newsics.com/ನ್ಯೂಸಿಕ್ಸ್
ರಾಜ್ ಬಿ ಶೆಟ್ಟಿ ಅವರು ಕನ್ನಡ ಚಿತ್ರರಂಗದ ಅದ್ಭುತ ಕಲಾವಿದ. ಬಾಲಿವುಡ್ ಅಂಗಳದಲ್ಲಿ ಹೊಸ ಜರ್ನಿ ಶುರು ಮಾಡಿದ್ದಾರೆ. ‘ಬಂದರ್’ ಎಂಬ ವಿಶೇಷ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಇವರು, ‘ಪಿಂಜರಾ’ ಎಂಬ ವಿಶೇಷ ಹಾಡೊಂದಕ್ಕೆ ಭರ್ಜರಿ ಸ್ಟೆಪ್ ಹಾಕಿದ್ದಾರೆ.
ಸದ್ಯ ಈ ಹಾಡು ದೇಶಾದ್ಯಂತ ಸಿನಿ ರಸಿಕರ ಮನಗೆಲ್ಲುತ್ತಿದೆ. ಮ್ಯೂಜಿಕ್ ವೈಬ್‌ಗೆ ಯುವಜನತೆ ಕುಣಿದು ಕುಪ್ಪಳಿಸುತ್ತಿದ್ದಾರೆ.ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶಿಸಿರುವ ‘ಬಂದರ್’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಗ್ಯಾಂಗ್ಸ್ ಆಫ್ ವಸೇಪುರ್’, ‘ದೇವ್ ಡಿ’, ‘ನೋ ಸ್ಮೋಕಿಂಗ್’ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಕಶ್ಯಪ್ ಇದೀಗ ‘ಬಂದರ್’ ಮೂಲಕ ವಿಭಿನ್ನ ಥ್ರಿಲ್ಲರ್ ಸಿನಿಮಾವನ್ನು ಪರಿಚಯಿಸಲಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ‘ಪಿಂಜರಾ’ ಹಾಡು ಪ್ರೇಕ್ಷಕರ ಗಮನ ಸೆಳೆದಿದೆ. ಜೈಲಿನ ಹಿನ್ನೆಲೆಯಲ್ಲೇ ಚಿತ್ರೀಕರಣಗೊಂಡಿರುವ ಈ ಹಾಡಿನ ಕೇಂದ್ರ ಬಿಂದುವೇ ರಾಜ್ ಬಿ. ಶೆಟ್ಟಿ. ಕೈದಿಗಳ ಗುಂಪಿನ ನಡುವೆ ಅವರ ಡ್ಯಾನ್ಸ್ ಇದೀಗ ಎಲ್ಲರ ಗಮನ ಸೆಳೆದಿದೆ.
ಇದೀಗ ರಾಜ್ ಬಿ ಶೆಟ್ಟಿ ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅಮಿತ್ ತ್ರಿವೇದಿ ಅವರ ಮ್ಯೂಸಿಕ್ ಕಿಕ್ ಹಾಗೂ ಸುದೀಪ್ ಶರ್ಮಾ ಬರೆದಿರುವ ಈ ಹಾಡು ಈಗ ಎಲ್ಲರ ಗಮನ ಸೆಳೆದಿದೆ.
ಈ ಹಾಡನ್ನು ಪ್ರಸಿದ್ದ ಹಿಂದಿ ಗಾಯಕ ಅಮೀತ್ ತ್ರಿವೇದಿ ಅವರು ಕಂಪೋಸ್ ಮಾಡಿದ್ದಾರೆ. ಇವರು 2008ರಿಂದ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಂದೆ ಭಾಷೆಯ ಗೀತೆ ಕೇಳುವವರಿಗೆ ಇವರ ಧ್ವನಿ ಬಹಳ ಚಿರಪರಿಚಿತ. ಇನ್ನು ಈ ಪಿಂಜರಾ ಹಾಡಿಗೆ ಸಾಹಿತ್ಯ ಬರೆದವರು ಸುದೀಪ್ ಶರ್ಮಾ. ಇವರ ಸಾಲುಗಳಿಗೆ ಜೀವ ತುಂಬಿದವರು ಅಮೀತ್ ತ್ರಿವೇದಿ.
