newsics.com/ನ್ಯೂಸಿಕ್ಸ್
ಪುಣೆ(ಮಹಾರಾಷ್ಟ್ರ): ರಾಜ್ಯದ ಹಡಪ್ಸರ್, ದಪೋಡಿ ಮತ್ತು ಫುಗೆವಾಡಿ ಎಂಬಲ್ಲಿ ವಿಷಪೂರಿತ ಮದ್ಯ ಸೇವಿಸಿ ಒಂದೇ ದಿನ 17 ಜನರು ಮೃತಪಟ್ಟಿದ್ದಾರೆ. ಹಲವರು ಗಂಭೀರ ಸ್ಥಿತಿಯಲ್ಲಿದ್ದು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಯೋಗೇಶ್ ವಾಂಖೆಡೆ ಎಂಬಾತನನ್ನು ರಾಜ್ಯ ಅಬಕಾರಿ ಇಲಾಖೆ ಬಂಧಿಸಿದೆ. ಈತ ಪಿಂಪ್ರಿ-ಚಿಂಚ್‌ವಾಡ್ ಮತ್ತು ಪುಣೆಯ ಬೇರೆ ಬೇರೆ ಪ್ರದೇಶಗಳಲ್ಲಿ ವಿಷಪೂರಿತ ಮದ್ಯ ಪೂರೈಸಿರುವುದು ಹಾಗೂ ಈ ಸ್ಪಿರಿಟ್ನಿಂದ ತಯಾರಿಸಿದ ಮದ್ಯ ಸೇವಿಸಿಯೇ ಇವರೆಲ್ಲರೂ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸರಣಿ ಸಾವುಗಳ ಬಳಿಕ ಯೋಗೇಶ್ ಸ್ವಯಂಪ್ರೇರಣೆಯಿಂದ ಅಧಿಕಾರಿಗಳಿಗೆ ಶರಣಾಗಿದ್ದು, ವಿಚಾರಣೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈ ಬಗ್ಗೆ ಸೂಕ್ತ ತನಿಖೆಗೆ ಆದೇಶ ಹೊರಡಿಸಿದ್ದಾರೆ. ಪ್ರಕರಣದಲ್ಲಿ ಇತರ ವ್ಯಕ್ತಿಗಳೂ ಕೂಡ ಭಾಗಿಯಾಗಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಹಾಗಾಗಿ ತನಿಖಾ ಸಂಸ್ಥೆಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿವೆ ಎಂದು ಗೊತ್ತಾಗಿದೆ.
ಒಂದೇ ದಿನ 17 ಜನರು ಮೃತಪಟ್ಟಿರುವ ವಿಚಾರ ಹಡಪ್ಸರ್, ದಪೋಡಿ ಮತ್ತು ಫುಗೆವಾಡಿಯಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಕ್ರಮ, ವಿಷಕಾರಿ ದೇಶಿ ಮದ್ಯವೇ ಈ ಎಲ್ಲಾ ಸಾವುಗಳಿಗೆ ಕಾರಣ. ಈ ಪ್ರದೇಶದಲ್ಲಿ ಅಕ್ರಮ ದೇಶಿ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ. ಈ ಬಗ್ಗೆ ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಮೃತಪಟ್ಟ ಎಂಟು ಜನರಲ್ಲಿ ಐದು ಜನರು ಬೇರೆ ಬೇರೆ ಕಾರಣಗಳಿಂದ ಸಾವನ್ನಪ್ಪಿರುವ ಮಾಹಿತಿ ಇದೆ. ಸಾವಿಗೂ ಮುನ್ನ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದರ ಬಗ್ಗೆ ವೃದ್ಯರು ದೃಢಪಡಿಸಿರುವುದಾಗಿ ಪೊಲೀಸರು ಹೇಳಿಕೊಂಡಿದ್ದಾರೆ.
ಈ ಸಾವುಗಳಿಗೆ ನಿಖರ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ. ತನಿಖೆ ನಡೆಯುತ್ತಿದೆ. ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ವಿಷಕಾರಿ ಮದ್ಯ ಸೇವಿಸಿದ್ದಾರೆಯೇ ಎಂದು ನಿರ್ಧರಿಸಲು ವೈದ್ಯಕೀಯ ವರದಿಗಳಿಗಾಗಿ ಕಾಯಲಾಗುತ್ತಿದೆ.
#WATCH | Pune, Maharashtra: On illicit liquor case, NCP-SCP MLA Rohit Pawar says, "… In the last two or three days, almost eight people have died from bad-quality, illegal liquor. Police claim these deaths are due to heart attacks or other reasons, which seems like an attempt… pic.twitter.com/ZNlacEZoqg
— ANI (@ANI) May 29, 2026
ನೂತನ ಸಿಎಂ ಪದಗ್ರಹಣಕ್ಕೆ ಭರ್ಜರಿ ಸಿದ್ಧತೆ : ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮೇಲೆ ಪ್ರಮಾಣ ವಚನ ಸ್ವೀಕಾರ!
Siddaramaiah lobby ಸಿದ್ದು ಸಂಪುಟದ 20 ಸಚಿವರಿಗೆ ಕೊಕ್! ತಮ್ಮವರಿಗೆ ಸ್ಥಾನ ಕೊಡಿಸಲು ಸಿದ್ದರಾಮಯ್ಯ ಕಸರತ್ತು
DK’s Oath ಡಿಕೆ ಪ್ರಮಾಣವಚನಕ್ಕೆ ಡೇಟ್ ಫಿಕ್ಸ್: ಯಾರೆಲ್ಲ ಸಚಿವರಾಗ್ತಾರೆ?