newsics.com
ನೇಪಾಳ: ನದಿಗೆ ಬಸ್ ಬಿದ್ದು ಭಾರೀ ದುರಂತ ಸಂಭವಿಸಿದೆ. ಘಟನೆಯಲ್ಲಿ 8 ವರ್ಷದ ಮಗು ಸೇರಿ ಒಟ್ಟು 27 ಜನರು ದುರ್ಮರಣಕ್ಕೀಡಾಗಿದ್ದಾರೆ.
43 ಜನರನ್ನು ಹೊತ್ತು ಮಹಾರಾಷ್ಟ್ರದಿಂದ ಹೊರಟಿದ್ದ ಬಸ್ ಉತ್ತರಪ್ರದೇಶದ ಮಹರಾಜಗಂಜ್ ಜಿಲ್ಲೆಯ 130 ಕಿಲೋಮೀಟರ್ ದೂರದಲ್ಲಿ ಬಸ್ ಮರ್ಷ್ಯಾಂಗಡಿ ನದಿಗೆ ಉರುಳಿದೆ.
ಈ ಭೀಕರ ಅಪಘಾತದಲ್ಲಿ ಡ್ರೈವರ್ ಕಂಡಕ್ಟರ್ ಹಾಗೂ 8 ವರ್ಷದ ಮಗು ಸೇರಿ ಒಟ್ಟು 27 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದು, ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೋಖರಾದಿಂದ ಕಠ್ಮಂಡುವಿಗೆ ಹೋಗುವ ಹಾದಿಯಲ್ಲಿ ಬಸ್ ಆಯತಪ್ಪಿ ನದಿಗೆ ಬಿದ್ದಿದೆ. ಉತ್ತರಪ್ರದೇಶದ ರಕ್ಷಣಾ ತಂಡ ಹೇಳುವ ಪ್ರಕಾರ, ಒಟ್ಟು 43 ಮಂದಿ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರಲ್ಲಿ 17 ಪುರುಷರು ಹಾಗೂ 26 ಮಹಿಳೆಯರು ಇದ್ದರು. ಈಗಾಗಲೇ ರಕ್ಷಣಾ ಪಡೆ 41 ಜನರನ್ನು ನದಿಯಿಂದ ಮೇಲಕ್ಕೆ ತಂದಿದ್ದು ಇಬ್ಬರು ಇನ್ನೂ ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ.
ನದಿಗೆ ಉರುಳಿದ ಬಸ್: ಭೀಕರ ದುರಂತದಲ್ಲಿ ಮೃತರ ಸಂಖ್ಯೆ 27ಕ್ಕೇರಿಕೆ, ಇಬ್ಬರ ನಾಪತ್ತೆ