newsics.com/ನ್ಯೂಸಿಕ್ಸ್
ವಾಷಿಂಗ್ಟನ್: ಇರಾನ್-ಅಮೆರಿಕ ಒಪ್ಪಂದ ವಿಷಯದಲ್ಲಿ ಅನಿಶ್ಚಿತತೆ ಮುಂದುವರಿದಿರುವ ಕಾರಣ, ಅಸಮಾಧಾನ ವ್ಯಕ್ತಪಡಿಸಿರುವ ಟ್ರಂಪ್, ‘ಇರಾನ್ ಎಂದಿಗೂ ಅಣ್ವಸ್ತ್ರ ಅಭಿವೃದ್ಧಿಪಡಿಸಬಾರದು, ಶಾಂತಿ ಒಪ್ಪಂದವು ತಾನು ನಿಗದಿಪಡಿಸುವ ಕೆಂಪು ರೇಖೆಯೊಳಗೆ ಇರಬೇಕು’ ಎಂದು ಹೇಳಿದ್ದಾರೆ.
ಈ ನಡುವೆ, ಇರಾನ್ ಜತೆಗೆ ಅಂತಿಮ ಒಪ್ಪಂದ ಮಾಡಿಕೊಳ್ಳುವ ವಿಷಯವಾಗಿ ಅಮೆರಿಕವು ತೀರಾ ಹತ್ತಿರದಲ್ಲಿದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಇನ್ನೊಂದೆಡೆ ಅಮೆರಿಕದ ಜತೆಗೆ ಅಂತಿಮ ಒಪ್ಪಂದಕ್ಕೆ ನಾವು ಒಪ್ಪಿಕೊಂಡಿಲ್ಲ’ ಎಂದು ಇರಾನ್ ಹೇಳಿದೆ.
ಇಸ್ರೇಲ್ ಪಡೆಗಳು ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ಲೆಬನಾನ್ ಮೇಲೆ ದಾಳಿ ನಡೆಸುವುದನ್ನು ಮುಂದುವರಿಸಿದೆ. ಇಸ್ರೇಲ್ – ಲೆಬನಾನ್ ನಡುವೆ ಏಪ್ರಿಲ್ 17ರಿಂದ ಕದನ ವಿರಾಮ ಜಾರಿಯಲ್ಲಿದೆ. ಆದರೆ ಕದನ ವಿರಾಮ ಉಲ್ಲಂಘಿಸಿ ಇಸ್ರೇಲ್ ಪಡೆ ದಾಳಿ ನಡೆಸುತ್ತಿದೆ ಎಂದು ಲೆಬನಾನ್ ಆರೋಪಿಸಿದೆ. ಉಭಯ ದೇಶಗಳ ನಡುವೆ ನಾಲ್ಕನೆಯ ಸುತ್ತಿನ ನೇರ ಮಾತುಕತೆಯು ಮುಂದಿನ ವಾರ ವಾಷಿಂಗ್ಟನ್‌ನಲ್ಲಿ ನಡೆಯಲಿದೆ.