newsics.com
ಸ್ಯಾಂಡಲ್ ವುಡ್ ನ ಯುವರಾಣಿ ಸಪ್ತಮಿ ಗೌಡ ಕುದುರೆ ಪಳಗಿಸೋದನ್ನು ಕಲಿತಿದ್ದಾರೆ. ಕಾಂತಾರಾ ಬೆಡಗಿ, ಬಿಂದಾಸ್ ಆಗಿ ಕುದುರೆ ಸವಾರಿ ಮಾಡ್ತಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ.
ಕಾಂತಾರ ಬೆಡಗಿ ಸಪ್ತಮಿ ಗೌಡ ಕುದುರೆ ಸವಾರಿ ಕಲಿತಾಗಿದೆ. ಕುದುರೆ ಸವಾರಿ ಮಾಡಿದ ಸುಂದರ ವಿಡಿಯೋವನ್ನು ಸಪ್ತಮಿ ಗೌಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಹರ್ ಹರ್ ಮಹಾದೇವಿ ಎಂದು ಶೀರ್ಷಿಕೆ ಹಾಕಿರುವ ಸಪ್ತಮಿ ಗೌಡ, ಕ್ಯಾರೆಟ್, ಹಾರ್ಸ್ ರೇಸಿಂಗ್ ಇಮೋಜಿ ಹಾಗೂ ದೃಷ್ಟಿ ಬೀಳದ ಕಣ್ಣಿನ ಇಮೋಜಿಯನ್ನು ಹಾಕಿದ್ದಾರೆ. ಸಪ್ತಮಿ ಗೌಡ, ಕುದುರೆ ಸವಾರಿ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಬಹುತೇಕ ಅಭಿಮಾನಿಗಳು ಹಾರ್ಟ್ ಇಮೋಜಿ ಪೋಸ್ಟ್ ಮಾಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.