀನ್ಸ್ ಮತ್ತು ಟಾಪ್ ಸೆಟ್‌ನ ಅನೇಕ ಜನರ ಗಮನ ಸೆಳೆಯಿತು. ಆದಾಗ್ಯೂ, ಈ ಸಿಂಪಲ್ ಔಟ್ಫಿಟ್ಗೆ ಸುಮಾರು 25,000 ರೂ. ಎನ್ನಲಾಗಿದ್ದು, ಸದ್ಯ ಇಂಟರ್ನೆಟ್‌ನಲ್ಲಿ ಹೊಸ ಫ್ಯಾಷನ್ ಟ್ರೆಂಡ್ ಸೃಷ್ಟಿಸಿದೆ.
ಐಪಿಎಲ್ 2026 ಫಿನಾಲೆಯಲ್ಲಿ ಅನುಷ್ಕಾ ಶರ್ಮಾ ಉಡುಗೆ!
ಆರ್‌ಸಿಬಿ vs ಜಿಟಿ ಪಂದ್ಯದಲ್ಲಿ, ಅನುಷ್ಕಾ ಶರ್ಮಾ ಕ್ಯಾಶುಯಲ್ ವೈಟ್ ಟಾಪ್ ಮತ್ತು ವೈಡ್-ಲೆಗ್ ಜೀನ್ಸ್‌ನಲ್ಲಿ ಕಂಗೊಳಿಸುತ್ತಿದ್ದರು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ತಮ್ಮ ನೆಚ್ಚಿನ ತಂಡಗಳನ್ನು ಹುರಿದುಂಬಿಸುತ್ತಿದ್ದರು.
ಗೂಗಲ್ ಲೆನ್ಸ್ ಮೂಲಕ ನಡೆಸಿದ ಹುಡುಕಾಟದಲ್ಲಿ ಅವರು ಧರಿಸಿದ ಬಿಳಿ ಟಾಪ್ ಸೆಜಾನೆ ಬ್ರಾಂಡ್ನಿಂದ ಆರಿಸಲಾಗಿದೆ. ಆದಾಗ್ಯೂ, ಅಗಲವಾದ ಲೇಸ್ ಪಟ್ಟಿಗಳು, ಚೌಕಾಕಾರದ ಕಂಠರೇಖೆ (Square Neckline) ಮತ್ತು ಕೆಳಭಾಗದಲ್ಲಿರುವ ಟೈ ಡೀಟೇಲಿಂಗ್ ಅದರ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದು, ಅದಕ್ಕೆ ಬರೋಬ್ಬರಿ 11,500 ರೂ.ಗಳು ಎನ್ನಲಾಗಿದೆ.
ಅವರು ಟಾಪ್ ಮಾತ್ರವಲ್ಲದೆ, ಬಾಟಮ್ ಕೂಡ ಅದೇ ಪ್ರಸಿದ್ಧ ಫ್ರೆಂಚ್ ಬ್ರ್ಯಾಂಡ್ ‘ಸೆಜಾನೆ’ (Sézane) ಕಲೆಕ್ಷನ್‌ನಿಂದಲೇ ಆಯ್ಕೆ ಮಾಡಿಕೊಂಡಿದ್ದರು. ಅಷ್ಟೇ ಸ್ಟೈಲಿಶ್ ಆಗಿರುವ ವೈಡ್ಲೆಗ್ ಪ್ಯಾಂಟ್ ಬೆಲೆ 13,800 ರೂ. ಆಗಿದೆ. ಒಟ್ಟಾರೆಯಾಗಿ ಇಡೀ ಸೆಟ್‌ನ ಮೌಲ್ಯ ಬರೋಬ್ಬರಿ 25,300 ರೂ. ಆಗುತ್ತದೆ.
ಸ್ಟೇಡಿಯಂಗೆ ಆಗಮಿಸಿದ ನಟಿ, ಫ್ರೀ ಹೇರ್ ಮತ್ತು ಉನ್ನತ ಕಂಪನಿಯ ಕೈಗಡಿಯಾರವನ್ನು ಧರಿಸಿದ್ದರು. ಜೊತೆಗೆ ಗುಲಾಬಿ ಬಣ್ಣದ ನ್ಯೂಡ್ ಲಿಪ್ಸ್ಟಿಕ್ ಮತ್ತು ತೆಳುವಾದ ಐಲೈನರ್, ಮೃದುವಾದ ಮೇಕಪ್ಗಳೊಂದಿಗೆ ಪೂರ್ಣಗೊಳಿಸಿದ್ದರು.
ಅನುಷ್ಕಾ ಶರ್ಮಾ ಕೊನೆಯ ಬಾರಿಗೆ 2018 ರಲ್ಲಿ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ನಟಿಸಿದ ‘ ಝೀರೋ ‘ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ‘ಕ್ವಾಲಾ’ ಚಿತ್ರದಲ್ಲಿಯೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಬಕ್ರೀದ್ ಪ್ರಾಣಿ ಬಲಿಗೆ ಮುಸ್ಲಿಂ ಯುವಕ ಬೇಸರಗೊಂಡು ಹಿಂದೂ ಧರ್ಮಕ್ಕೆ ಮತಾಂತರ!