Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Supreme Court ಬೆಟ್ಟಿಂಗ್‌, ಗ್ಯಾಂಬ್ಲಿಂಗ್‌ ಆಡುವುದು ಮೂಲಭೂತ ಹಕ್ಕಲ್ಲ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ದೇಶಪ್ರಮುಖ

Supreme Court ಬೆಟ್ಟಿಂಗ್‌, ಗ್ಯಾಂಬ್ಲಿಂಗ್‌ ಆಡುವುದು ಮೂಲಭೂತ ಹಕ್ಕಲ್ಲ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Share
2 Min Read
SHARE

newsics.com/ನ್ಯೂಸಿಕ್ಸ್

ನವದೆಹಲಿ: ರಮ್ಮಿ ಮತ್ತು ಪೋಕರ್‌ನಂತಹ ಕೌಶಲ್ಯಯುತ ಆಟಗಳು ಸೇರಿದಂತೆ ಪಣಕ್ಕಾಗಿ ಆಡುವ ಆನ್‌ಲೈನ್ ಆಟಗಳನ್ನು ನಿಷೇಧಿಸುವ ತಮಿಳುನಾಡು ಮತ್ತು ಕರ್ನಾಟಕ ಸರ್ಕಾರದ ಕ್ರಮಗಳನ್ನು ಸುಪ್ರೀಂ ಕೋರ್ಟ್​ ಸರಿ ಎಂದು ಹೇಳಿದೆ. ಈ ರಾಜ್ಯಗಳು ಜಾರಿಗೆ ತಂದಿರುವ ಕಾನೂನುಗಳ ಸಿಂಧುತ್ವವನ್ನು ಸುಪ್ರೀಂ ಕೋರ್ಟ್  ಎತ್ತಿಹಿಡಿದಿದೆ.

ಜೂಜು ಮತ್ತು ಬೆಟ್ಟಿಂಗ್‌ ಆಧಾರಿತ ಆಟಗಳನ್ನು ನಿರ್ಬಂಧಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ಸ್ಪಷ್ಟಪಡಿಸಿದೆ.

ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ಹಣ ಅಥವಾ ಬಾಜಿ ಕಟ್ಟಿ ಆಡುವ ಆನ್‌ಲೈನ್‌ ರಮ್ಮಿ ಮತ್ತು ಪೋಕರ್‌ ಗೇಮ್‌ಗಳನ್ನು ನಿಷೇಧಿಸಿ ಕಾನೂನು ತಿದ್ದುಪಡಿ ತಂದಿತ್ತು. ಆದರೆ ಇದನ್ನು ಹೈಕೋರ್ಟ್‌ಗಳು ರದ್ದು ಮಾಡಿದ್ದವು.

ಇದೀಗ ನ್ಯಾ.ಜೆ.ಪರ್ದಿವಾಲಾ ಮತ್ತು ನ್ಯಾ.ಆರ್‌. ಮಹದೇವನ್‌ ಅವರಿದ್ದ ಪೀಠವು, ಸಾರ್ವಜನಿಕರ ಜೀವನದ ಮೇಲೆ ಪರಿಣಾಮ ಬೀರುವಂತಿದ್ದರೆ ಸ್ಕಿಲ್‌ ಗೇಮ್‌ಗಳ ಮೇಲೂ ಸರ್ಕಾರ ನಿರ್ಬಂಧ ವಿಧಿಸಬಹುದು. ಪೋಕರ್‌ ಅಥವಾ ರಮ್ಮಿ ಸ್ಕಿಲ್‌ ಗೇಮ್‌ಗಳಾದರೂ ಬಾಜಿ ಕಟ್ಟಿ ಹಾಡುವ ಇಂಥ ಆನ್‌ಲೈನ್‌ ಆಟಗಳಿಗೆ ನಿರ್ಬಂಧ ಹೇರುವ ಅಧಿಕಾರ ರಾಜ್ಯಗಳಿಗಿದೆ ಎನ್ನುವ ಮೂಲಕ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ವಜಾ ಮಾಡಿದೆ.

