newsics.com
ತಿರುಪತಿ: ತಿಮ್ಮಪ್ಪನ ದರ್ಶನಕ್ಕೆ ಪುಣೆಯ ಕುಟುಂಬವೊಂದು ಬರೋಬ್ಬರಿ 25 ಕೇಜಿ ಚಿನ್ನಭರಣವನ್ನು ಧರಿಸಿ ಆಗಮಿಸಿದ್ದು, ಅಲ್ಲಿದ್ದ ಭಕ್ತರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಒಂದು ಗ್ರಾಂ ಬಂಗಾರದ ಇಂದಿನ ದರ 7265 ರೂಪಾಯಿಗಳಿವೆ. ಹೀಗಿರುವಾಗ ಈ ಜೋಡಿ 25 ಕೇಜಿ ಬಂಗಾರ ಧರಿಸಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಇವರು ದೇವಸ್ಥಾನದ ಆವರಣದಲ್ಲಿ ಫೋಟೋಗೆ ಫೋಸ್ ನೀಡ್ತಿರುವ, ಹಾಗೂ ಅಲ್ಲಿದ್ದ ಭಕ್ತರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುದ್ದಿಸಂಸ್ಥೆ ಪಿಟಿಐ ಇವರ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು ಸಖತ್ ವೈರಲ್ ಆಗಿದೆ.