ಸಂಗೀತ ಮತ್ತು ಸಾಹಿತ್ಯ ಬಹಳ ಕ್ಯಾಚಿಯಾಗಿದೆ. ಹಿಂದಿ ಭಾಷೆಯ ‘ಪಿಂಜರಾ’ ಎಂದರೇ ಕನ್ನಡದಲ್ಲಿ ‘ಪಂಜರ’ ಎಂದು ಅರ್ಥ. ಈ ಹಾಡಿನ ಸಾಹಿತ್ಯದಲ್ಲಿ ಬರುವ ಪ್ರತಿ ಸಾಲುಗಳು ಮನುಷ್ಯ ಹೇಗೆ ಬದುಕಿನ ಪ್ರತಿ ಹಂತದಲ್ಲೂ ತನ್ನನ್ನ ತಾನು ಖೈದಿ ಮಾಡಿಕೊಂಡಿದ್ದಾನೆ ಎಂಬ ಒಳಾರ್ಥಗಳನ್ನ ಒಳಗೊಂಡಿದೆ.
ಜಾತಿ ಪಂಜರ, ರಾಜಕಾರಣಿ ಮತ್ತು ಅವನು ಕೊಡುವ ನೋಟು ಪಂಜರ, ಪ್ರೀತಿ, ಮದುವೆ, ಪ್ರೀತಿಸಿದ ಹುಡುಗಿ, ಇಎಂಐನಲ್ಲಿ ತಗೊಂಡ ಮನೆ, ಕಟ್ಟುವ ಟ್ಯಾಕ್ಸ್, ಮೋಬೈಲ್, ಧರ್ಮ ಸೇರಿದಂತೆ ಪ್ರತಿಯೊಂದು ವಿಚಾರವನ್ನ ಪಂಜರ ಅಂದ್ರೆ ಸೆರೆವಾಸ ಎಂದು ಹೇಳಲಾಗಿದೆ. ಮ್ಯೂಸಿಕ್ ಕಂಪೋಸಿಶನ್ ಸಖತ್ ಆಗಿದ್ದು, ವೀಕ್ಷಕರ ಕಡೆಯಿಂದ ಅದ್ಭುತ ರೆಸ್ಪಾನ್ಸ್ ಬರುತ್ತಿದೆ. ಸಿನಿಮಾ ಪಕ್ಕಾ ಬ್ಲಾಕ್‌ಬಾಸ್ಟರ್ ಹಿಟ್ ಎನ್ನುತ್ತಿದ್ದಾರೆ ಅಭಿಮಾನಿಗಳು, ಅಷ್ಟರ ಮಟ್ಟಿಗೆ ಹಾಡು ಅಲೆ ಸೃಷ್ಟಿಸಿದೆ. ಇದೇ ಹಾಡಿನಲ್ಲಿ ರಾಜ್ ಬಿ ಶೆಟ್ಟಿ ಅವರ ಜೊತೆಗೆ ಕನ್ನಡದ ಮತ್ತೋರ್ವ ಅದ್ಭುತ ಪ್ರತಿಭೆ ನಟ, ನಿರ್ದೇಶಕ ನಟೇಶ್ ಹೆಗ್ಡೆ ಹೆಜ್ಜೆ ಹಾಕಿದ್ದಾರೆ.
https://www.instagram.com/reel/DY4c39qz_Xb/?igsh=MWg3MzNud2x0MngwMA==
https://www.instagram.com/reel/DY4c39qz_Xb/?igsh=MWg3MzNud2x0MngwMA==