ಸಂವಿಧಾನದ 19ನೇ ಪರಿಚ್ಛೇದದಡಿ ಕೌಶಲ್ಯ(ಸ್ಕಿಲ್‌)ದ ಆಟಕ್ಕೆ ರಕ್ಷಣೆಯಿದೆ. ಆದರೆ, ಬೆಟ್ಟಿಂಗ್ ಹಾಗೂ ಜೂಜನ್ನು ಒಳಗೊಂಡಿದ್ದರೆ ಇಂಥ ಆಟಕ್ಕೂ ಸಾಂವಿಧಾನಿಕ ರಕ್ಷಣೆ ಇರುವುದಿಲ್ಲ. ಇವು ಮೂಲಭೂತ ಹಕ್ಕಿನ ವ್ಯಾಪ್ತಿಗೆ ಬರುವುದಿಲ್ಲ. ಹೆಚ್ಚುತ್ತಿರುವ ವ್ಯಸನ, ಹಣಕಾಸು ನಷ್ಟಗಳು ಹಾಗೂ ಆತ್ಮಹತ್ಯೆ ಪ್ರಕರಣಗಳಿಂದಾಗಿ ಆನ್‌ಲೈನ್‌ ಮನಿ ಗೇಮ್‌ಗಳು ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿಚಾರಗಳಾಗಿ ಪರಿಣಮಿಸುತ್ತಿವೆ. ಈ ರೀತಿಯ ಗೇಮ್‌ಗಳು ಸಾರ್ವಜನಿಕರ ನೆಮ್ಮದಿ ಕೆಡಿಸುತ್ತಿವೆ ಎಂದು ಪೀಠ ಹೇಳಿದೆ.

ಆಗಸ್ಟ್ 2023 ರಲ್ಲಿ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇರಿಸಲಾದ ಬೆಟ್ಟಿಂಗ್‌ಗಳ ಪೂರ್ಣ ಮೌಲ್ಯದ ಮೇಲೆ ಶೇ28ರಷ್ಟು ಜಿಎಸ್‌ಟಿ ವಿಧಿಸಲಾಗುವುದು ಎಂದು ಜಿಎಸ್‌ಟಿ ಕೌನ್ಸಿಲ್ ಸ್ಪಷ್ಟಪಡಿಸಿತ್ತು. ಸ್ಪಷ್ಟೀಕರಣದ ನಂತರ ಗೇಮಿಂಗ್ ಕಂಪನಿಗಳು ಅಂತಹ ಬೇಡಿಕೆಗಳ ವಿರುದ್ಧ ವಿವಿಧ ಹೈಕೋರ್ಟ್‌ಗಳಿಗೆ ಅರ್ಜಿ ಸಲ್ಲಿಸಿದ್ದವು. ಕಂದಾಯ ಅಧಿಕಾರಿಗಳ ಹಕ್ಕುಗಳನ್ನು ಪ್ರಶ್ನೆ ಮಾಡಿದ್ದವು.

ಆನ್‌ಲೈನ್‌ ಗೇಮಿಂಗ್‌ ಪ್ಲಾಟ್‌ಫಾರ್ಮ್‌ಗಳು ಕೇವಲ ಮಧ್ಯವರ್ತಿಗಳಲ್ಲ, ಬದಲಾಗಿ ಅವುಗಳನ್ನು ಜಿಎಸ್ಟಿ ವ್ಯಾಪ್ತಿಗೆ ಒಳಪಡುವ ಪೂರೈಕೆದಾರರು ಎಂದು ಪರಿಗಣಿಸಬೇಕು ಎಂದು ಹೇಳಿದೆ.

ನೂತನ ಸಚಿವ ಸಂಪುಟದಲ್ಲಿ ಯಾರಿಗೆಲ್ಲ ಕೊಕ್: ಕಿರಿಯ ಶಾಸಕರಿಗೆ ಸಿಗುತ್ತಾ ಭರ್ಜರಿ ಗಿಫ್ಟ್?

TAGGED:Bettinggambling is not a fundamental right: Supreme Court important verdict
Share This Article
Facebook Twitter Copy Link Print
Previous Article ನೂತನ ಸಚಿವ ಸಂಪುಟದಲ್ಲಿ ಯಾರಿಗೆಲ್ಲ ಕೊಕ್: ಕಿರಿಯ ಶಾಸಕರಿಗೆ ಸಿಗುತ್ತಾ ಭರ್ಜರಿ ಗಿಫ್ಟ್?
Next Article Gold-Silver Rate ಬೆಳ್ಳಿ-ಬಂಗಾರದ ಬೆಲೆ ಭಾರೀ ಇಳಿಕೆ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?