newsics.com
ನ್ಯೂಸಿಕ್ಸ್.ಕಾಂ
ಈ ದಿನ- ನಿತ್ಯ ಪಂಚಾಂಗ
24-08-2024, ಶನಿವಾರ
ದಿನ ವಿಶೇಷ:
* ಬಲರಾಮ ಜಯಂತಿ
* ಪ.ಪ. ಟೇಂಬೆಸ್ವಾಮಿ ಜಯಂತಿ
***
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ- ದಕ್ಷಿಣಾಯನ
ದಿನಾಂಕ – 24/08/2024
ತಿಂಗಳು – ಆಗಸ್ಟ್
ಬಣ್ಣ – ನೀಲಿ/ಕಪ್ಪು
ವಾರ – ಶನಿವಾರ
ತಿಥಿ – ಪಂಚಮಿ 07:51:18
ತಿಥಿ – ಷಷ್ಠಿ 29:30:06* (Leap)
ಪಕ್ಷ – ಕೃಷ್ಣ
ನಕ್ಷತ್ರ – ಅಶ್ವಿನಿ 18:04:43
ಯೋಗ – ವೃದ್ಧಿ 27:05:21*
ಕರಣ – ತೈತುಲ 07:51:18
ಕರಣ – ಗರಜ 18:37:12
ಕರಣ – ವಾಣಿಜ 29:30:06*
ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಭಾದ್ರಪದ
ಚಂದ್ರ ರಾಶಿ ಮೇಷ
ಸೂರ್ಯ ರಾಶಿ ಸಿಂಹ
ಋತು- ವರ್ಷ
ಸೂರ್ಯೋದಯ. 06:09:18
ಸೂರ್ಯಾಸ್ತ 18:34:15
ಹಗಲಿನ ಅವಧಿ 12:24:56
ರಾತ್ರಿಯ ಅವಧಿ 11:35:06
ಚಂದ್ರಾಸ್ತ 10:21:10
ಚಂದ್ರೋದಯ 22:15:49
ರಾಹು ಕಾಲ 09:16 – 10:49 ಅಶುಭ
ಯಮಗಂಡ ಕಾಲ 13:55 – 15:28 ಅಶುಭ
ಗುಳಿಕ ಕಾಲ 06:09 – 07:42
ಅಭಿಜಿತ್ 11:57 – 12:47 ಶುಭ
ದುರ್ಮುಹೂರ್ತ 07:49 – 08:38 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಮನುಷ್ಯರ ಅತಿ ದೊಡ್ಡ ಸಂಪತ್ತು ಎಂದರೆ ಅಲ್ಪದರಲ್ಲೇ ತೃಪ್ತಿಯಾಗಿ ಬದುಕುವುದು. ಏಕೆಂದರೆ, ಅಲ್ಪಕ್ಕೆ ಕೊರತೆ ಎಂಬುದೇ ಇರುವುದಿಲ್ಲ.
– ಲುಕ್ರೀಶಸ್
***
ಈ ದಿನದ ಸುಭಾಷಿತ
ಸ್ವಾಧೀನಂ ಸಮತಿಕ್ರಮ್ಯ
ಮಾತರಂ ಪಿತರಂ ಗುರುಮ್ |
ಅಸ್ವಾಧೀನಂ ಕಥಂ ದೈವಂ
ಪ್ರಕಾರೈರಭಿರಾಧ್ಯತೇ ॥
(ರಾಮಾಯಣ)
ತಾಯಿ, ತಂದೆ, ಗುರು ಈ ಮೂವರೂ ತನ್ನ ಅಧೀನದಲ್ಲಿ ಇರುವ ದೇವರುಗಳು, ಇವರನ್ನು ಉಲ್ಲಂಘಿಸಿ ಹತೋಟಿಯಲ್ಲಿರದ ದೇವರನ್ನು ಆರಾಧಿಸುವ ಪರಿ ಯಾವುದು?
ದೇವರ ಪರಿಕಲ್ಪನೆ ಬದುಕಿನಲ್ಲಿ ವಿಶ್ವಾಸವನ್ನು ತುಂಬುತ್ತದೆ. ಆದ್ದರಿಂದ ಎಲ್ಲರೂ ದೇವರನ್ನು ನಂಬುತ್ತಾರೆ ಹಾಗೂ ಶ್ರದ್ಧಾಭಕ್ತಿಯಿಂದ ಆರಾಧಿಸುತ್ತಾರೆ.
***
ಈ ದಿನದ ಇತಿಹಾಸ
* ಆಗಸ್ಟ್ 24, 1608 ರಂದು ಮೊದಲ ಇಂಗ್ಲಿಷ್ ರಾಯಭಾರಿ ಸೂರತ್ ಗೆ ಆಗಮಿಸಿದರು.
* ಆಗಸ್ಟ್ 24, 1690 ರಂದು ಜಾಬ್ ಚಾರ್ನಾಕ ಅವರು 1690ರಲ್ಲಿ ಕೋಲ್ಕತಾ (ಇಂದಿನ ಕಲ್ಕತ್ತಾ) ನಗರವನ್ನು ಸ್ಥಾಪಿಸಿದರು. ಹಾಗಾಗಿ ಈ ದಿನವನ್ನು ಕೋಲ್ಕತಾ ದಿನ ಎಂದು ಘೋಷಿಸಲಾಯಿತು. 2000ದಲ್ಲಿ ಇದೇ ದಿನ ಕೋಲ್ಕತಾ ಮುನಿಸಿಪಲ್ ಕಾರ್ಪೊರೇಷನ್ 310ನೇ ಕೋಲ್ಕತಾ ಜನ್ಮದಿನವನ್ನು ಆಚರಿಸಿತು. ಈ ಸಂದರ್ಭದಲ್ಲಿ ಕೋಲ್ಕತಾ ನಗರ ಕುರಿತ ವೆಬ್ಸೈಟ್ ಬಿಡುಗಡೆ ಮಾಡಲಾಯಿತು.
* ಆಗಸ್ಟ್ 24, 1891 ರಂದು ಚಲನಚಿತ್ರ ಕ್ಯಾಮೆರಾ ಕಂಡುಹಿಡಿದ ಥಾಮಸ್ ಆಲ್ವ ಎಡಿಸನ್ ಗೆ ಇದಕ್ಕೆ ಸಂಬಂಧಿಸಿದ ಹಕ್ಕುಸ್ವಾಮ್ಯ ನೀಡಲಾಯಿತು.
* ಆಗಸ್ಟ್ 24, 1968 ರಂದು ಖ್ಯಾತ ಭೂಗರ್ಭ ಶಾಸ್ತ್ರಜ್ಞ ರಾಧಾ ಕಮಲ್ ಮುಖರ್ಜಿ ನಿಧನರಾದರು.
* ಆಗಸ್ಟ್ 24, 1969 ರಂದು ವರಾಹಗಿರಿ ವೆಂಕಟಗಿರಿ ಅವರು ಭಾರತದ ನಾಲ್ಕನೆಯ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.