newsics.com/ನ್ಯೂಸಿಕ್ಸ್
ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆ ಅತ್ತೆ – ಮಾವನ ಮೇಲೆ ಅಳಿಯ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಮಿಣಿಕೆ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಅತ್ತೆ-ಮಾವನ ಮೇಲೆ ಕೈ, ಕಾಲು, ತಲೆ, ಭುಜ ಸೇರಿದಂತೆ ಕಂಡ ಕಂಡಲ್ಲಿ ಮಚ್ಚಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ.
ಫರ್ಹಾನ್ ಮುಬಾರಕ್ ಎಂಬಾತ ಈ ಕೃತ್ಯ ಎಸಗಿದ್ದು, ಗಾಯಾಳುಗಳಾದ ಸೈಯದ್ ಅಹ್ಮದ್ (55) ನಸ್ರಿನಾ ಭಾನು (48) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಐದು ವರ್ಷದ ಹಿಂದೆ ಸೈದಾ ನೇಹಾ ಮತ್ತು ಆರೋಪಿ ಫರ್ಹಾನ್ ಮುಬಾರಕ್ ವಿವಾಹವಾಗಿದ್ದರು. ಆದ್ರೆ, ಮದ್ವೆಯಾದ ಮೂರೇ ತಿಂಗಳಿಗೆ ಇಬ್ಬರು ದೂರ ಆಗಿದ್ದರು. ಇತ್ತೀಚಿಗೆ ಅಂದ್ರೆ, ಕಳೆದ ನಾಲ್ಕು ತಿಂಗಳ ಹಿಂದೆ ಪತ್ನಿ ಸೈದಾ ನೇಹಾ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದರು. ಇದರಿಂದ ಕೋಪಗೊಂಡು ಮುಬಾರಕ್ ಅಪಾರ್ಟ್ಮೆಂಟ್ಗೆ ಹೆಂಡತಿಯ ಮೇಲೆ ಅಟ್ಯಾಕ್ ಮಾಡಲು ನುಗ್ಗಿದ್ದಾನೆ. ಅತ್ತೆ-ಮಾವನ ಮೇಲೆ ಮನಸ್ಸೋಇಚ್ಛೆ ಹಲ್ಲೆ ನಡೆಸಿದ್ದಾನೆ. ಸದ್ಯ ಈ ಘಟನೆ ಸಂಬಂಧ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಸ್ಕೇಪ್ ಆಗಿರುವ ಆರೋಪಿ ಮುಬಾರಕ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
2ನೇ ಬಾರಿಗೆ ಕಪ್ ಗೆದ್ದ ಆರ್ ಸಿಬಿ : ಡೊಳ್ಳಿನ ನಾದಕ್ಕೆ ವಿರಾಟ್ ಕೊಹ್ಲಿ ಭರ್ಜರಿ ಸ್ಟೆಪ್ಸ್, ವಿಡಿಯೋ ನೋಡಿ